MIRROR FOCUS

ಕರಾವಳಿ ಜಿಲ್ಲೆಗಳಲ್ಲಿ ಏರುತ್ತಿದೆ ಬಿಸಿಲ ಅಬ್ಬರ : ಜನರಿಗೆ ತಟ್ಟುತ್ತಿದೆ ಎಳನೀರ ಬೆಲೆ ಏರಿಕೆ ಕಾವು

Share

ದೇಶದಾದ್ಯಂತ ಹೆಚ್ಚಿನ ಭಾಗಗಳಲ್ಲಿ ಮಳೆ(Rain) ಕೈಕೊಟ್ಟಿದ್ದರಿಂದ ಬರಗಾಲದ(Drought) ಛಾಯೆ ಆವರಿಸಿದೆ. ಸೆಪ್ಟೆಂಬರ್‌ ತಿಂಗಳಿಗೆ ಬಿಸಿಲ ಬೇಗೆ(Hot) ಏರ ತೊಡಗಿದೆ. ಚಳಿಯಂತು(Winter) ಮಾಯವಾಗಿದೆ. ಧರ್ಮಸ್ಥಥಳ ದೀಪೋತ್ಸವ, ಸುಬ್ರಹ್ಮಣ್ಯ ಷಷ್ಠಿ ಸಮಯದಲ್ಲಿ ವಿಪರೀತ ಚಳಿ ಇರುತ್ತದೆ. ಆದರೆ ಈ ಬಾರಿ ಅದರ ಲವಲೇಶವೂ ಇಲ್ಲ. ಬೆಳಿಗ್ಗೆ 9 ಗಂಟೆ ವೇಳೆಗೆ ಸೂರ್ಯ ಸುಡಲು ಆರಂಭಿಸುತ್ತಾನೆ.  ಬಿಸಿಲ ವಾತಾವರಣ ಪ್ರಾರಂಭವಾಗುವ ಮುಂಚೆಯೇ ಎಲ್ಲೆಲ್ಲೂ ದಾಹ(Thirsty) ನೀಗಿಸಿಕೊಳ್ಳಲು ಎಳನೀರ ರಾಶಿ ಹುಡುಕುವ ಹಾಗಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಸ್ಥರು ಕರಾವಳಿ ಭಾಗದಲ್ಲಿ  ಎಳನೀರು (Tender Coconut) ಅಬ್ಬರದ ಬೆಲೆ ಏರಿಕೆ ಕಂಡಿದೆ.

Advertisement

ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಿರುವುದರಿಂದ ಎಳನೀರು, ತಂಪು-ಪಾನಿಯಗಳು ಯಥೇಚ್ಛವಾಗಿ ಮಾರಾಟವಾಗುತ್ತದೆ. ಹೀಗಾಗಿ ತಂಪು ಪಾನಿಯಗಳಿಗಿಂತ ಎಳನೀರು ಹೆಚ್ಚು ಬೇಡಿಕೆ ಪಡೆದುಕೊಂಡಿದ್ದು ಕಾರವಾರದಲ್ಲಿ ಒಂದು ಎಳನೀರಿಗೆ 50 ರೂ. ದಾಟಿದೆ. ಡಿಸೆಂಬರ್ ಅಂತ್ಯದಲ್ಲಿ 80 ರಿಂದ ನೂರು ರುಪಾಯಿ ಏರುವ ಸಾಧ್ಯತೆಗಳಿವೆ ಎಂದು ಎಳನೀರು ಮಾರಾಟಗಾರರು ಹೇಳುತ್ತಾರೆ.

ಕರಾವಳಿಯಲ್ಲಿ ಹೆಚ್ಚು ದರ ಏಕೆ?: ಉತ್ತರ ಕನ್ನಡ ಜಿಲ್ಲೆಗೆ ಶಿವಮೊಗ್ಗ, ತರಿಕೆರೆ, ತುಮಕೂರು ಭಾಗದಿಂದ ಎಳನೀರು ಸರಬರಾಜಾಗುತ್ತದೆ. ಇಲ್ಲಿನ ಸಾಗಾಟ ದರ ಹೆಚ್ಚಾದ್ದರಿಂದ ಗುತ್ತಿಗೆ ಪಡೆದ ವ್ಯಾಪಾರಿಗಳು ಪ್ರತಿ ಎಳನೀರಿನ ದರ 25 ರಿಂದ 28 ವಿಧಿಸುತ್ತಾರೆ. ಆದರೆ ಸ್ಥಳೀಯ ಮಾರಾಟಗಾರರು ಪ್ರತಿ ಎಳನೀರಿಗೆ 50 ರಿಂದ 60 ರಂತೆ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ ಕರಾವಳಿ ಭಾಗದಲ್ಲಿ ಎಳನೀರಿನ ದರ ಹೆಚ್ಚಾಗಿದೆ. ಇನ್ನು ಬಿರುಬೇಸಿಗೆ ಬಂತೆಂದರೆ 80 ರೂ.ವರೆಗೂ ಕರಾವಳಿ ಜಿಲ್ಲೆಗಳಲ್ಲಿ ಒಂದು ಎಳನೀರು ಮಾರಾಟವಾಗುತ್ತದೆ. ಈ ಬಾರಿ ಹೆಚ್ಚು ಬೇಡಿಕೆ ಇರುವುದರಿಂದ ಜನವರಿ ಅಂತ್ಯದಲ್ಲಿ 80 ರಿಂದ ನೂರರವರೆಗೆ ದರ ಏರುವ ಸಾಧ್ಯತೆಗಳಿವೆ.

ನೀರಾಕ್ಕೂ ಹೆಚ್ಚಿದ ಬೇಡಿಕೆ: ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಮರದಿಂದ ತೆಗೆದ ನೀರಾಕ್ಕೂ ಹೆಚ್ಚು ಬೇಡಿಕೆ ಇದ್ದು 250 ಮಿಲಿಗೆ 65 ರೂ ಇದೆ. ಮೊದಲು ಕುಮಟಾ ಭಾಗದಲ್ಲಿ ದೊರಕುತಿದ್ದ ನೀರಾ ಈಗ ಗೋವಾ ಭಾಗದಿಂದ ಜಿಲ್ಲೆಗೆ ಸರಬರಾಜಾಗುತ್ತಿದ್ದು,  ಪ್ರವಾಸಿಗರ ಮೆಚ್ಚಿನ ತಾಣವಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಳನೀರು ಗ್ರಾಹಕ ಹೊಟ್ಟೆ ತಂಪಿನ ಜೊತೆಗೆ ತಲೆಬಿಸಿಯೂ ಆಗುತ್ತಿದೆ..!.

On the coastal side, the price of tender coconut has seen a steep rise. Fresh water and cold drinks are sold in abundance as the sun is high on the coastal side. Thus fresh water has got more demand than cold drinks and in Karwar, one fresh water is Rs 50. crossed Fresh water sellers say that there is a possibility of an increase of 80 to 100 rupees by the end of December.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡುಗೆ ಗ್ಯಾಸ್ ಬೆಲೆ‌ ಸಿಲಿಂಡರ್‌ಗೆ 50 ರೂ. ಹೆಚ್ಚಳ

ಅಡುಗೆ ಅನಿಲ ಅಥವಾ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50…

3 hours ago

ಹವಾಮಾನ ವರದಿ | 07-04-2025 | ಕೆಲವೆಡೆ ಇಂದೂ ಮಳೆ ನಿರೀಕ್ಷೆ | ಎ.9 ರಿಂದ ಅಲ್ಲಲ್ಲಿ ಸಾಧಾರಣ ಮಳೆಯ ಸಾಧ್ಯತೆ |

ಇಂದು ಕೆಲವು ಕಡೆ ಮಳೆ ನಿರೀಕ್ಷೆ ಇದೆ. ಈಗಿನಂತೆ ರಾಜ್ಯದ ಎಪ್ರಿಲ್ 9ರಿಂದ…

7 hours ago

ಜೇನು ಹುಳಗಳ ಸಂಖ್ಯೆ ಗಣನೀಯ ಇಳಿಕೆ | ಜೇನು ಕುಟುಂಬ ಉಳಿಸುವ ಅಭಿಯಾನ |

ವಿಶ್ವದ ಪ್ರಮುಖವಾದ 107 ಬೆಳೆಗಳಲ್ಲಿ ಸುಮಾರು 70% ಗೆ ಬೆಳೆಗಳು ಜೇನುನೊಣಗಳಂತಹ ಪರಿಸರ…

9 hours ago

ಹುಲಿಸಂರಕ್ಷಿತ ಪ್ರದೇಶಲ್ಲಿ ರಾತ್ರಿ ಸಂಚಾರ ನಿಷೇಧ | ನಿಷೇಧ ತೆರವುಗೊಳಿಸದಂತೆ ಒತ್ತಾಯಿಸಿ ಪ್ರತಿಭಟನೆ

ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧ  ತೆರವುಗೊಳಿಸಬಾರದು ಎಂದು…

15 hours ago

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲು ನಿರ್ಧಾರ | ಇಂಧನ ಸಚಿವ ಕೆ.ಜೆ.ಜಾರ್ಜ್

ರಾಜ್ಯದಲ್ಲಿ 100 ಹೊಸ ವಿದ್ಯುತ್ ಉಪ ಕೇಂದ್ರಗಳನ್ನು ಸ್ಪಾಪಿಸಲಾಗುವುದು ಎಂದು ಇಂಧನ ಸಚಿವ…

15 hours ago

ದೇಶದ ಜಿಡಿಪಿ 4.5ಲಕ್ಷ ಕೋಟಿ ರೂಪಾಯಿ ಏರಿಕೆ ಸಾಧ್ಯತೆ | ನಿರ್ಮಲಾ ಸೀತಾರಾಮನ್‌ ಅಭಿಪ್ರಾಯ

ಒಂದು ರಾಷ್ಟ್ರ, ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದರೆ ಭಾರತವು ಶೇಕಡ 1.5…

15 hours ago