Advertisement
The Rural Mirror ವಾರದ ವಿಶೇಷ

ಉಡುಪಿ ಸೀರೆ | ನಾರಿಯರಿಗೆ ಇದು ಇಷ್ಟವಾಗಬೇಕು ಏಕೆ ? | ಸಚಿವೆ ನಿರ್ಮಲಾ ಸೀತಾರಾಮನ್‌ ಪುತ್ರಿ ವಿವಾಹದಲ್ಲಿ ಕಂಡ ಉಡುಪಿ ಸೀರೆ…! |

Share

ಒಂದು ಕಾಲದ ವೈಭವದಿಂದ ಕಂಗೊಳಿಸುತ್ತಿದ್ದ ಉಡುಪಿ ಸೀರೆ ಈಗ ಮತ್ತೆ ಪುನಶ್ಚೇತನ ಕಾರ್ಯ ಆರಂಭವಾಗಿದೆ.  ಉಡುಪಿ ಮತ್ತು ದ. ಕ ಜಿಲ್ಲೆಗಳಲ್ಲಿ ತಯಾರಾಗುವ ಶುದ್ಧ ಒಂದೆಳೆ ಹತ್ತಿಯ ಕೈ ಮಗ್ಗ ಸೀರೆಗಳನ್ನು “ಉಡುಪಿ ಸೀರೆ” ಎಂದು ಪ್ರಸಿದ್ಧವಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರಿಂದ ಪ್ರೇರೇಪಿತರಾಗಿ 8 ನೇಕಾರಿಕೆ ಸಂಘಗಳು ಸ್ಥಾಪನೆಯಾಗಿದ್ದವು.  ಇದೀಗ ದಿಕೆ ಟ್ರಸ್ಟ್‌ ಕಳೆದ ಕೆಲವು ಸಮಯಗಳಿಂದ ಉಡುಪಿ ನೇಕಾರಿಕೆ  ಬಗ್ಗೆ ಕೆಲಸ ಮಾಡುತ್ತಿದೆ. ಪುತ್ತೂರಿನ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಈ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. 

Advertisement
Advertisement
Advertisement
Advertisement
Advertisement

ಉಡುಪಿ ಸೀರೆಯನ್ನು ವಿಶೇಷ ವಿನ್ಯಾಸದಲ್ಲಿ  ಒಂದೆಳೆಯ ಹತ್ತಿಯ ನೂಲನ್ನು ಬಳಸಿ ನೇಯಲಾಗುತ್ತದೆ. ಈ ಸೀರೆ ತಯಾರಿಯ ವಿಶಿಷ್ಟ ತಂತ್ರಗಾರಿಕೆ ಮತ್ತು ವಿನ್ಯಾಸಕ್ಕಾಗಿ ಉಡುಪಿ ಸೀರೆಗೆ ಭೌ ಗೋಳಿಕ ಭಿನ್ನತೆ ಅಂಕಿತ, GI Tag 2016ರಲ್ಲಿ ಜಿ ಐ ಮಾನ್ಯತೆ ದೊರೆತಿದೆ. ಹೊಸ ವಿನ್ಯಾಸದ ಉಡುಪಿ ಸೀರೆಗಳು ಉಡಲು ಬಹಳ ಆರಾಮದಾಯಕವಾಗಿದ್ದು ಮನ ಸೆಳೆಯುವ ಬಣ್ಣದಿಂದ ಕೂಡಿರುತ್ತದೆ, ಹೀಗಾಗಿ ಈಚೆಗೆ ಉಡುಪಿ ಸೀರೆ ಹೆಚ್ಚು ಗಮನ ಸೆಳೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ  ಪುತ್ರಿ ವಾಙ್ಮಯಿ ಅವರ ವಿವಾಹ ಸಮಾರಂಭಕ್ಕೆ ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ  ಸೀರೆ, ಶಾಲು ಮೂಲಕ  ಹರಸಿದ್ದರು.

Advertisement

ಕದಿಕೆ ಟ್ರಸ್ಟ್‌ ಈ ಉದ್ಯಮ ಉಳಿಯುವುದಕ್ಕೆ , ಉಳಿಸುವುದಕ್ಕೆ ಸತತ ಪ್ರಯತ್ನ ಮಾಡುತ್ತಿದೆ. ಪುತ್ತೂರಿನ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಈ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕದಿಕೆ ಟ್ರಸ್ಟ್‌ನ ಮಮತಾ ರೈ ಹಾಗೂ ಬಿಸಿ ಶೆಟ್ಟಿ  ಅವರು ಉಡುಪಿ ಸೀರೆ ಹಾಗೂ ಅಲ್ಲಿನ ನೇಕಾರಿಗೆ ಬಗ್ಗೆ ಮಾಹಿತಿ ನೀಡಿದರು. ನೇಕಾರಿಗೆ ಉಳಿಸುವುದು  ಹಾಗೂ ಹೊಸ ತಲೆಮಾರಿನ ಮಂದಿ ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಕದಿಕೆ ಟ್ರಸ್ಟ್, ತಾಳಿಪಾಡಿ ಸಂಘದ ಜೊತೆ ಸೇರಿ ಅನೇಕ ಬಿಟ್ಟು ಹೋದ ನೇಕಾರರು ಮತ್ತೆ ನೇಕಾರಿಕೆಗೆ ಬರುವಂತೆ ಮಾಡಿದೆ. ಟ್ರಸ್ಟ್, ನಬಾರ್ಡ್ ಸಂಸ್ಥೆಯ ನೆರವಿನಿಂದ ನೇಕಾರಿಕಾ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. 2018 ರಲ್ಲಿ ತಾಳಿಪಾಡಿ ಸಂಘದಲ್ಲಿ 8 ಇದ್ದ ನೇಕಾರರ ಸಂಖ್ಯೆ ಈಗ 34ಕ್ಕೆ ಏರಿದೆ. ಎರಡು ಜಿಲ್ಲೆಗಳಲ್ಲಿ 45 ರಷ್ಟು ಇದ್ದ ನೇಕಾರರ ಸಂಖ್ಯೆ 72 ಕ್ಕೆ ಏರಿದೆ.  ಹೊಸ ನೇಕಾರರು ಉಡುಪಿ ಸೀರೆ ನೇಕಾರಿಕೆ ಮುಂದುವರಿಸುವ ಭರವಸೆ ಮೂಡಿಸಿದ್ದಾರೆ ಎಂದು ಅವರು ವಿವರಿಸಿದರು. ( ಆಡಿಯೋ ಇಲ್ಲಿದೆ )

Advertisement

ಉಡುಪಿ ಸೀರೆಯ ವಿನ್ಯಾಸ ಹಾಗೂ ಹವಾಮಾನದ ಎಲ್ಲಾ ಕಾಲದಲ್ಲೂ ಉಪಯುಕ್ತವಾಗಿ ಈ ಉಡುಗೆಯ ಕಡೆಗೆ ನಾರಿಯರು ಹಾಗೂ ಜನರು ಬೆಂಬಲಿಸಬೇಕಿದೆ. ಈ ಉದ್ಯಮ ಬೆಳೆವಣಿಗೆಯ ಕಾರಣದಿಂದ ಪರಿಸರದ ಮೇಲೂ ಧನಾತ್ಮಕ ಪರಿಣಾಮಗಳು ಇದ್ದರೆ, ಗ್ರಾಮೀಣ ಉದ್ಯಮಗಳು ಬೆಳೆಯುತ್ತವೆ, ಉದ್ಯೋಗ ಸೃಷ್ಟಿ ಸಾಧ್ಯವಿದೆ. ಅದರ ಜೊತೆಗೆ ಗ್ರಾಮೀಣ ಆರ್ಥಿಕತೆಯ ಮೂಲಕ ಸ್ವಾವಲಂಬೀ ಬದುಕು ಸಾಧ್ಯವಿದೆ ಎನ್ನುವುದು  ಆಶಯವಾಗಿದೆ.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಶ್ರೀಶಕುಮಾರ್‌ ಸ್ವಾಗತಿಸಿದರು. ಐ ಕೆ ಬೊಳುವಾರು ಪ್ರಸ್ತಾವನೆಗೈದರು.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಕ್ಕಿಜ್ವರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ | ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು…

11 mins ago

ಕಟ್ಟಡ ಕಾರ್ಮಿಕರ 26 ಲಕ್ಷ ನಕಲಿ ಕಾರ್ಡ್ ರದ್ದು

ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್‌ಗಳನ್ನು ತಪಾಸಣೆ ನಡೆಸಿ 26  ಲಕ್ಷ…

37 mins ago

ಪ್ರಮುಖ ಯಾತ್ರಾ ಸ್ಥಳಗಳಿಗೆ ರೋಪ್ ವೇ ಸೌಲಭ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ,…

51 mins ago

ಹಾಲಿನ 10 ರೂಪಾಯಿ ಹೆಚ್ಚಳ ಮಾಡುವಂತೆ ರೈತರಿಂದ ಪ್ರಸ್ತಾವನೆ | ದರ ಹೆಚ್ಚಳ ಮಾಡುವ ಕುರಿತು ಸೂಕ್ತ ನಿರ್ಧಾರ |

ಹಾಲಿನ ದರ ಹೆಚ್ಚಳ ಮಾಡುವಂತೆ ರೈತರಿಂದ ಬೇಡಿಕೆ ಹೆಚ್ಚಿದ್ದು, ಪ್ರತಿ ಲೀಟರ್ ಗೆ…

53 mins ago

ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |

ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…

10 hours ago

ಹೊಸರುಚಿ | ಗುಜ್ಜೆ ಕಟ್ಲೇಟ್

ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್‌ ಅವರು ಇಲ್ಲಿ ವಿವರ…

11 hours ago