Advertisement
ಸುದ್ದಿಗಳು

ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ…! | ಗ್ರಾಹಕರು ದೂರು ನೀಡಿದ್ರೆ ಲೈಸನ್ಸ್ ರದ್ದು?

Share

ಇತ್ತೀಚೆಗೆ ರಾಜ್ಯದಲ್ಲಿ ನಂದಿನಿ ಹಾಲಿನ(Nandini Milk) ಬೆಲೆ ಜಾಸ್ತಿಯಾಗಿದ್ದು(Price hike) ಗ್ರಾಹಕರನ್ನು(Customer) ಕಂಗೆಡಿಸಿದೆ. ಈ ಮಧ್ಯೆ ಈಗ ಹಾಲು ಮಾರಾಟ ಮಾಡುವವರು ಅವರ ಲಾಭಕ್ಕಾಗಿ 1-2 ರೂಪಾಯಿ ಜಾಸ್ತಿ ದುಡ್ಡು ತೆಗೆದುಕೊಳ್ಳುತ್ತಿರುವುದು ಬೇರೆ ಗ್ರಾಹಕರಿಗೆ ಹೊರೆಯಾಗಿದೆ. ನಂದಿನಿ ಉತ್ಪನ್ನ ಮಾರಾಟ ವರ್ತಕರು ಹಾಲಿನ ಎಂಆರ್‌ಪಿ(MRP) ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ನಂದಿನಿ ಮಾರಾಟ ವರ್ತಕರಿಗೆ ಕೆಎಂಎಫ್ (KMF) ಎಚ್ಚರಿಕೆ ನೀಡಿದೆ.

Advertisement
Advertisement
ಮೊನ್ನೆ ವರಿಗೆ 22 ರೂ. ಇದ್ದ 500 ಎಂಎಲ್ ನಂದಿನಿ ಈಗ 550 ಎಂಎಲ್ ಪ್ಯಾಕೇಟ್ ಆಗಿ 24 ರೂ. ಆಗಿದೆ. ಇದೇ ರೀತಿ ಪ್ರತಿ ಪ್ಯಾಕೇಟ್‌ಗೆ 50 ಎಂಎಲ್ ಅಧಿಕ ಹಾಲು ನೀಡಿ 2 ರೂ. ಹೆಚ್ಚು ಮಾಡಿದೆ. ಇದಕ್ಕೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ನಂದಿನಿ ಹಾಲನ್ನು ಅಧಿಕೃತ ಸ್ಟೋರ್‌ಗಳಲ್ಲಿ ಮಾತ್ರವಲ್ಲದೇ ಇತರ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ. ಬೆಳಗಿನ ಸಮಯದಲ್ಲಿ ಬಿಟ್ಟು ಉಳಿದ ಸಮಯದಲ್ಲಿ ಕೆಲ ನಂದಿನಿ ಡೀಲರ್ಸ್ಗಳು ಮಾತ್ರವಲ್ಲದೇ ಉಳಿದ ಅನೇಕ ಕಡೆ ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ.
ಇದಕ್ಕೆ ಕಡಿವಾಣ ಹಾಕಿ ಗ್ರಾಹಕರಿಂದ ಹೆಚ್ಚಿನ ಹಣ ಪಡೆಯುವುದನ್ನು ನಿಲ್ಲಿಸಲು ಕೆಎಂಎಫ್ ಮುಂದಾಗಿದೆ. ಎಂಆರ್‌ಪಿಗಿಂತ ಹೆಚ್ಚಿನ ಹಣ ಪಡೆಯುವ ಬಗ್ಗೆ ಗ್ರಾಹಕರು ದೂರು ನೀಡಿದರೆ, ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಲೈಸೆನ್ಸ್ ರದ್ದು ಮಾಡುವುದಾಗಿ ಕೆಎಂಎಫ್ ಎಚ್ಚರಿಸಿದೆ.
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜುಲೈ 1…. ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ… : ಇಂದು ವಿಶೇಷ ವೃತ್ತಿಗಳ ದಿನ

ವೈದ್ಯರ ದಿನ(Doctors day) - ಪತ್ರಕರ್ತರ ದಿನ(Journalist Day) - ಲೆಕ್ಕಪರಿಶೋಧಕರ ದಿನ(Auditor's…

6 hours ago

ಗಾಯವಾದ ಕೆಚ್ಚಲಿನಿಂದ ತೊಟ್ಟಿಕ್ಕುತ್ತಿರುವ ನೀರು : ಹೋಮಿಯೊಪತಿ ಚಿಕಿತ್ಸೆ

ಕೊಟ್ಟಿಗೆಯಲ್ಲಿ(Cow Shed) ಏನೇ ಸಮಸ್ಯೆ ಬಂದರೂ ನನ್ನನ್ನೇ ಸಂಪರ್ಕಿಸುತ್ತಿದ್ದ ಕೃಷಿಕ ಮಿತ್ರರೊಬ್ಬರು ಒಂದಿನ…

6 hours ago

ಎರೆಹುಳಗೊಬ್ಬರ ಕುರಿತ ಮಾಹಿತಿ : ಎರೆಹುಳ ಗೊಬ್ಬರವನ್ನು ಖರೀದಿಸುವಾಗ ಎಚ್ಚರ

ಎರೆಹುಳ(Earthworm) ಕೃಷಿ ಎರೆಗೊಬ್ಬರದ ಉತ್ಪನ್ನ(agricultural fertilizer product) ಅಥವಾ ಒಂದು ಪ್ರಕ್ರಿಯೆಯಲ್ಲಿ ಹುಳುಗಳನ್ನು…

7 hours ago

ಆಹಾರ ಕಲಬೆರಕೆ : ಹೊರಗೆ ತಿನ್ನುವ ಮುಂಚೆ ಈ ಎಲ್ಲಾ ಅಂಶಗಳನ್ನು ಖಚಿತಪಡಿಸಿಕೊಳ್ಳಿ

ನಿನ್ನೆ ಪತ್ನಿ ಅಂಗಡಿಯಿಂದ(Shop) ಗಿಣ್ಣು ತರಿಸಿದ್ದಳು.. ರಾತ್ರಿ ಟಿವಿ ನೋಡುತ್ತಿದ್ದಾಗ ಅದನ್ನು ಕುಯ್ದು…

7 hours ago

ದೇಶದಾದ್ಯಂತ ಕಾಳುಮೆಣಸಿಗೆ ಬಂಗಾರದ ಬೆಲೆ : ಕ್ವಿಂಟಾಲ್‌ಗೆ 88,000 ರೂಪಾಯಿ ಭರ್ಜರಿ ದರ

ವರ್ಷವಿಡೀ ತಾವು ಬೆಳೆದ ಬೆಲೆ(Rate) ಕೈಗೆ ಬರಲು ರೈತರು(Farmer) ಇನ್ನಿಲ್ಲದ ಕಷ್ಟ ಪಡುತ್ತಾರೆ.…

8 hours ago