ತಿರುಮಲ ವೆಂಕಟೇಶ್ವರ ದೇವಸ್ಥಾನ ಅಕ್ಟೋಬರ್ 25 ಮತ್ತು ನವೆಂಬರ್ 8 ರಂದು ಮುಂಜಾನೆಯಿಂದ ಸಂಜೆವರೆಗೆ ಬಾಗಿಲು ತೆರೆಯುವುದಿಲ್ಲ. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ) ಅಧಿಕಾರಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಈ ಎರಡೂ ದಿನ ಗ್ರಹಣ ಇರುವ ಕಾರಣಕ್ಕೆ ದೇವಸ್ಥಾನದಲ್ಲಿ ಬೆಳಗ್ಗೆಯಿಂದ ದೇವರ ದರ್ಶನ, ಪೂಜೆಗೆ ಅವಕಾಶ ಇಲ್ಲ. ಅಕ್ಟೋಬರ್ 25ರಂದು ಸೂರ್ಯಗ್ರಹಣ ಇರುವ ಹಿನ್ನೆಲೆ ಬೆಳಗ್ಗೆ 8.11ರಿಂದ ಸಂಜೆ 7.30ರವರೆಗೆ ದೇಗುಲದ ಬಾಗಿಲು ಮುಚ್ಚಿರುತ್ತದೆ. 7.30ರ ನಂತರ ಭಕ್ತರು ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಬರಬಹುದಾಗಿದೆ.
ಹಾಗೇ, ನವೆಂಬರ್ 8ರಂದು ಚಂದ್ರಗ್ರಹಣ ಇರುವ ಕಾರಣ ಬೆಳಗ್ಗೆ 8.40ರಿಂದ ಸಂಜೆ 7.20ರವರೆಗೆ ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ.
300 ರೂಪಾಯಿಯ ವಿಶೇಷ ಪ್ರವೇಶ ದರ್ಶನಂ, ಅರ್ಜಿತಾ ಸೇವೆ, ಬ್ರಹ್ಮೋತ್ಸವ, ಕಲ್ಯಾಣೋತ್ಸವ, ಸಹಸ್ರ ದೀಪಾಲಂಕಾರ, ಉಂಜಲ್ ಸೇವೆ ಸೇರಿ ಯಾವುದೇ ರೀತಿಯ ಪೂಜೆ, ಸೇವೆಗಳೂ ನಡೆಯುವುದಿಲ್ಲ ಎಂದೂ ಅಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…