MIRROR FOCUS

ಜಗತ್ತಿನಾದ್ಯಂತ ಅಸ್ಥಿರ ಮಳೆ | ಕಳೆದೊಂದು ಶತಮಾನಗಳ ಮಾನವನ ಚಟುವಟಿಕೆಗಳೇ ಈ ಏರಿಳಿತಕ್ಕೆ ಕಾರಣ | ಅಧ್ಯಯನ ವರದಿ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಇತ್ತೀಚಿನ ವರ್ಷಗಳಲ್ಲಿ, ಪ್ರಪಂಚದಾದ್ಯಂತ ಮಳೆಯ ಪ್ಯಾಟರ್ನ್‌ ಬದಲಾಗುತ್ತಿದೆ.  ಹವಾಮಾನ ಬದಲಾವಣೆಯಿಂದಾಗಿ ಅನೇಕ ಪ್ರದೇಶಗಳು ಸಂಕಷ್ಟ ಅನುಭವಿಸುತ್ತಿವೆ. ಜಗತ್ತಿನ ಬಹುತೇಕ ದೇಶಗಳು ಅತಿವೃಷ್ಟಿಯ ಪರಿಣಾಮಕ್ಕೆ ತುತ್ತಾಗುತ್ತಿವೆ. ಅಕಾಲಿಕ ಮಳೆ ಜನಜೀವನವನ್ನು ಹೈರಾಣಾಗಿಸುತ್ತಿದೆ. ಇಂತಹ ಅಸ್ಥಿರ ಮಳೆಗೆ ಕಾರಣ ಮಾನವ ನಡೆಸುತ್ತಿರುವ ಚಟುವಟಿಕೆಗಳು ಎಂದು ಹೊಸ ಅಧ್ಯಯನ ಸಾಕ್ಷ್ಯ ಒದಗಿಸಿದೆ. ಈ ಕುರಿತು ಜರ್ನಲ್​ ಸೈನ್ಸ್​ನಲ್ಲಿ ಅಧ್ಯಯನ ಪ್ರಕಟವಾಗಿದೆ.

Advertisement

ಚೈನೀಸ್​ ಆಕಾಡೆಮಿ ಆಫ್​ ಸೈನ್ಸ್​ನ ಇನ್ಸುಟಿಟ್ಯೂಟ್​ ಅಟ್ಮಸ್ಫಿಯರ್​​ ಫಿಸಿಕ್ಸ್​​ (ಐಎಪಿ), ಯುನಿವರ್ಸಿಟಿ ಚೈನೀಸ್​ ಅಕಾಡೆಮಿ ಆಫ್​ ಸೆನ್ಸ್​ ಮತ್ತು ಯುಕೆ ಹವಾಮಾನ ಇಲಾಖೆ ಅಧ್ಯಯನ ನಡೆಸಿದೆ. 1900ರಿಂದ ಇಂತಹ ಅಕಾಲಿಕ ಮಳೆ ವ್ಯವಸ್ಥಿತವಾಗಿ ಹೆಚ್ಚುತ್ತಿದೆ. ಜಾಗತಿಕ ಮಟ್ಟದಿಂದ ಪ್ರಾದೇಶಿಕ ಮಟ್ಟದವರೆಗೂ ದೈನಂದಿನ ಋತುಮಾನದ ಅವಧಿಯಲ್ಲಿ ಅಕಾಲಿಕ ಮಳೆ ಸುರಿಯುವ ಪ್ರಕರಣಗಳು ಹೆಚ್ಚುತ್ತಿದೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ. ಮಳೆಯ ಅಸ್ಥಿರತೆಯು ಒಂದು ಹಂತದಲ್ಲಿ ಅಕಾಲಿಕವಾಗಿ ಸುರಿಯುವಿಕೆ ಮತ್ತು ಅದರ ಪ್ರಮಾಣವನ್ನು ಹೊಂದಿದೆ. ಅಧಿಕ ಅಸ್ಥಿರತೆ ಎಂದರೆ, ಒಂದು ಅವಧಿಯಲ್ಲಿ ಬೀಳುವ ಕಡಿಮೆ ಅಥವಾ ಭಾರೀ ಮಳೆಯಾಗಿದೆ. ಕೆಲವು ಬಾರಿ ಒಂದು ಪ್ರದೇಶದಲ್ಲಿ ಅಧಿಕ ಮಳೆಯಾದರೆ, ಮತ್ತೊಂದೆಡೆ ಮಳೆಯೇ ಇಲ್ಲದ ಪರಿಸ್ಥಿತಿಯೂ ಏರ್ಪಡಬಹುದು. ಇದರ ಪರಿಣಾಮ, ಪ್ರವಾಹ ಮತ್ತು ಶುಷ್ಕತೆಗೆ ಕಾರಣವಾಗುತ್ತದೆ.

