ಸಾವಯವ ಕೃಷಿಯನ್ನು ಉತ್ತೇಜಿಸುವ ಭಾಗವಾಗಿ ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಪ್ರಕಾಶಂ ಜಿಲ್ಲೆಯ ರೈತರಿಗೆ ಓಂಗೋಲ್ ತಳಿಯ 256 ಜಾನುವಾರುಗಳನ್ನು ನೀಡಲಿದೆ.
ಆಂದ್ರಪ್ರದೇಶದ ಚಿರಾಳ, ಕೂರಿಸಪದವು, ಅರ್ಧವೀಡು, ಮುರ್ತೂರು ಮಂಡಲಗಳಿಗೆ 40 ಹಸುಗಳು ಹಾಗೂ ಹೋರಿಗಳನ್ನು ನೀಡಲಾಗಿದೆ. ಉಳಿದ ಜಾನುವಾರುಗಳನ್ನು ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ನೀಡಲಾಗುವುದು. ಜಿಲ್ಲೆಯ 56 ಮಂಡಲಗಳ ಪೈಕಿ 45 ಮಂಡಲಗಳ ಸಾವಯವ ಕೃಷಿಕರು ಅರ್ಜಿ ಸಲ್ಲಿಸಿದ್ದಾರೆ.
ಸಾವಯವ ಕೃಷಿ ಕಾರ್ಯಕ್ರಮದಡಿ ಪ್ರತಿ ರೈತರಿಗೆ ಒಂದು ಹಸು ಅಥವಾ ಜೋಡಿ ಎತ್ತುಗಳ ನ್ನು ಟಿಟಿಡಿ ಮಂಜೂರು ಮಾಡಿದೆ. ಮೊದಲ ಬ್ಯಾಚ್‌ನ ಓಂಗೋಲ್ ತಳಿಯ ಜಾನುವಾರು ಮಂಗಳವಾರ ಆಗಮಿಸಿದ್ದು ಅದೇ ದಿನ ರೈತರಿಗೆ ವಿತರಿಸಲಾಗಿದೆ. ಉಳಿದ ಗೋವುಗಳನ್ನು ಸದ್ಯವೇ ನೀಡಲಾಗುವುದು ಎಂದು ಝಡ್‌ವಿಎನ್‌ಎಫ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಸುಭಾಷಿಣಿ ಹೇಳಿದರು.
ಪ್ರಸಾದ ತಯಾರಿಕೆಗಾಗಿ, ಟಿಟಿಡಿ ಮಂಡಳಿಯು ಸಾವಯವವಾಗಿ ಬೆಳೆದ 6,000 ಕ್ವಿಂಟಲ್ ಭತ್ತವನ್ನು ಸೂಕ್ತ ಬೆಂಬಲ ಬೆಲೆಯಲ್ಲಿ ಜಿಲ್ಲಾ ಅಧಿಕಾರಿಗಳಿಂದ ಖರೀದಿಸಲು ಒಪ್ಪಿಗೆಯನ್ನು ನೀಡಿದೆ. ಆದುದರಿಂದ 625 ರೈತರು ಝಡ್‌ಬಿಎನ್‌ಎಫ್ ಅಥವಾ ಸಾವಯವ ಕೃಷಿ ಮೂಲಕ ಜಿಲ್ಲೆಯ ಕೃಷಿ ಅಧಿಕಾರಿಗಳ ಬೆಂಬಲದೊಂದಿಗೆ ಬೆಳೆ ಬೆಳೆಯಲು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.
ಮಾವು ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಈ ಬಾರಿ…
ಶಾಲೆಯ ಯೋಜಿತ ಮತ್ತು ಪರಿಣಾಮಕಾರಿ ಆರಂಭಕ್ಕೆ ವಿದ್ಯಾರ್ಥಿ – ಪೋಷಕ – ಶಿಕ್ಷಕ …
ಬಡವರಿಗೆ, ಹಳ್ಳಿಗರಿಗೆ, ದಲಿತರಿಗೆ, ನಿರಕ್ಷಕ ಕುಕ್ಷಿಗಳಿಗೆ, ನಿರುದ್ಯೋಗಿಗಳಿಗೆ ಸಮಾನತೆಯೆಂಬುದು ಮತದಾನದ ಸಂದರ್ಭದಲ್ಲಿ ಮಾತ್ರವೇ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳಲ್ಲಿ ಸಂಪರ್ಕಿಸಿ 9535156490
ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು…