ಕಳೆದ ಕೆಲವು ದಿನಗಳಿಂದ ಬೆಲೆ ಏರಿಕೆಯ(Price Hike) ಪರ್ವ ಆರಂಭವಾಗಿದೆ. ಪೆಟ್ರೋಲ್(Petrol), ಡಿಸೇಲ್(Descale) ಬಳಿಕ ರಾಜ್ಯದ ಜನತೆಗೆ ಈಗ ದಿನನಿತ್ಯ ಬಳಕೆಯ ತರಕಾರಿಗಳ ಬೆಲೆ ದಿಢೀರನೆ (Vegetable Price Hike) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಟೊಮ್ಯಾಟೋ(Tomato) ರೇಟ್ ಶತಕ ದಾಟಿದ್ರೆ, ಬೀನ್ಸ್(Beans) ಬೆಲೆ ಇನ್ನೂರು ರೂಪಾಯಿ ದಾಟಿದೆ. ಕಳೆದ ವಾರಕ್ಕಿಂತ ಈ ವಾರ ಬಹುತೇಕ ತರಕಾರಿ(Vegetable) ದರ ದುಪ್ಪಟ್ಟು, ಮೂರು ಪಟ್ಟು ಜಾಸ್ತಿಯಾಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದ ಬೆನ್ನಲ್ಲೇ ನಗರದ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ನೂರರ ಗಡಿ ದಾಟಿದ್ರೆ, ಬೀನ್ಸ್ ಇನ್ನೂರು ಹಾಗೂ ಬೆಳ್ಳುಳ್ಳಿ ಮುನ್ನೂರು ರೂಪಾಯಿ ದಾಟಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ಗಾಂಧಿ ಬಜಾರ್, ಹೆಬ್ಬಾಳ ಮಾರುಕಟ್ಟೆ ಸೇರಿದಂತೆ ಎಲ್ಲಾ ಕಡೆಗಳಲ್ಲೂ ತರಕಾರಿ ಬಲು ತುಟ್ಟಿಯಾಗಿದೆ. ಇದರಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.
ರಾಜ್ಯದಲ್ಲಿ ಕುಸಿತ ಕಂಡ ಟೊಮ್ಯಾಟೊ ಇಳುವರಿ : ರಾಜ್ಯದಲ್ಲಿ ಟೊಮ್ಯಾಟೋ ಉತ್ಪಾದನೆ ಕುಸಿತ ಕಂಡ ಹಿನ್ನೆಲೆ ಬೆಲೆ ಏರಿಕೆಯಾಗಿದೆ ಅನ್ನೋದು ವರ್ತಕರ ಮಾತು. ಮಂಡ್ಯ, ಕೋಲಾರ, ಕನಕಪುರ, ಕಡೂರು, ಮದ್ದೂರು ಕಡೆಗಳಲ್ಲಿ ಟೊಮ್ಯಾಟೋ ಇಳುವರಿ ಕುಸಿತವಾಗಿದೆ. ಸದ್ಯ ಮಹಾರಾಷ್ಟ್ರದಿಂದ ಆಮದಾಗುವ ಟೊಮ್ಯಾಟೋ ನೆಚ್ಚಿಕೊಂಡಿವೆ ಬೆಂಗಳೂರಿನ ಮಾರುಕಟ್ಟೆಗಳು. ಟೊಮ್ಯಾಟೋ ಜೊತೆಗೆ ಬೀನ್ಸ್, ಬೆಳ್ಳುಳ್ಳಿ ಸೇರಿದಂತೆ ಇತರೆ ತರಕಾರಿ ದರವೂ ತುಟ್ಟಿಯಾಗಿದೆ. ಮುಂದಿನ ಒಂದು ತಿಂಗಳ ಕಾಲ ದರ ಇದೇ ರೀತಿ ಏರಿಕೆಯಾಗಲಿದೆ ಎನ್ನುವುದು ಮಾರುಕಟ್ಟೆ ವರದಿ.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…