Advertisement
ಸುದ್ದಿಗಳು

#Arecanut| ಮಳೆಗಾಲದಲ್ಲಿ ಅಡಿಕೆ ಕಾಪಾಡಿಕೊಳ್ಳುವುದೇ ಸವಾಲು | ಅಡಿಕೆಯ ಸೀಳುರೋಗಕ್ಕೆ ಕಾರಣಗಳು ಮತ್ತು ನಿರ್ವಹಣೆ

Share

ಅಡಿಕೆ, ಕರಾವಳಿ ಹಾಗೂ ಮಲೆನಾಡಿನ ಜನರ ಜೀವನಾಧಾರ. ಅನೇಕ ರೈತರ ಬದುಕು ಅಡಿಕೆ ಮೇಲೆಯೇ ಅವಲಂಬಿತವಾಗಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಗೆ ಬೆಲೆಯೇನೋ ಇದೆ. ಆದರೆ ಅಡಿಕೆಗೆ ವಿವಿಧ ರೋಗಗಳು ಉಲ್ಬಣಿಸುತ್ತಿರುವುದು ರೈತರನ್ನು ಕಂಗೆಡಿಸಿದೆ. ಕೃಷಿಕರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

Advertisement
Advertisement

ಹಳದಿ ರೋಗ, ಎಲೆ ಚುಕ್ಕೆ ರೋಗ, ಸಿಂಗಾರ ಒಣಗುವಿಕೆ, ಎಳೆ ಕಾಯಿಗಳು ಬೀಳುವುದು ಹೀಗೆ.. ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗಗಳಿಂದ ಮುಕ್ತಿ ಹೇಗೆ ಅನ್ನೋದು ಈವರೆಗೆ ಯಕ್ಷ ಪ್ರಶ್ನೆಯಾಗಿದೆ. ಇರುವ ಒಂದಷ್ಟು ಮದ್ದುಗಳನ್ನೇ ಸಿಂಪಡಿಸಿ ರೈತರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಡಿಕೆಗೆ ಮಳೆಗಾಲ ಹಾಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಂಡೋಡಕ ರೋಗವೂ ಕಾಯಿ ಉಳಿಸಿಕೊಳ್ಳಲು ಪರದಾಡುವಂತೆ ಮಾಡುತ್ತವೆ.

Advertisement

ಅಡಿಕೆಯಲ್ಲಿ ಅಂಡೋಡಕ ಕಾರಣಗಳು ಮತ್ತು ನಿರ್ವಹಣೆ: 

1. ಇದೊಂದು ಶಾರೀರಿಕ ವ್ಯವಸ್ಥೆಯಾಗಿದ್ದು ಪೋಷಕಾಂಶಗಳ ಕೊರತೆ ಮತ್ತು ಅಹಿತಕರ ವಾತಾವರಣದಿಂದಾಗಿ ಅಡಿಕೆ ಸೀಳುವ ಸಮಸ್ಯೆ ಎದುರಾಗುತ್ತದೆ.

Advertisement

2. ಇದರ ಪ್ರಮುಖ ಲಕ್ಷಣಗಳೆಂದರೆ ಕಾಯಿಗಳು ಮಾಗುವ ಮುನ್ನವೇ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳ ತೊಟ್ಟು ಎರಡು ಹೋಳಾಗಿ ಸೀಳುತ್ತದೆ. ಅಂತಹ ಕಾಯಿಗಳು ಗೊಂಚಲಿನಿಂದ ಕೆಳಗೆ ಬೀಳುತ್ತದೆ.  ಎಳೆಯ ಅಡಿಕೆ ಮರಗಳಲ್ಲಿ ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು.

3.ಬೋರಾನ್ ಮತ್ತು ಪೊಟ್ಯಾಷಿಯಂ ಪೋಷಕಾಂಶದ ಕೊರತೆ ಕಾಯಿ ಸೀಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

Advertisement

ನಿರ್ವಹಣೆ

1. ತೋಟದಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಬೇಕು.

Advertisement

2. ರೋಗದ ಪ್ರಾರಂಭದ ಹಂತದಲ್ಲಿಯೇ ಶೇಕಡ 0.2% ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಬೇಕು.

3. ಬೋರಾನ್ ಮತ್ತು ಪೊಟ್ಯಾಶಿಯಂ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು.

Advertisement

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಂತೋಷ್ ನಿಲುಗುಳಿ, ತೋಟಗಾರಿಕಾ ಸಲಹೆಗಾರರು, ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ್. 9916359007

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಶಿಶಿಲದಲ್ಲಿರುವ ಈ ದೈವದ ವಿಶೇಷತೆ..! | ಜೋಡಿ ದೈವಗಳಿಗೆ ಜೀವಂತ ಕೋಳಿ ಅರ್ಪಣೆ |

ಗ್ರಾಮೀಣ ಭಾಗದ ನಂಬಿಕೆಗಳು ಮಾನಸಿಕವಾಗಿ ಹೆಚ್ಚು ಶಕ್ತಿ ನೀಡುತ್ತವೆ. ಅಂತಹದೊಂದು ನಂಬಿಕೆ ಶಿಶಿಲದಲ್ಲಿ…

13 hours ago

ಕೋವಿ ಡಿಪಾಸಿಟ್‌ ಪ್ರಕರಣ | ಮಹತ್ವದ ತೀರ್ಪು | ಚುನಾವಣಾ ಕಾಲದಲ್ಲಿ ಕೋವಿ ಡಿಪಾಸಿಟ್‌ಗೆ ಪರಿಹಾರ |

ಚುನಾವಣೆಯ ಸಮಯದಲ್ಲಿ ಕೋವಿ ಠೇವಣಾತಿಯ ಬಗ್ಗೆ ಕೃಷಿಕರ ಸಂಕಷ್ಟಕ್ಕೆ ನ್ಯಾಯಾಲಯವು ಪರಿಹಾರ ನೀಡಿದೆ.

14 hours ago

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple…

21 hours ago

ಸ್ಟ್ರೀಟ್ ಫುಡ್ ವರ್ಸಸ್ ಆರೋಗ್ಯ | ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ

ಆಹಾರ ಹಾಗೂಆಹಾರ ಪದ್ಧತಿಗಳ ಬಗ್ಗೆ ವಿವೇಕ್‌ ಆಳ್ವ ಅವರು ಬರೆದಿದ್ದಾರೆ.

22 hours ago