Advertisement
Opinion

ಇದು ಅತ್ಯಂತ ಅಚ್ಚರಿ ಮತ್ತು ಆಘಾತಕಾರಿ ವಿಚಾರ | ಒಂದೇ ಏಟಿಗೆ ಐವತ್ತು ಹಸುಗಳ ಮಾರಾಟ..! | ಒಂದು ಡೈರಿ ಫಾರ್ಮ್ ಮುಚ್ಚಿದಂತೆ

Share
  • ಹೈನುಗಾರಿಕೆ ಉಳಿಸುವ ಬಗ್ಗೆ ಸರ್ಕಾರದಿಂದ ಯೋಚನೆ ನಡೆಯಬೇಕಿದೆ.
  • ಹಾಲಿನ ದರ ಏರಿಕೆಯಾಗದ ಹೊರತು ಕ್ಷೀರೋದ್ಯಮ ಉಳಿಯಲು ಸಾಧ್ಯವಿಲ್ಲ.
  • ಹೈನುಗಾರಿಕೆ ಉಳಿಯದಿದ್ದರೆ ಕೃತಕ ಹಾಲು ಬಳಕೆಯ ಅನಿವಾರ್ಯತೆ ಸೃಷ್ಟಿಯಾದೀತು.

ಮೂಡುಬಿದಿರೆಯ ಬಳಿ ಸುಮಾರು 50 HF ದನಗಳು ಮಾರಾಟಕ್ಕಿವೆ. ಆಸಕ್ತರು ಸಂಪರ್ಕಿಸಿ….ಹೀಗೊಂದು ಮಾಹಿತಿ ವಾಟ್ಸ್‌ ಅಪ್‌ ಗ್ರೂಪ್‌ಗಳಲ್ಲಿ ಓಡಾಡುತ್ತಿದೆ.  ಒಂದು ಮಾರಾಟ ಸಹಜ ಸಾಮಾನ್ಯ… ಒಂದೇ ಏಟಿಗೆ ಐವತ್ತು ಹಸುಗಳನ್ನು ಮಾರಾಟ ಮಾಡುತ್ತೇವೆ ಎಂದಾದರೆ ಒಂದು ಡೈರಿ ಫಾರ್ಮ್‌ ಮುಚ್ಚಿದಂತೆ…!! ಗ್ರಾಹಕರಿಗೆ ಅಥವಾ ಡೈರಿಗೆ ಆ ವಲಯದಲ್ಲಿ ದಿನಕ್ಕೆ ಕನಿಷ್ಠ ಇನ್ನೂರು ಲೀಟರ್ ಹಾಲು ಖೋತ ಆಗುತ್ತದೆ…!! ಏಕ್ ದಂ ಹೀಗೆ ಡೈರಿ ಫಾರ್ಮ್ ಗಳು ಕ್ಲೋಸ್ ಆಗುವುದು ಹೈನೋದ್ಯಮದ ಚಾಲ್ತಿ ಬವಣೆಯನ್ನು ತೋರಿಸುತ್ತದೆ.

ಹತ್ತಿಕಾಳು ಹಿಂಡಿ, ಕ್ಯಾಟಲ್ ಫೀಡ್ ಪೆಲ್ಲಟ್ಸ್, ಒಣ ಹುಲ್ಲು, ಸೈಲೇಜು ಕೊನೆಯಲ್ಲಿ ಹಸುಗಳ ದೇಖಾರೇಖಿ ….. ಇನ್ನೂರು ಲೀಟರ್ ಗೆ ಡೈರಿಯಿಂದ ಬಂದ ಏಳು ಸಾವಿರ ರೂಪಾಯಿಯಲ್ಲಿ ಭಾಗಾಕಾರ ಗುಣಕಾರ ಹಾಕಿದರೆ = ನಷ್ಟ…. ನಷ್ಟ ಮಾಡಿಕೊಂಡು ಗೋಪಾಲಕ ಎಷ್ಟು ಕಾಲ ಡೈರಿ ಫಾರ್ಮ್ ನೆಡೆಸಲು ಸಾಧ್ಯ…? ಹಾಲಿನ ದರ ಏರಿಸದಿದ್ದರೆ ಡೈರಿ ಫಾರ್ಮ್ ಉದ್ಯಮ ಹಂತ ಹಂತವಾಗಿ ನಿಂತು ಹೋಗುವುದು ಅನಿವಾರ್ಯ…!. ಸಮಾಜ ಪೆಟ್ರೋಲ್ ಬೆಲೆ ಲೀಟರ್ ಗೆ ನೂರಲ್ಲ ಸಾವಿರ ರೂಪಾಯಿ ಆದರೂ ಮಾತಿಲ್ಲದೆ ಕೊಂಡು ಬಳಸುತ್ತದೆ. ಆದರೆ ಅದೇ ಸಮಾಜ ಹಾಲು ಲೀಟರ್ ಗೆ ಒಂದು ರೂಪಾಯಿ ಹೆಚ್ಚಿಸಿದರೆ ಅದರಿಂದ ಒಂದು ಕುಟುಂಬ ಒಂದು ಹೊತ್ತು ಊಟ ಮಾಡಲಾಗದಷ್ಟು ಕಷ್ಟ ಆಗುತ್ತದೆ ಎಂದು ಬೊಬ್ಬೆ ಹೊಡೆಯುತ್ತದೆ. ‌

ಹಾಲಿನ ದರ ಹೆಚ್ಚಾಗದ ಹೊರತು ಕ್ಷೀರೋದ್ಯಮ ಉದ್ದಾರ ಆಗದು. ಹಸುಗಳಿಗೆ ಕೊಳ್ಳುವ ಗಿರಾಕಿ ಬರದಿದ್ದರೆ ಹಸುಗಳು ಕಸಾಯಖಾನೆ ಸೇರುವುದು ನಿಶ್ಚಿತ. ‌ ‌ ‌‌‌‌‌ ಮುಂದಿನ ದಿನಗಳಲ್ಲಿ ಮನೆ ಮನೆಗೂ ಪಕ್ಕದ ರಾಜ್ಯದ ದೊಡ್ಲ ಹಾಲು, ಆರೋಗ್ಯ ಹಾಲು ಬರಲಿದೆ.! ಸರ್ಕಾರ ಹೈನೋದ್ಯಮ ಉಳಿಸಲಿ.. ಜನ ಸಾಮಾನ್ಯರು ಹಾಲಿನ ಬೆಲೆ ಹಸುಗಳ ಮತ್ತು ಹೈನುಗಾರನ ಜೀವ ಜೀವನ ಉಳಿಸಲು ಎಂದು ಅರ್ಥ ಮಾಡಿಕೊಳ್ಳಲಿ… ಸ್ಥಳೀಯ ಗೋಪಾಲಕ ಕ್ಷೀರೋದ್ಯಮಿ ಉಳಿಯದಿದ್ದರೆ ಮುಂದಿನ ದಿನಗಳಲ್ಲಿ ಬಿಳಿ ಬಣ್ಣದ ಕಲಬೆರಕೆಯ ರಾಸಾಯನಿಕ ಹಾಲನ್ನು ಕುಡಿಯಬೇಕಾಗುತ್ತದೆ….! ಜನ ಸರ್ಕಾರ ಈ ವಿಚಾರವನ್ನು ಅರ್ಥ ಮಾಡಿಕೊಳ್ಳಲಿ ಎಂದು ಬಯಸೋಣ.

ಬರಹ :
ಪ್ರಬಂಧ ಅಂಬುತೀರ್ಥ

The dairy industry will struggle to thrive unless the price of milk rises. Without buyers for the cows, they will inevitably be sent to the slaughterhouse. In the coming days, Dodla milk and health milk from a neighboring state will be delivered directly to homes. It is imperative that the government intervenes to support the dairy industry.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

6 hours ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

1 day ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

1 day ago

ಹವಾಮಾನ ವರದಿ| 10-05-2026 | ರಾಜ್ಯದಲ್ಲಿ ಮಳೆ ಕ್ಷೀಣಿಸುವ ಸೂಚನೆ | ಮೇ 15ರಿಂದ ಮುಂಗಾರು ಮಾರುತ ಚಟುವಟಿಕೆ ಚುರುಕು ಸಾಧ್ಯತೆ

ಕರ್ನಾಟಕದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ…

3 days ago

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

5 days ago