ಮಾನವ ಚಟುವಟಿಕೆಗಳಿಂದಾಗಿ ಭೂಮಿಯ ಹವಾಮಾನದಲ್ಲಿನ ಬದಲಾವಣೆ ಅಥವಾ ಮಾನವಜನ್ಯ ಹವಾಮಾನ ಬದಲಾವಣೆ ಎಂದೂ ಕರೆಯಲಾಗುತ್ತದೆ. ಈ ಕಾರಣದಿಂದ ಹೆಚ್ಚುತ್ತಿರುವ ಗಾಳಿ ಮತ್ತು ಸಮುದ್ರ ಮೇಲ್ಮೈ ತಾಪಮಾನ, ಬದಲಾಗುತ್ತಿರುವ ಮಳೆಯ ಮಾದರಿಗಳು, ಸಾಗರ ಆಮ್ಲೀಕರಣ, ಸಮುದ್ರ ಮಟ್ಟದ ಏರಿಕೆ ಮತ್ತು ಪ್ರವಾಹಗಳು, ಬರಗಾಲಗದಂತಹ ತೀವ್ರತರವಾದ ಘಟನೆಗಳು ಈ ಬದಲಾವಣೆಯಲ್ಲಿ ಒಳಗೊಂಡಿದೆ.

ಅಧ್ಯಯನದಲ್ಲಿ, ವಿಶಾಲ ವ್ಯಾಪ್ತಿಯಲ್ಲಿ ದತ್ತಾಂಶವನ್ನು ಪಡೆದು ವಿಶ್ಲೇಷಿಸಲಾಗಿದೆ. ಈ ಮೂಲಕ 1900ರಿಂದಲೂ ಅಸ್ತಿರ ಮಳೆ ಹೆಚ್ಚುತ್ತಿರುವುದು ಗೊತ್ತಾಗಿದೆ. ಇದಕ್ಕಾಗಿ ಯುರೋಪ್​, ಆಸ್ಟ್ರೇಲಿಯಾ ಮತ್ತು ಪೂರ್ವ ಉತ್ತರ ಅಮೆರಿಕದ ಶೇ 75ರಷ್ಟು ಭೂ ಪ್ರದೇಶವನ್ನು ಅಧ್ಯಯನ ಮಾಡಲಾಗಿದೆ. ಸಂಶೋಧನೆಯಲ್ಲಿ ದೈನಂದಿನ ಜಾಗತಿಕ ಮಳೆ ಅಸ್ತಿರತೆ ಪ್ರತಿ ದಶಕದಲ್ಲಿ ಶೇ 1.2ರಷ್ಟು ಹೆಚ್ಚುತ್ತಿದೆ ಎಂಬುದು ಬೆಳಕಿಗೆ ಬಂದಿದೆ. ಮಳೆ ಅಸ್ತಿರತೆಗೆ ಕಾರಣವನ್ನು ಅರ್ಥೈಸಿಕೊಳ್ಳುವ ಪ್ರಯತ್ನವಾಗಿ ಸಂಶೋಧಕರ ತಂಡ ಫಿಂಗರ್‌ಪ್ರಿಂಟಿಂಗ್ ಪತ್ತೆ ಮತ್ತು ಗುಣಲಕ್ಷಣ ವಿಧಾನದ ಆಧಾರದ ಮೇಲೆ ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯ ಪಾತ್ರವನ್ನು ಗುರುತಿಸಿದೆ. ಬಹಳ ಪ್ರಮುಖವಾಗಿ, ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯೇ ಇದಕ್ಕೆ ಕಾರಣ. ಇದು ಹವಾಮಾನವನ್ನು ಬೆಚ್ಚಗೆ ಮತ್ತು ಶುಷ್ಕವಾಗಿಸುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಜಾಂಗ್​ ವೆನ್ಕ್ಸಿಯಾ ತಿಳಿಸಿದ್ದಾರೆ.

ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ನಡುವಿನ ವ್ಯತ್ಯಾಸ : ಸಾಮಾನ್ಯವಾಗಿ ಒಂದಕ್ಕೊಂದು ತಾಳೆಯಾಗುವ ಈ ಘಟನೆಗಳಲ್ಲಿ ವ್ಯತ್ಯಾಸ ಇದೆ. ಜಾಗತಿಕ ತಾಪಮಾನ ಏರಿಕೆಯು ಹವಾಮಾನ ಬದಲಾವಣೆಯ ಹಲವು ಅಂಶಗಳಲ್ಲಿ ಒಂದಾಗಿದೆ. ‘ಗ್ಲೋಬಲ್ ವಾರ‍್ಮಿಂಗ್’ ಭೂಮಿಯ ಮೇಲ್ಮೈ  ಸರಾಸರಿ ತಾಪಮಾನದಲ್ಲಿನ  ಏರಿಕೆಯನ್ನು ಸೂಚಿಸುತ್ತದೆ. ಹವಾಮಾನ ಬದಲಾವಣೆ ಇಡೀ ಹವಾಮಾನದ ಬದಲಾವಣೆಯನ್ನು ಸೂಚಿಸುತ್ತದೆ. ಆದರೂ ಒಂದಕ್ಕೊಂದು ಪೂರಕವಾಗಿದೆ.

Advertisement

Source : IANS

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯ ಹೊಸ ಮಾದರಿಯ 6 ಕಾರು ಧರ್ಮಸ್ಥಳಕ್ಕೆ ಕೊಡುಗೆ

ದೇಶದ ಪ್ರತಿಷ್ಠಿತ ಮಹೇಂದ್ರ ಏಂಡ್ ಮಹೇಂದ್ರ ಕಂಪೆನಿಯು ನೂತನವಾಗಿ ತಯಾರಿಸಿದ ಹೊಸ ಮಾದರಿಯ…

10 minutes ago

ಅಡಿಕೆ ಕೊಳೆರೋಗ | ಶೇ.95 ರಷ್ಟು ಕೃಷಿಕರ ತೋಟದಲ್ಲಿ ಅಡಿಕೆ ಕೊಳೆರೋಗ | ಸಮೀಕ್ಷಾ ವರದಿಯ ಮಾಹಿತಿ

ಶೇ.30-40 ರಷ್ಟು ಅಡಿಕೆ ಕೊಳೆರೋಗದಿಂದ ಹಾನಿಯಾಗಿರುವ ಹಾಗೂ ಶೇ.50 ಕ್ಕಿಂತ ಅಧಿಕ ಅಡಿಕೆ…

19 hours ago

ಸವಿರುಚಿ | ಹಲಸಿನ ಬೇಳೆ (ಹ ಬೀ) ಸೂಪ್‌

ಹಲಸಿನ ಬೇಳೆ ಸೂಪ್‌ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು…

23 hours ago

ಬದುಕು ಪುರಾಣ | ಬದುಕಿಗಾಸರೆ, ಕಾಮಧೇನು

ಮಗನಿಗೆ ತಂದೆ, ಮಗಳಿಗೆ ತಾಯಿ, ಸಿಬ್ಬಂದಿಗಳಿಗೆ ಸಂಸ್ಥೆಯು - ಕಾಮಧೇನು. ಕಾಮಿಸಿದ, ಇಚ್ಛಿಸಿದ…

24 hours ago

ಪ್ರೇಮ ವಿಚಾರದಲ್ಲಿ ಈ ರಾಶಿಯವರಿಗೆ ಭಾವನಾತ್ಮಕ ಏರಿಳಿತ

ಪ್ರೀತಿ ಎಂದರೆ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದು. ಆದರೆ ಎಲ್ಲರಿಗೂ ಪ್ರೀತಿಯಲ್ಲಿ ಒಂದೇ…

24 hours ago

ತಾಳಮದ್ದಳೆಯಲ್ಲಿ ಪರೋಕ್ಷ ವ್ಯಂಗ್ಯವಾಡಿ, ಈಗ ಅದೇ ಮಠದಲ್ಲಿ ಪ್ರತ್ಯಕ್ಷ…!

ಕಾಸರಗೋಡು ಮೂಲದ ಸ್ವಾಮೀಜಿಯೊಬ್ಬರ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಈಚೆಗೆ ನಡೆದ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ…

1 day ago