Advertisement
MIRROR FOCUS

ಹಣದುಬ್ಬರಕ್ಕೆ ತತ್ತರಿಸಿದ ದಕ್ಷಿಣ ಅಮೇರಿಕ ಖಂಡದ ಶ್ರೀಮಂತ ದೇಶ | ಭೀಕರ ಹಣದುಬ್ಬರ ಹೊಡೆತಕ್ಕೆ ಉಟ್ಟ ಉಡುಗೆ ಮಾರಿ ಜೀವನ ನಡೆಸಬೇಕಾದ ಸ್ಥಿತಿ |

Share

ಯಾವುದೇ ದೇಶದ ಆರ್ಥಿಕತೆ ಕೈ ಕೊಟ್ಟರೆ ಎಂತಹಾ ಪರಿಸ್ಥಿತಿ ಬರುತ್ತದೆ ಅನ್ನೋದು ನಮಗೆ ತಿಳಿದೇ ಇದೆ. ಪಾಕಿಸ್ಥಾನ, ಶ್ರೀಲಂಕಾ, ಅಮೇರಿಕಾದ ಕೆಲ ದೇಶಗಳು ಇದಕ್ಕೆ ಸ್ಪಷ್ಠ ಉದಾಹರಣೆ. ಈ ಹಣದುಬ್ಬರ ಕೇವಲ ಬಡ ರಾಷ್ಟ್ರಗಳಿಗೆ ಮಾತ್ರವಲ್ಲ ಶ್ರೀ ಮಂತ ರಾಷ್ಟ್ರಗಳಿಗೂ ತಟ್ಟುತ್ತದೆ. ಇದೀಗ ದಕ್ಷಿಣ ಅಮೆರಿಕ(South America) ಖಂಡದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ ಅರ್ಜೆಂಟೀನಾ ಈಗ ಹಣದುಬ್ಬರದ (Inflation in Argentina) ಸುಳಿಗೆ ಸಿಲುಕಿ ವಿಲವಿಲ ಒದ್ದಾಡುತ್ತಿದೆ. ಬೆಲೆ ಏರಿಕೆ ಅಲ್ಲಿನ ಜನರನ್ನು ಹೈರಾಣಗೊಳಿಸುತ್ತಿದೆ.

ಸೆಪ್ಟೆಂಬರ್​ನಲ್ಲಿ ಅರ್ಜೆಂಟೀನಾದ ಹಣದುಬ್ಬರ ಬರೋಬ್ಬರಿ ಶೇ. 138ಕ್ಕೂ ಹೆಚ್ಚಿತ್ತು. ಈ ಅಕ್ಟೋಬರ್​ನಲ್ಲಿ ಶೇ. 143ರಷ್ಟಾಗಿದೆ. ಇಂಥ ಸ್ಥಿತಿಯಲ್ಲಿ ಅರ್ಜೆಂಟೀನಾದ ಜನರು ಸಾಮಾನ್ಯ ಜೀವನ ನಡೆಸುವುದೇ ದುಬಾರಿಯಾಗಿದೆ(Costly). ತಮ್ಮ ಹಳೆಯ ಬಟ್ಟೆ ಮಾರಿ(Old Clothes) ಜೀವನ(Life) ನಡೆಸಬೇಕಾದ ಸ್ಥಿತಿಯಲ್ಲಿ ಅಲ್ಲಿನ ಜನರಿದ್ದಾರೆ. ಅಭಿವೃದ್ಧಿಶೀಲ ದೇಶವೆನಿಸಿದ ಅರ್ಜೆಂಟೀನಾದಲ್ಲಿ ಈಗ ಶೇ. 40ರಷ್ಟು ಜನರು ಬಡತನಕ್ಕೆ ಸಿಲುಕಿದ್ದಾರೆ. ಅಲ್ಲೀಗ ಜವಳಿ ಉದ್ಯಮವೇ ಸ್ಥಗಿತಗೊಂಡಂತಿದೆ. ಹೊಸ ಉಡುಪುಗಳ ಮಾರಾಟ ಬಹಳ ಕಡಿಮೆ ಆಗಿದೆ. ಸೆಕೆಂಡ್ ಹ್ಯಾಂಡ್ ಉಡುಪುಗಳ ಮಾರುಕಟ್ಟೆ ಗಿಜಿಗಿಜಿಗುಡುತ್ತಿದೆ. ಜನರು ತಮ್ಮ ಹಳೆಯ ಉಡುಪುಗಳನ್ನು, ಅದರಲ್ಲೂ ಜೀನ್ಸ್ ಬಟ್ಟೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಹೊಸ ಬಟ್ಟೆ ಖರೀದಿಸಲು ಸಾಧ್ಯವಿಲ್ಲದ ಜನರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಗೆ ಬಂದು ಹಳೆಯ ಉಡುಪುಗಳನ್ನು ಪಡೆದು ಹೋಗುತ್ತಿದ್ದಾರೆ ಎಂದು ರಾಯ್‌ಟರ್ಸ್‌ ಅವರದಿ ಹೇಳುತ್ತಿವೆ. ಅರ್ಜೆಂಟೀನಾ ಮೊದಲ ದಕ್ಷಿಣ ಅಮೆರಿಕನ್ ದೇಶಗಳ ಜನರಿಗೆ ಜೀನ್ಸ್ ಎನ್ನುವುದು ಬಹಳ ಅಚ್ಚುಮೆಚ್ಚಿನ ಉಡುಪು.

ಅರ್ಜೆಂಟೀನಾದಲ್ಲಿ ಯಾಕಿಷ್ಟು ಬೆಲೆ ಏರಿಕೆ? : ಅರ್ಜೆಂಟೀನಾ ಕೆಲವಾರು ವರ್ಷಗಳಿಂದಲೂ ಬೆಲೆ ಏರಿಕೆಯಿಂದ ಬಸವಳಿದಿದೆ. ಆರ್ಥಿಕ ತಜ್ಞರ ಪ್ರಕಾರ ಅಲ್ಲಿನ ಸರ್ಕಾರ ಅವಶ್ಯಕತೆಗಿಂತ ಹೆಚ್ಚು ನೋಟುಗಳನ್ನು ಮುದ್ರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪಿಸೋ ಕರೆನ್ಸಿ ಮೌಲ್ಯ ಗಣನೀಯವಾಗಿ ಕುಸಿಯುತ್ತಿದೆ. ಕಳೆದ 10 ವರ್ಷಗಳಿಂದ ಅರ್ಜೆಂಟೀನಾ ಕರೆನ್ಸಿ ಮಹಾಕುಸಿತ ಅನುಭವಿಸಿದೆ. 2013ರಲ್ಲಿ ಒಂದು ಅಮೆರಿಕನ್ ಡಾಲರ್​ಗೆ 6 ಪೆಸೋ ಬೆಲೆ ಇತ್ತು. ಈಗ ಒಂದು ಡಾಲರ್​ಗೆ ಬರೋಬ್ಬರಿ 350 ಪೆಸೋ ಆಗಿದೆ. ಅಂದರೆ 10 ವರ್ಷದಲ್ಲಿ ಕುಸಿತವಾಗಿರುವುದು ಗಮನಾರ್ಹ.

Argentina, which is the second largest economy of the South American continent, is now reeling under the spiral of inflation. The price hike is bothering the people there. Inflation in Argentina in September was 10% in October. It is 143. In such a situation, it is expensive for the people of Argentina to live a normal life. There are people there who have to sell their old clothes to make a living. In Argentina, which is a developing country, now percent. 40 percent of the people have fallen into poverty.

 
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

12 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

12 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

12 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

12 hours ago

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

1 day ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago