ಉಪ್ಪಿನಂಗಡಿಯಲ್ಲಿ ಹಿಜಾಬ್‌ ವಿವಾದ | ವರದಿ ಮಾಡಲು ತೆರಳಿದ ಪತ್ರಕರ್ತರಿಗೆ ಹಲ್ಲೆ – ದೂರು | ಆರೋಪಿಗಳ ಬಂಧನಕ್ಕೆ ಪತ್ರಕರ್ತರ ಸಂಘ ಒತ್ತಾಯ |

June 2, 2022
3:39 PM

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿವಾದದ ವರದಿ ಮಾಡಲು ತೆರಳಿದ್ದ ದೃಶ್ಯ ಮಾಧ್ಯಮದ ವರದಿಗಾರರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯನ್ನು ಖಂಡಿಸಿದ ಪತ್ರಕರ್ತರ ಸಂಘವು ತಕ್ಷಣವೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದೆ.

Advertisement

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದೊಂದು ವಾರದಿಂದ ಹಿಜಾಬ್‌ ವಿವಾದ ಚರ್ಚೆಯಾಗುತ್ತಿತ್ತು. ಹಿಜಾಬ್ ಕುರಿತಾಗಿ ನ್ಯಾಯಾಲಯದ ತೀರ್ಪು ಮತ್ತು ಸರ್ಕಾರದ ಸಮವಸ್ತ್ರ ನೀತಿ ಸಂಹಿತೆಯ ಬಳಿಕವು ಈ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬರುತ್ತಿದ್ದರು. ಈ ಬಗ್ಗೆ ಪ್ರಿನ್ಸಿಪಾಲ್ ಸರ್ಕಾರದ ಕಟ್ಟುನಿಟ್ಟಿನ ನಿಯಮ ಮತ್ತು ಕೋರ್ಟ್ ಆದೇಶದ ಬಗ್ಗೆ ವಿವರವಾಗಿ ತಿಳಿಸಿದ ಬಳಿಕವೂ ಹಿಜಾಬ್ ಧಾರಣೆ ಮುಂದುವರಿದಿತ್ತು. ಹೀಗಾಗಿ ಆರು ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದವರೆಗೆ ಕಾಲೇಜಿನಿಂದ ಅಮಾನತು ಮಾಡಿ ಪ್ರಿನ್ಸಿಪಾಲ್ ಜೂನ್ 1 ರಂದು ಆದೇಶ ಹೊರಡಿಸಿದ್ದರು.

ಇಂದು ಕಾಲೇಜ್ ಅವರಣದಲ್ಲಿ ಹಿಜಾಬ್ ಪರ ಹಾಗೂ ವಿರುದ್ದ ಇರುವ ತಂಡಗಳ ನಡುವೆ ವಾಗ್ವಾದ ನಡೆದಿದ್ದು, ಹಿಜಾಬ್ ಧರಿಸಿಕೊಂಡು ಬಂದ 6 ವಿದ್ಯಾರ್ಥಿನಿಯರನ್ನು ಕಾಲೇಜಿನ ಪ್ರಾಂಶುಪಾಲರು ಅಮಾನತುಗೊಳಿಸಿದ್ದರು. ಹೀಗಾಗಿ ವಿವಾದದ ಹಿನ್ನೆಲೆಯಲ್ಲಿ ದೃಶ್ಯ ಮಾಧ್ಯಮದ ಪ್ರಮುಖರ ಸೂಚನೆಯ ಮೇರೆಗೆ ವರದಿ ಮಾಡಲು ವರದಿಗಾರರು ತೆರಳಿದ್ದರು. ಈ ಸಂದರ್ಭ  ದೃಶ್ಯ ಮಾಧ್ಯಮದ ವರದಿಗಾರರಿಗೆ ದಿಗ್ಬಂಧನ ಹಾಕಿ ಚಿತ್ರೀಕರಿಸಿದ ವೀಡಿಯೋಗಳನ್ನು ಬಲವಂತವಾಗಿ ಅಳಿಸಿ ಹಾಕಿ ವಿದ್ಯಾರ್ಥಿಗಳ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎಂದು ದೃಶ್ಯ ಮಾಧ್ಯಮದ ವರದಿಗಾರರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಘಟನೆಯನ್ನು ಖಂಡಿಸಿದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ, ವರದಿಗೆ ತೆರಳಿದ ಪತ್ರಕರ್ತರ ಮೇಲಿನ ಹಲ್ಲೆ ಖಂಡನೀಯ. ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲದೇ ಇದ್ದರೆ ಠಾಣೆಗೆ ಮುತ್ತಿಗೆ ಕೂಡಾ ಹಾಕಲು ಹಿಂದೇಟು ಹಾಕುವುದಿಲ್ಲ ಎಂದು ಹೇಳಿದ್ದಾರೆ

ಇದುವರೆಗೂ ಹಿಜಾಬ್‌ ವಿವಾದವು ಸುದ್ದಿ ಮಾಧ್ಯಮಗಳ ಮೂಲಕವೇ ಹೆಚ್ಚು ಪ್ರಚಾರ ಪಡೆದಿತ್ತು.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದಲ್ಲಿ ಬಿಸಿಲು ಬಿಸಿ ತೀವ್ರ : ಮೈಸೂರಿನಲ್ಲಿ ಸನ್ ಸ್ಟ್ರೋಕ್ ವಾರ್ಡ್ ಆರಂಭಿಸಿದ ಆಸ್ಪತ್ರೆ
April 23, 2026
3:10 PM
by: ಮಿರರ್‌ ಡೆಸ್ಕ್
ರೈತರು ಇಂಧನದಾತರಾಗಬೇಕು – ಭೂಮಿ ಉಳಿಸಿ ಸಮ್ಮೇಳನದಲ್ಲಿ ಸಂದೇಶ
April 23, 2026
2:48 PM
by: ಮಿರರ್‌ ಡೆಸ್ಕ್
ರೈತರ ಆದಾಯ ಹೆಚ್ಚಿಸಲು ಸಮಗ್ರ ಕೃಷಿ ಮಾದರಿ ಅಗತ್ಯ
April 23, 2026
2:41 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 23-04-2026 | ಏಪ್ರಿಲ್ 25 ರಿಂದ ಮಳೆಯ ಸಾಧ್ಯತೆ ಹೆಚ್ಚು
April 23, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror