ಇತ್ತೀಚಿನ ದಿನಗಳಲ್ಲಿ ಬಹುಕಷ್ಟದ ಕೆಲಸ ಅಂದ್ರೆ ಕೃಷಿಗೆ ಸಹಾಯಕರು ಸಿಗೋದು. ಜಮೀನು ಕೆಲಸಕ್ಕೆ ಸಹಾಯಕರು ಸಿಗದೆ ರೈತರು ಕಂಗಾಲಾಗಿದ್ದಾರೆ. ಜನ ಬಂದ್ರೆ ಬಂದ್ರು.. ಇಲ್ಲಾಂದ್ರೆ ಇಲ್ಲ. ಅದ್ರಲ್ಲೂ ಭತ್ತದ ನಾಟಿಗೆ ಜನ ಸಿಗೋದೆ ಅಪರೂಪವಾಗಿದೆ. ಆದರೆ ಇಲ್ಲಿ ಒಂದೇ ಗದ್ದೆಯಲ್ಲಿ ಸಾವಿರಾರು ಮಂದಿ ಸಾಂಪ್ರದಾಯಿಕ ಶೈಲಿಯಲ್ಲಿ ನಾಟಿಗೆ ಇಳಿದಿದ್ದಾರೆ. ಈ ಅಪರೂಪದ ಸನ್ನಿವೇಶ ಇಲ್ಲಿದೆ..
ಗದ್ದೆ ನಾಟಿ ವಿಡಿಯೋ :
ಈ ಬಾರಿ ತಡವಾಗಿಯಾದರು ಮುಂಗಾರು ಮಲೆನಾಡು, ಕರಾವಳಿಯಲ್ಲಿ ಭರ್ಜರಿಯಾಗಿ ಆಗಿದೆ. ಇದೇ ಸಂಭ್ರಮದಲ್ಲಿ ಭತ್ತ ನಾಟಿಗೆ ರೈತರು ಮುಂದಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಉಚಿತ ಸಾಮೂಹಿಕ ಗದ್ದೆ ನಾಟಿ ಮಾಡಲಾಯಿತು. ಈಗಷ್ಟೇ ಮಳೆಯಲ್ಲಿ ನೆನೆದ ಗಿಡಮರಗಳು, ಉಳುಮೆ ಮಾಡಿ ಹಸಿ ಹಸಿಯಾದ ಕೆಸರು ಗದ್ದೆ. ಕೈಯಲ್ಲಿ ಭತ್ತದ ಸಸಿ ಹಿಡಿದು ಒಂದೇ ಗದ್ದೆಯಲ್ಲಿ ಕೆಸರು ಕಾಲಲ್ಲಿ ಸಾಲಾಗಿ ಸಾವಿರಾರು ಮಹಿಳೆಯರು ನಾಟಿ ಮಾಡುತ್ತಿದ್ದಾರೆ.
ಈಗಿನಂತೆ ಎಪ್ರಿಲ್ 29 ಅಥವಾ 30ರಿಂದ ಕರಾವಳಿ ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ…
ಬದುಕಿನ ಯಾನಕ್ಕೆ ಪಾಲಕರು ರೇಖೆಯನ್ನು ಎಳೆದು ತೋರಿಸುತ್ತಾರೆ. ಅದು ಭವಿಷ್ಯದ ಕೈತಾಂಗು. ರಕ್ಷಣೆ…
ಹನುಮಸಾಗರ ಗ್ರಾಮದ ಏಳು ವರ್ಷದ ಪ್ರದ್ವಿಕಾ ಕಣ್ಣಿಗೆ ಬಟ್ಟೆ ಕಟ್ಟಿ6 ನಿಮಿಷದಲ್ಲಿ 112…
ಸಾರ್ವಜನಿಕರಲ್ಲಿ ಮಲೇರಿಯಾ ಕಾಯಿಲೆ ಕುರಿತು ಅರಿವು ಮೂಡಿಸಬೇಕೆಂಬುವುದು ಜಾಥದ ಪ್ರಮುಖ ಉದ್ದೇಶವಾಗಿದೆ. ಪ್ರತಿಯೊಬ್ಬರೂ…
ಜಾಗತಿಕರಣದ ಆಕ್ರಮಣದಿಂದ ಜನಸಮುದಾಯಗಳ ಪಾರಂಪರಿಕ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಪರಿಣಾಮಕಾರಿ ಪ್ರಯತ್ನ…