Advertisement
ರಾಷ್ಟ್ರೀಯ

‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಿ | ಹಿಂದೂ ದೇವತೆಗಳ ಅಪಹಾಸ್ಯವನ್ನು ಸಹಿಸುವುದಿಲ್ಲ | ಹಿಂದೂ ಜನಜಾಗೃತಿ ಸಮಿತಿಯ ಎಚ್ಚರಿಕೆ |

Share

ನಟ ಅಜಯ ದೇವಗನ ಅಭಿನಯದ ‘ಥ್ಯಾಂಕ್ ಗಾಡ್’ ಚಲನಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

Advertisement
Advertisement
Advertisement

‘ಥ್ಯಾಂಕ್ ಗಾಡ್’(Thank God) ಚಲನಚಿತ್ರದಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ‘ಯಮದೇವತೆ’ಯನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ. ಅವರನ್ನು ನಿಷ್ಪ್ರಯೋಜಕ ಹಾಸ್ಯದ ಮಾತುಗಳನ್ನಾಡುವಂತೆ ತೋರಿಸಲಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಚಿತ್ರಗುಪ್ತ ಮತ್ತು ಯಮ ದೇವರ ಅಪಹಾಸ್ಯವನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಟ್ರೇಲರ್ ಬಿಡುಗಡೆ ಆಗುವವರೆಗೂ ಸೆನ್ಸಾರ್ ಮಂಡಳಿ ನಿದ್ರೆ ಮಾಡುತ್ತಿತ್ತೇ ? ಸೆನ್ಸಾರ್ ಮಂಡಳಿ ಈ ಚಲನಚಿತ್ರಕ್ಕೆ ಸರ್ಟಿಫಿಕೇಟ್ ನೀಡಬಾರದು, ಇಲ್ಲದಿದ್ದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನು ನೀಡುತ್ತಾ ರಾಜ್ಯ ಹಾಗೂ ಕೇಂದ್ರ ಗೃಹಸಚಿವಾಲಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

Advertisement

ಈ ಚಲನಚಿತ್ರದಲ್ಲಿ ಹಿಂದೂಗಳ ಧಾರ್ಮಿಕ ಪರಿಕಲ್ಪನೆಗಳು ಮತ್ತು ದೇವತೆಗಳನ್ನು ಅಪಹಾಸ್ಯ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ. ಈ ಚಲನಚಿತ್ರದ ಕೆಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಪ್ರತ್ಯಕ್ಷದಲ್ಲಿ ಪೂರ್ಣ ಚಲನಚಿತ್ರದಲ್ಲಿ ಇನ್ನಷ್ಟು ಆಕ್ಷೇಪಾರ್ಹ ಸಂಭಾಷಣೆಗಳನ್ನು ಹೊಂದಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಈ ಚಲನಚಿತ್ರದಲ್ಲಿ ಅಜಯ ದೇವಗನನನ್ನು ಸೂಟು-ಬೂಟುಗಳನ್ನು ಧರಿಸಿ ಆಧುನಿಕ ‘ಚಿತ್ರಗುಪ್ತ’ನಾಗಿ ತೋರಿಸಿ ಯಮದೂತನನ್ನು ’ವೈ.ಡಿ.’ ಎಂದು ಅಪಭ್ರಂಶ ಮಾಡಿದ ಹೆಸರಿನಲ್ಲಿ ಕರೆಯಲಾಗಿದೆ. ಹಿಂದೂ ಧರ್ಮ ಶಾಸ್ತ್ರಕ್ಕನುಸಾರ, ಒಬ್ಬ ವ್ಯಕ್ತಿಯು ಮೃತಪಟ್ಟಾಗ ಚಿತ್ರಗುಪ್ತನು ಅವನ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುತ್ತಾನೆ. ಹೀಗಿರುವಾಗ ಈ ಪರಿಕಲ್ಪನೆಯನ್ನು ಛಿದ್ರ ಮಾಡಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮೃತಪಟ್ಟಿದ್ದರೂ ಆತನಿಗೆ ಚಿತ್ರಗುಪ್ತನ ಆಸ್ಥಾನಕ್ಕೆ ಕರೆದೊಯ್ಯುವುದನ್ನು ತೋರಿಸಲಾಗಿದೆ. ಅಲ್ಲಿ ಚಿತ್ರಗುಪ್ತನು ಅವನೊಂದಿಗೆ ‘ಗೇಮ ಆಫ್ ಲೈಫ್’ ಆಡುವುದನ್ನು ತೋರಿಸಲಾಗಿದೆ. ಒಟ್ಟಿನಲ್ಲಿ ಹಿಂದೂ ಧರ್ಮದಲ್ಲಿನ ಒಂದು ಉದಾತ್ತ ಪರಿಕಲ್ಪನೆಯನ್ನು ‘ಕಾಮೆಡಿ’ದ ಹೆಸರಿನಲ್ಲಿ ತಪ್ಪಾಗಿ ಮತ್ತು ಆಕ್ಷೇಪಾರ್ಹವಾಗಿ ತೋರಿಸಿ ಅಪಹಾಸ್ಯ ಮಾಡಲಾಗಿದೆ.

Advertisement

ಈ ಹಿಂದೆಯೂ, ‘ಪಿಕೆ’, ‘ಓ ಮೈ ಗಾಡ್’, ‘ಸಿಂಗಮ್ ರಿಟರ್ನ್ಸ್’, ’ತಾಂಡವ್’ ನಂತಹ ಅನೇಕ ಚಲನಚಿತ್ರಗಳು ಮತ್ತು ವೆಬ್ ಸಿರೀಸ್ ಗಳು ಹಿಂದೂ ಧರ್ಮ, ದೇವತೆಗಳು, ಸಾಧುಸಂತರನ್ನು ಗುರಿಯಾಗಿಸಿಕೊಂಡಿವೆ. ಹಿಂದೂಗಳ ಆಚಾರ-ವಿಚಾರಗಳ ಬಗ್ಗೆ ಹಾಸ್ಯ ಚಟಾಕಿ ಹಾರಿಸಿ ಅವರ ಬಗ್ಗೆ ದ್ವೇಷ ಹುಟ್ಟಿಸುತ್ತಾರೆ. ಇದನ್ನೆಲ್ಲ ತಡೆಯಲು ಕೇಂದ್ರ ಸರಕಾರ ಕೂಡಲೇ ಕಠಿಣ ಕಾನೂನು ರೂಪಿಸಬೇಕಿದೆ. ಅಲ್ಲದೇ ಸೆನ್ಸಾರ್ ಮಂಡಳಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಧಾರ್ಮಿಕ ಪ್ರತಿನಿಧಿಗಳು ಇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

12 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

18 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

18 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

18 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

19 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

1 day ago