#SowjanyaCase| ತನ್ನದಲ್ಲದ ತಪ್ಪಿಗೆ ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು | ಸಂತೋಷ್ ರಾವ್ ತಂದೆಯ ಪಾದ ಪೂಜೆ ಮಾಡಿ ಕ್ಷಮೆಯಾಚನೆ |

August 10, 2023
12:26 PM
ಸೌಜನ್ಯಾ ಕೊಲೆ ಪ್ರಕರಣದ ತೀರ್ಪಿನಲ್ಲಿ ನಿರ್ದೋಷಿ ಎಂದು ಬಿಡುಗಡೆಯಾದ ಸಂತೋಷ್ ರಾವ್ ಕುಟುಂಬವನ್ನು ಸೌಜನ್ಯ ನ್ಯಾಯದ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರ ತಂಡ ಭೇಟಿ ಮಾಡಿ ಸಾಂತ್ವನವನ್ನು ಹೇಳಿದ್ದಾರೆ.

ಅಪರಾಧಿ ತಪ್ಪಿಸಿಕೊಂಡರು ಪರವಾಗಿಲ್ಲ, ನಿರಪರಾಧಿಗೆ ಶಿಕ್ಷೆಯಾಗಬಾರದು ಅನ್ನೋ ಮಾತಿದೆ. ಆದರೆ ಸೌಜನ್ಯ ಕೇಸ್‌ನಲ್ಲಿ ತನಗೆ ಸಂಬಂಧವೇ ಇಲ್ಲದ ವಿಷಯಕ್ಕೆ ಸಂತೋಷ್‌ ರಾವ್‌ ಸುಮಾರು 11 ವರ್ಷಗಳ ಕಾಲ ಮಾನಸಿಕ, ದೈಹಿಕ, ಜೊತೆಗೆ ಜೈಲು ಶಿಕ್ಷೆಯನ್ನು ಅನುಭವಿಸಿದ್ದಾರೆ. ಇಡೀ ಸಮಾಜದಿಂದ ಅವಮಾನಗೊಂಡು ಏಕಾಂತ ಬದುಕನ್ನು ಬದುಕುತ್ತಿದೆ ಸಂತೋಷ್‌ ರಾವ್‌ ಕುಟುಂಬ. ನಿರ್ದೂಷಿ ಎಂದು ಜೈಲಿನಿಂದ ಬಿಡುಗಡೆಯಾದರೂ ಇಂದೂ ಕೂಡ ಸಮಾಜ ಅವರನ್ನು ಅನುಮಾನದಿಂದಲೇ ನೋಡುತ್ತಿದೆ.

ಈಗ ಸಂತೋಷ್‌ ರಾವ್ ಕುಟುಂಬಕ್ಕೆ ಬೇಕಾಗಿದ್ದು ಸಾಂತ್ವನ, ಜೀವನ ಕಟ್ಟಿಕೊಳ್ಳುವ ಧೈರ್ಯ ತುಂಬುವ ಮನಸ್ಸುಗಳು, ಸಹಾಯ ಹಸ್ತ ಚಾಚುವ ಕೈಗಳು. ಇದನ್ನೆಲ್ಲವನ್ನೂ ಎಂದೂ ನಿರೀಕ್ಷಿಸದ ಸಂತೋಷ್‌ ರಾವ್‌ ಕುಟುಂಬಕ್ಕೆ ಸ್ವ ಇಚ್ಚೆಯಿಂದ ಒಂದಷ್ಟು ಸಹಾಯ ಮಾಡಿ ಕ್ಷಮೆ ಕೇಳಿ, ಗುರುವಂದನೆ ಸಲ್ಲಿಸುವ ಕೆಲಸವನ್ನು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿಅವರ ತಂಡ ಭೇಟಿ ಮಾಡಿ ಬಂದಿದೆ.

ಸೌಜನ್ಯಾ ಕೊಲೆ ಪ್ರಕರಣದ ತೀರ್ಪಿನಲ್ಲಿ ನಿರ್ದೋಷಿ ಎಂದು ಬಿಡುಗಡೆಯಾದ ಸಂತೋಷ್ ರಾವ್ ಕುಟುಂಬವನ್ನು ಸೌಜನ್ಯ ನ್ಯಾಯದ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರ ತಂಡ ಭೇಟಿ ಮಾಡಿ ಸಾಂತ್ವನವನ್ನು ಹೇಳಿದ್ದಾರೆ. ಕಾರ್ಕಳ ತಾಲ್ಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಭೇಟಿ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ, ಇತಿಹಾಸ ಸಂಶೋಧಕ ತಮ್ಮಣ್ಣ ಶೆಟ್ಟಿ, ಸುಧಾಕರ ರಾವ್  ಮತ್ತು  ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರ ತಂಡ ಸಂತೋಷ್ ರಾವ್ ಅವರ ತಂದೆ  ಸುಧಾಕರ ರಾವ್ ಅವರಿಗೆ ಗುರುವಂದನೆ ಸಲ್ಲಿಸಿದ್ದಾರೆ.

ಇದಲ್ಲದೆ ಸುಧಾಕರ ಅವರಿಗೆ ತಲೆಗೂದಲು ಕ್ಷೌರ ಮಾಡಿಸಿ, ಹೊಸಬಟ್ಟೆ ತೊಡಿಸಿ ಪಾದಪೂಜೆ ಮಾಡಿದ್ದಾರೆ. ಬಳಿಕ ಅವರ ಮನೆಗೆ ಸುಣ್ಣಬಣ್ಣ ಬಳಿಯಲಾಗಿದೆ.ಬಳಿಕ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ,ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಂತೋಷ್‌ ರಾವ್ ಮತ್ತು ಕುಟುಂಬ ಮಾನಸಿಕವಾಗಿ, ದೈಹಿಕವಾಗಿ ನೊಂದುಕೊಂಡಿದೆ. ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸಿದೆ.ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ಸಂತೋಷ್ ರಾವ್ ಕುಟುಂಬದ ಕ್ಷಮೆ ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂತೋಷ್ ರಾವ್ ವಿಚಾರದಲ್ಲಿ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸಂತೋಷ್‌ರಾವ್‌ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಸ್ಟ್ಯಾನ್ಲಿ ಹೇಳಿದ್ದಾರೆ.

Source : TRM

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror