ಮಣಿಪುರಿ 10 ವರ್ಷದ ಬಾಲಕಿ ತನ್ನ ತಂಗಿಯನ್ನು ತನ್ನ ಮಡಿಲಲ್ಲಿಟ್ಟುಕೊಂಡು ಶಾಲೆಗೆ ಹೋಗುತ್ತಿರುವ ಫೋಟೋ ಗಮನ ಸೆಳೆದಿದೆ. ತಂಗಿಯನ್ನು ಮಡಿಲಿನಲ್ಲಿಯೇ ಇಟ್ಟುಕೊಂಡು ಪಾಠ ಸಹ ಕೇಳಿದ್ದಾಳೆ. ಈ ಫೋಟೋವನ್ನು ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ ಸಿಂಗ್ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ವಿದ್ಯಾರ್ಥಿನಿ 4 ನೇ ತರಗತಿಯಲ್ಲಿ ಓದುತ್ತಿದ್ದು, ಹೆಸರು ಮೈನಿಂಗ್ ಸಿನ್ಲಿಯು ಪಮೇಯ್. ಈಕೆಯ ಪೋಷಕರ ಕೃಷಿ ಕಾರ್ಮಿಕರಾಗಿದ್ದು, ದಿನ ನಿತ್ಯ ಕೆಲಸಕ್ಕೆ ಹೋಗಲೇಬೇಕು. ಆದ್ದರಿಂದ ಮೈನಿಂಗ್ ಸಿನ್ಲಿಯು ಪಮೇಯ್ ತನ್ನ ಪುಟ್ಟ ತಂಗಿಯನ್ನು ಕಂಕುಳಲ್ಲಿ ಕಟ್ಟಿಕೊಂಡು ಶಾಲೆಗೆ ಹೋಗಿದ್ದಾಳೆ. ಈ ಫೋಟೋ ನೋಡಿದ ಟಿ. ಬಿಸ್ವಜಿತ್ ಸಿಂಗ್ ಅವರು ಬಾಲಕಿ ಹಾಗೂ ಆಕೆಯ ಪೋಷಕರನ್ನು ಸಂಪರ್ಕಿಸಿ ರಾಜಧಾನಿ ಇಂಫಾಲ್ ಗೆ ಕರೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈನಿಂಗ್ ಸಿನ್ಲಿಯ ಪದವಿವರೆಗಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವದಾಗಿ ಸಚಿವರು ಹೇಳಿದ್ದಾರೆ.
ಈ ಹೃದಯ ಸ್ಪರ್ಶಿ ಫೋಟೋ ನೆಟ್ಟಿಗರನ್ನು ಮೂಕವಿಸ್ಮಿತರನ್ನಾಗಿ ಮಾಡಿದೆ. ಅಷ್ಟು ಚಿಕ್ಕ ಬಾಲಕಿಯ ತನ್ನ ಜವಾಬ್ದಾರಿಯಿಂದ ನುಣಚಿಕೊಳ್ಳದೇ ಶಿಕ್ಷಣ ಪಡೆಯುವ ಆಕೆಯ ಹಂಬಲವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.