ಅದೊಂದು ಕಾಲ ಇತ್ತು. ಸಾವದಾನ, ಸಮಧಾನ, ಸರಳತೆಯ ಬದುಕು(Simple Life) ಇತ್ತು. ದಿನಕಳೆದಂತೆ ಬದುಕುವ ರೀತಿ ಬದಲಾಗುತ್ತಾ ಹೋಯ್ತ. ಒಂದೋಳ್ಳೆ ರೀತಿಯಾಗಿ ಸಾಗುತಿದ್ದ ಜೀವನಕ್ಕೆ ಆಧುನಿಕರಣದ(Modernization) ಟಚ್ ಸಿಗುತ್ತಾ ಹೋಯ್ತು. ಹಳೆ ನೀರು ಕೊಚ್ಚಿ ಹೋಗಿ ಹೊಸ ನೀರು ಬಂತು. ಆದರೆ ಬದುಕು ಅದೇ. ಜೀವನ ಶೈಲಿ(Life Style) ಬದಲಾಯ್ತು. ಆದರೆ ಜೀವನ ಅದೇ.. ತಲತಲಾಂತರದಿಂದ ಬಂದ ನಮ್ಮ ಆಚರಣೆ ಬಿಟ್ಟು ಕೆಲವೊಂದು ಬದಲಾವಣೆಗಳು ನಮ್ಮ ಜೀವನದಲ್ಲಿ ಆದ್ರೂ ಅದರಿಂದ ಪ್ರಯೋಜನ ಶೂನ್ಯ..
ಹಾಗಿದ್ದರೆ ಅಂದು ಹೇಗಿತ್ತು…?
– ಹಳ್ಳದಲ್ಲಿ ಹರಿವ ನೀರಿಗೆ ಬಾಯಾಕಿ ಕುಡಿದಾಗ ನೆಗಡಿಯಾಗಲಿಲ್ಲ, ಇಂದು ಬಿಸ್ಲೇರಿ ನೀರು ಕುಡಿದಾಗ ಯಾಕೋ ಕೆಮ್ಮು ಬರುತ್ತಿದೆಯಲ್ಲ.
– ಮೈಲಿಗಟ್ಟಲೆ ಬರಿಗಾಲಿನಲ್ಲಿ ನಡೆದಾಗ ಸುಸ್ತಾಗಲಿಲ್ಲ, ಇಂದು ಬಸ್ಸಿನಲ್ಲಿ ಪ್ರಯಾಣಿಸುವಾಗ ಏಕೋ ದಣಿವಾಗುತ್ತಿದೆಯಲ್ಲ.
– ಹಸುಕರುಗಳೆಲ್ಲ ಹಿತ್ತಲಬಾಗಲಲ್ಲಿ ಹಾಲುಕರೆದು ಅಂಬಾ ಎನ್ನುತ್ತಿದ್ದವಲ್ಲ, ಇಂದು ಮಕ್ಕಳಿಗೆ ಹಸುಗಳ ಚಿತ್ರವನ್ನು ಪುಸ್ತಕದಲ್ಲಿ ತೋರಿಸುವ ಪರಿಸ್ಥಿತಿಯಲ್ಲ.
– ತಂಗಳು ಮಜ್ಜಿಗೆ ಜೊತೆಗೆ ಮುದ್ದೆ ಕಿವುಚಿ ತಿಂದಾಗ ಹಸಿವು ಓಡಿತಲ್ಲ, ಇಂದು ವೈಭವದ ಕೈರುಚಿ ದರ್ಶಿನಿಗಳ ತಿನಿಸುಗಳೆಲ್ಲ ರುಚಿಗಷ್ಟೆ ಇವೆಯಲ್ಲ.
– ಅಟ್ಲಾಸ್ ಸೈಕಲ್ ದಿನವಿಡೀ ತುಳಿವಾಗ ರೋಗ ಹೆದಿರಿತಲ್ಲ, ಇಂದು ಐಶಾರಾಮಿ ಕಾರುಗಳಲ್ಲಿ ಬರುವವರೆಲ್ಲರಿಗೂ ಬಿಪಿ ಶುಗರ್ ಇದೆಯಲ್ಲಾ.
– ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಕಲಿತವರು ಗಟ್ಟಿ ಜೀವನ ಕಟ್ಟಿಕೊಂಡರಲ್ಲ, ಇಂದು ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸಿ ಕಲಿತರೂ ಕೆಲಸವಿಲ್ಲವಲ್ಲ.
– ಸಣ್ಣಪುಟ್ಟ ರೋಗಗಳು ಬರುತ್ತಿದ್ದರೂ ಹೋಬಳಿ ತಾಲ್ಲೂಕಿಗೊಬ್ಬ ವೈದ್ಯರಿದ್ದರಲ್ಲ, ಇಂದು ಹೆಸರು ತಿಳಿಯದ ಅದೆಷ್ಟೋ ರೋಗರುಜುನೆಗಳು ಬಂದು ಬಡಾವಣೆಗೊಂದು ನರ್ಸಿಂಗ್ ಹೋಮ್ ತಲೆಯೆತ್ತುತ್ತಿವೆಯಲ್ಲ.
– ಎಂಬತ್ತು ಪೈಸೆ ಕೊಟ್ಟು ನೋಡಿದ ಸಿನಿಮಾ ಜೀವನಕ್ಕೆ ದಾರಿ ದೀಪವಾಗಿತ್ತಲ್ಲ, ಇಂದು ಸಾವಿರ ನೀಡಿ ಐನಾಕ್ಸ್ ಪಿವಿಆರ್ ಗಳಲ್ಲಿ ನೋಡಿದ ಸಿನಿಮಾದಿಂದ ಬದುಕು ಕಳೆದೋಯಿತಲ್ಲ.
– ಬೆರಳುಗಳ ಸಹಾಯದಿಂದ ಕಲಿತ ಗಣಿತ ವ್ಯಾಪಾರಕ್ಕೆ ಸಹಾಯ ಮಾಡಿತಲ್ಲ, ಕ್ಯಾಲ್ಕುಲೇಟರ್, ಐಪಾಡ್ ಗಳ ಉಪಯೋಗದಿಂದ ಕಲಿತ ಲೆಕ್ಕ ವ್ಯವಹಾರಕ್ಕೆ ಉಪಯೋಗವಾಗಲಿಲ್ಲವಲ್ಲ.
– ನಂಜನಗೂಡು ಹಲ್ಲುಪುಡಿ, ಲೈಫ್ ಬಾಯ್ ಸೋಪಿಗೆ ಸೌಂದರ್ಯ ಬೆದರಿ ಹೆಚ್ಚಿತಲ್ಲ, ಇಂದು ಡವ್ ಸೋಪು, ಫೇರ್ ಅಂಡ್ ಲವ್ಲಿಗೆ ಚರ್ಮ ಸುಕ್ಕುಗಟ್ಟಿತಲ್ಲ.
– ಗೆಡ್ಡೆ ಗೆಣಸು ಅಗೆದು ತಿನ್ನುತ್ತಿರುವಾಗ ಬಡತನವಿರಲಿಲ್ಲ, ಇಂದು ಬಂಗಾರ ಅಗೆದು ಮಾರಿದರೂ ಶ್ರೀಮಂತಿಕೆ ನಿಲ್ಲುತ್ತಿಲ್ಲವಲ್ಲ.
– ಬದುಕು ಕಟ್ಟಿಕೊಳ್ಳಲು ಜನಗಳೆಲ್ಲ ಪೇಟೆಯ ಕಡೆ ಮುಖ ಮಾಡಿದರಲ್ಲ, ಇಂದು ಜೀವ ಉಳಿಸಿಕೊಳ್ಳಲು ಅದ್ಯಾಕೋ ಜನ ಹಳ್ಳಿಗೆ ಬರುವವರಿದ್ದಾರಲ್ಲ ……..
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…