ಸರ್ಕಾರಗಳು(Govt) ಬದಲಾಗುತ್ತಿದ್ದಂತೆ ಹಿಂದಿನ ಸರ್ಕಾರಗಳು ಜಾರಿಗೆ ತಂದ ಯೋಜನೆಗಳನ್ನು(Scheme) ಬಂದ ಸರ್ಕಾರಗಳು ಬದಲಾಯಿಸೋದು ಮಾಮೂಲು. ಬದಲಾಯಿಸೊದೇನೋ ಸರಿ.. ಆದರೆ ಅದರಿಂದ ಯಾರಿಗೆ ತೊಂದರೆ ಇದೆ. ಲಾಭ ಏನು..? ಸಮಸ್ಯೆ ಏನಾಗಬಹುದು ಅನ್ನೋದನ್ನು ಕನಿಷ್ಠ ಯೋಚನೆ ಮಾಡೋದಿಲ್ಲ ಸರ್ಕಾರಗಳು. ಅಂದಿನ ಬಿಜೆಪಿ ಸರ್ಕಾರ(BJP Govt) ಎನ್ಇಪಿ(NEP) ಜಾರಿಗೊಳಿಸಿದ ಸಮಯದಿಂದ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಸದ್ಯ ಮೂರನೇ ವರ್ಷದ ಪದವಿ ವ್ಯಾಸಂಗ(Graduate) ಮಾಡ್ತಿದ್ದಾರೆ. ಆದರೀಗ ಅದನ್ನು ಕಾಂಗ್ರೆಸ್ ಸರ್ಕಾರ(Congress Govt) ಕೈ ಬಿಡಲು ನಿರ್ಧರಿಸಿದೆ. ಇದು ನೇರ ಪರಿಣಾಮ ಬೀರೋದು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹೊರಟ ವಿದ್ಯಾರ್ಥಿಗಳ(Students) ಮೇಲೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಡಿಯಲ್ಲಿ ಪರಿಚಯಸಿದ್ದ ಕೋರ್ಸ್ ಕೈಬಿಡುವ ಶಿಫಾರಸ್ಸಿಗೆ ಉನ್ನತ ಶಿಕ್ಷಣ ಇಲಾಖೆ ಅಸ್ತು ಎಂದಿದೆ. ಸಿಎಂ ಸಿದ್ದರಾಮಯ್ಯ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಜ್ಯ ಉನ್ನತ ಶಿಕ್ಷಣದಲ್ಲಿ ಪರಿಚಯಿಸಿದ್ದ 4 ವರ್ಷಗಳ ಪದವಿ ಹಾಗೂ ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶವನ್ನ ಕಾಂಗ್ರೆಸ್ ಸರ್ಕಾರ 2024-25ನೇ ಸಾಲಿನಿಂದ ಕೈ ಬಿಡುವುದು ಬಹುತೇಕ ಖಚಿತವಾಗಿದೆ.
ಸದ್ಯ ಉನ್ನತ ಶಿಕ್ಷಣ ಇಲಾಖೆ ಸಮ್ಮತಿ ನೀಡಿದ್ದು, ಎನ್ಇಪಿ ಕೈಬಿಡುವ ಶಿಫಾರಸ್ಸಿಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಎನ್ಇಪಿ ಬದಲು ಪ್ರತ್ಯೇಕ ರಾಜ್ಯ ನೀತಿ ಜಾರಿಗೆ ತರಲು ಅಗತ್ಯ ಕರಡು ರಚಿಸಲು ಕಾಂಗ್ರೆಸ್ ಸರ್ಕಾರ ಡಾ ಸುಖದೇವ್ ಥೋರಟ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಎನ್ಇಪಿ ಜಾರಿಯಾದ ಸಮಯದಿಂದ ಪದವಿಗೆ ಸೇರಿದ್ದ ವಿದ್ಯಾರ್ಥಿಗಳು ಸದ್ಯ ಮೂರನೇ ವರ್ಷದ ಪದವಿ ವ್ಯಾಸಂಗ ಮಾಡ್ತಿದ್ದಾರೆ.
ಸದ್ಯ ಎನ್ಇಪಿ ಮುಂದುವರಿಸಿದರೆ ಪದವಿ ವಿದ್ಯಾರ್ಥಿಗಳು ನಾಲ್ಕನೇ ವರ್ಷ ಕೋರ್ಸ್ ಮುಂದುವರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಿತಿ ಮಧ್ಯಂತರ ವರದಿಯನ್ನು ನೀಡಿ ಹಿಂದಿನಂತೆ ಪದವಿ ಕೋರ್ಸ್ ಅನ್ನ ಮೂರು ವರ್ಷಕ್ಕೆ ನಿಗದಿ ಮಾಡಲು ಮುಂದಾಗಿದೆ. 2020-21ರಲ್ಲಿ ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ರೂಪಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂದಿನ ಸರ್ಕಾರ ಕರ್ನಾಟದಲ್ಲಿ ಜಾರಿಗೆ ಮಾಡಿತ್ತು. ಇದರಂತೆ ನಾಲ್ಕು ವರ್ಷಗಳ ಪದವಿ ಕೋರ್ಸ್, ಯಾವುದೇ ಸಮಯದಲ್ಲಿ ವ್ಯಾಸಂಗ ಕಡಿತಗೊಳಿಸಿದರೂ ಆ ವರ್ಷದ ಆಧ್ಯನಯನಕ್ಕೆ ಪ್ರಮಾಣ ಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು.
The higher education department has said that the recommendation to drop the course introduced under the new National Education Policy (NEP) has come to an end. All that is pending is the consent of CM Siddaramaiah. It is almost certain that the Congress government will abandon the option of 4-year degree and multiple optional subjects introduced in the state higher education under the National Education Policy implemented during the previous BJP government from 2024-25.
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…
ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200…
ಗ್ರಾಹಕರಿಗೆ ಗುಣಮಟ್ಟದ ಜೇನುತುಪ್ಪ ದೊರಕುವಂತೆ ಮಾಡಲು ಹಾಗೂ ಜೇನು ಕೃಷಿಕರ ಆರ್ಥಿಕ ಮಟ್ಟ…