Advertisement
MIRROR FOCUS

70 ವರ್ಷಗಳ ಬಳಿಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದ ಚೀತಾ | “ಪ್ರಾಜೆಕ್ಟ್‌ ಚೀತಾ ” ತಂಡದಲ್ಲಿ ಪುತ್ತೂರಿನ ಮುಳಿಯದ ಡಾ.ಸನತ್‌ ಕುಮಾರ್ |

Share

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಆಫ್ರಿಕಾದ ನಮೀಬಿಯಾದಿಂದ ತರಲಾದ ಎಂಟು ಚಿರತೆಗಳನ್ನು ತರಲಾಗಿದೆ. ಭಾರತಕ್ಕೆ ಈ ತಳಿಯ ವನ್ಯಪ್ರಾಣಿಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಶನಿವಾರ ಇವುಗಳನ್ನು ಬಿಡುಗಡೆ ಮಾಡಿದರು. ಚೀತಾ ತರುವ ತಂಡದಲ್ಲಿನ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಕುಟುಂಬದ ಡಾ.ಸನತ್‌ ಕುಮಾರ್‌ ಮುಳಿಯ ಇದ್ದರು. 

ಭಾರತದಲ್ಲಿ 1952 ರಲ್ಲಿ ಚೀತಾಗಳು ಅಳಿದುಹೋಗಿದೆ ಎಂದು ಪರಿಗಣಿಸಲಾಗಿತ್ತು. ಇದೀಗ ಮತ್ತೆ ಆಗಮಿಸಿದ ಈ ಚೀತಾ ದೇಶದಾದ್ಯಂತ ಕುತೂಹಲ ಹಾಗೂ ಸಂಭ್ರಮಕ್ಕೆ ಕಾರಣವಾಗಿತ್ತು. ಇದಕ್ಕಾಗಿ ಪ್ರಧಾನಿಗಳ 72 ನೇ ಜನ್ಮದಿನದ ಆಚರಣೆಯ ಸಂದರ್ಭದ ನೆನಪಾಗಿದೆ.ಈ ಚೀತಾಗಳ ಮರು ಪರಿಚಯದ ಮೂಲಕ ಪ್ರವಾಸಿಗರನ್ನು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

“ಪ್ರಾಜೆಕ್ಟ್‌ ಚೀತಾ” ಹೆಸರಿನ ಈ ಯೋಜನೆಯಲ್ಲಿ ಎಂಟು ಚೀತಾಗಳಲ್ಲಿ ಐದು ಹೆಣ್ಣು, 2 ರಿಂದ 5 ವರ್ಷ ವಯಸ್ಸಿನ ನಡುವೆ, ಮತ್ತು ಮೂರು 4.5 ರಿಂದ 5.5 ವರ್ಷದೊಳಗಿನ ಗಂಡುಗಳಾಗಿವೆ. ಬೋಯಿಂಗ್ 747-400 ವಿಮಾನ ಶನಿವಾರ ಬೆಳಿಗ್ಗೆ 7:55 ರ ಸುಮಾರಿಗೆ ಗ್ವಾಲಿಯರ್ನಲ್ಲಿ ಇಳಿದ ನಂತರ, ಚೀತಾಗಳನ್ನು ವಾಯುಪಡೆಯ ಹೆಲಿಕಾಪ್ಟರ್ ಗಳಲ್ಲಿ ರಾಷ್ಟ್ರೀಯ ಉದ್ಯಾನವನಕ್ಕೆ ಕರೆದೊಯ್ಯಲಾಯಿತು. ಚೀತಾ ತರುವ ತಂಡದಲ್ಲಿ ಎಂಟು ಜನ ತಜ್ಞರು ತಂಡದಲ್ಲಿದ್ದರು.  ಅಧಿಕಾರಿಗಳು ಹಾಗೂ ಪಶುವೈದ್ಯರು, ವನ್ಯಜೀವಿ ತಜ್ಞರು ಇದ್ದರು. ಒಟ್ಟು ಮೂವರು ವನ್ಯಜೀವಿ ತಜ್ಞರು ಹಾಗೂ ಪಶುವೈದ್ಯರು ಇದ್ದರು.

ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್  ಅಗರ್‌ವಾಲ್‌ ಈ ಯೋಜನೆಯ ಮುಖ್ಯಸ್ಥರಾಗಿದ್ದರು. ಯದುವೇಂದ್ರ ದೇವ್‌, ವಿಕ್ರಂ ಸಿಂಗ್‌ ಮೊದಲಾದ ತಜ್ಷರು ಹಾಗೂ ವನ್ಯಜೀವಿ ತಜ್ಞ ಹಾಗೂ ಪಶುವೈದ್ಯರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯದ ದಿ.ಕೇಶವ ಭಟ್‌ ಹಾಗೂ ಉಷಾ ಮುಳಿಯ ಅವರ ಪುತ್ರ ಡಾ.ಸನತ್‌ ಕುಮಾರ್‌ ಮುಳಿಯ ಭಾಗವಹಿಸಿದ್ದರು. 

ಶುಕ್ರವಾರ ನಮೀಬಿಯಾದ ರಾಜಧಾನಿ ವಿಂಡ್‌ಹೋಕ್‌ನ ಉತ್ತರಕ್ಕೆ  ರಸ್ತೆಯ ಮೂಲಕ 11 ಗಂಟೆಗಳ ಹಾರಾಟಕ್ಕಾಗಿ “ಕ್ಯಾಟ್ ಪ್ಲೇನ್” ಎಂದು ಕರೆಯಲಾಗುವ ಚಾರ್ಟರ್ಡ್ ಬೋಯಿಂಗ್ ವಿಮಾನ ಸಿದ್ಧಪಡಿಸಲಾಗಿತ್ತು.

ನಮೀಬಿಯಾದ ಭಾರತೀಯ ಹೈಕಮಿಷನರ್ ಪ್ರಶಾಂತ್ ಅಗರವಾಲ್ ಪ್ರಕಾರ, ಈ ಯೋಜನೆಯು ವಿಶ್ವದ ಮೊದಲ ಭೂಖಂಡದ ಚಿರತೆಗಳ ಸ್ಥಳಾಂತರವಾಗಿದೆ, ಇದು ವಿಶ್ವದ ಅತ್ಯಂತ ವೇಗದ ಭೂ ಪ್ರಾಣಿಯಾಗಿದೆ.ಈ ಸ್ಥಳಾಂತರಕ್ಕೆ ಭಾರತವು ಹೆಚ್ಚು ಉತ್ಸುಕವಾಗಿದೆ. ಏಕೆಂದರೆ ಇದು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ನಡೆಯುತ್ತಿದೆ ಎಂದು ನಮೀಬಿಯಾದಲ್ಲಿ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಬಿಡಲಾಗಿರುವ ಈ ಚೀತಾಗಳನ್ನು ಉಪಗ್ರಹದ ಮೂಲಕ ಗಮನಿಸಲು ಎಲ್ಲ ಚೀತಾಗಳಿಗೂ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಈ ಚೀತಾಗಳ ಪ್ರತಿ ನಿಮಿಷದ ಚಲನವಲನಗಳ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸಲು ಇದಕ್ಕೆಂದೇ ಮೀಸಲಾದ ತಂಡವೊಂದು ಕೆಲಸ ಮಾಡಲಿದೆ.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನ 748 ಚ ಕಿ ಮೀ ಇದೆ. ಮಾನವ ಸಂಚಾರ ವಿರಳವಾಗಿರುವ ಈ ಉದ್ಯಾನವನದಲ್ಲಿ ಚೀತಾಗಳಿಗೆ ಉತ್ತಮವಾದ ವಾತಾವರಣ ಇದ್ದು ಸೂಕ್ತ ವಾತಾವರಣ ಇರುವ ಕಾರಣದಿಂದ ಈ ಪ್ರದೇಶದಲ್ಲಿ ಚೀತಾಗಳನ್ನು ಬಿಡಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಬೆಳ್ಳಾರೆ…

40 minutes ago

ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ

ಸುಬ್ರಹ್ಮಣ್ಯದಲ್ಲಿ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಹೋಮಿಯೋಕೇರ್‌ ಗುತ್ತಿಗಾರಿಗೆ ಸ್ಥಳಾಂತರಗೊಂಡಿದ್ದು, ಎಸ್‌ಎಂಎಸ್‌ಜಿ ಕಾಂಪ್ಲೆಕ್ಸ್‌ನಲ್ಲಿ…

1 hour ago

ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಗುಡುಗು…

2 hours ago

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಾಖಲೆ ಉದ್ಯೋಗ ಸೃಷ್ಟಿ – 2.04 ಕೋಟಿ ಮಾನವ ದಿನಗಳ ಕೆಲಸ

ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…

1 day ago