ಕೊಳವೆಬಾವಿ ಇದೆ. ನೀರಿನ ಟ್ಯಾಂಕ್ ಇದೆ, ಪೈಪ್ ಲೈನ್ ಇದೆ. ಕುಡಿಯುವ ನೀರು ಮಾತ್ರಾ ಇಲ್ಲ…! . ಇದು ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆಟ್ಟಿನಡ್ಕದಲ್ಲಿನ ಪರಿಸ್ಥಿತಿ. ಸರಕಾರದ ಯೋಜನೆಗಳೆಲ್ಲಾ ಹೀಗಾದರೆ ಹೇಗೆ ?
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮ ಪಂಚಾಯತ್ ಅತ್ಯಂತ ಪ್ರತಿಷ್ಟಿತ ಪಂಚಾಯತ್ ಎಂಬ ಹೆಗ್ಗಳಿಕೆ. ಇಲ್ಲಿ ಎಲ್ಲಾ ಪಕ್ಷಗಳಿಂದಲೂ ಪ್ರಮುಖ ನಾಯಕರು ಇದ್ದಾರೆ. ಆದರೆ ಎಲ್ಲಾ ಯೋಜನೆಗಳೂ ಅರ್ಧಕ್ಕೆ ಅರ್ಧವೇ..!. ಮೊನ್ನೆ ಮೊನ್ನೆ ಗುತ್ತಿಗಾರಿನಲ್ಲಿ ಸುದ್ದಿ ಮಾಡಿದ್ದು ಕುಡಿಯುವ ನೀರು. ಗುತ್ತಿಗಾರು ಪೇಟೆಯಲ್ಲಿಯೇ ಕುಡಿಯುವ ನೀರಿಲ್ಲದೆ ಹಲವು ದಿನಗಳಾದರೂ ಯಾವುದೇ ಸ್ಪಂದನ ಇರಲಿಲ್ಲ ಎಂದು ಸಾರ್ವಜನಿಕರು ಹೇಳಿದ್ದರು.
ಇನ್ನೊಂದು ಸುದ್ದಿಯಾದ ಸಂಗತಿ ಎಂದರೆ ಜಿಮ್ ಕೇಂದ್ರ. ಗುತ್ತಿಗಾರಿಗೆ ಜಿಮ್ ಪರಿಕರಗಳು ಲಭ್ಯವಿದ್ದರೂ ಅದು ಸಾರ್ವಜನಿಕರಿಗೆ ಉಪಯೋಗಕ್ಕೆ ಸಿಗಲಿಲ್ಲ. ಈ ಬಗ್ಗೆಯೂ ಯಾವುದೇ ಸ್ಪಂದನೆ ಇಲ್ಲ.
ಇದೀಗ ಇದೇ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕದಲ್ಲಿ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವಿಶ್ವ ಬ್ಯಾಂಕ್ ಯೋಜನೆಯಡೆ ನೀರಿನ ಟ್ಯಾಂಕ್ ನಿರ್ಮಾಣವಾಗಿದೆ. ಕೆಲವು ಸಮಯಗಳವರೆಗೆ ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. ಈಚೆಗೆ ಸುಮಾರು ಆರೇಳು ವರ್ಷಗಳಿಂದ ಈ ಟ್ಯಾಂಕ್ ಗೆ ನೀರು ಪೂರೈಕೆ ಆಗುತ್ತಿರಲಿಲ್ಲ. ಹೀಗಾಗಿ ಮೆಟ್ಟಿನಡ್ಕ ಶಾಲೆ ಹಾಗೂ ಆಸುಪಾಸಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಅಚ್ಚರಿ ಎಂದರೆ ಸುಳ್ಯದ ಶಾಸಕರ ಸಂಬಂಧಿಕರೋರ್ವರಿಗೂ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಅವರು ಈ ಬಗ್ಗೆ ಸಮಾಧಾನದಿಂದಲೇ ನೀರು ಹೊತ್ತು ತರುತ್ತಿದ್ದಾರೆ…!. ಈ ಎಲ್ಲಾ ಸಮಸ್ಯೆ ನಿವಾರಣೆಗೆ ನೂತನ ಕೊಳವೆ ಬಾವಿ ಕೂಡಾ ತೆಗೆಯಲಾಗಿದೆ. ಅದಾದ ಬಳಿಕ ಪಂಪ್, ಪೈಪ್ ಅಳವಡಿಕೆಗೆ ಕೂಡಾ ಅನುದಾನ ಇದ್ದರೂ ಟ್ಯಾಂಕ್ ಗೆ ಇನ್ನೂ ನೀರು ಹಾಯಿಸಲು ಸಾಧ್ಯವಾಗಲಿಲ್ಲ. ಈಚೆಗೆ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಗ್ರಾಪಂ ಸದಸ್ಯೆಯೊಬ್ಬರು ಸ್ವತ: ಹಾರೆ ಹಿಡಿದು ಕೆಲಸ ಮಾಡಿದ್ದರು. ಈಗ ಮೆಟ್ಟಿನಡ್ಕದ ಇನ್ನೊಂದು ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಪಾ ವೈರಸ್ ಹರಡುವಿಕೆಯ ವಿರುದ್ಧ ರಾಜ್ಯವು ತನ್ನ ತಡೆಗಟ್ಟುವ ಕ್ರಮಗಳನ್ನು ತೀವ್ರಗೊಳಿಸಿದೆ ಎಂದು…
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ದೇವರು ಹಾಗೂ ಗುರು…
ಇಂದ್ರಿಯ ನಿಗ್ರಹವನ್ನೊಳಗೊಂಡ ಬ್ರಹ್ಮಚರ್ಯವು ಕೇವಲ ಬಾಲ್ಯಕಾಲದ ನಿಬಂಧನೆಯಲ್ಲ. ಅದು ಅವಿವಾಹಿತರಿಗಷ್ಟೇ ಅಲ್ಲ, ವಿವಾಹಿತರಿಗೂ…
ಅಂತರ್ಮುಖಿಯಾಗಲು, ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆಯಲು ಚಾತುರ್ಮಾಸ ಉತ್ತಮ ಸಂದರ್ಭ. ಪ್ರಪಂಚವನ್ನು ಕತ್ತಲು ಮಾಡಿ…
ಈಗಿನಂತೆ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣಗಳಿದ್ದು, ಜುಲೈ 16ರಿಂದ…
ಮುಂದಿನ ಏಳು ದಿನಗಳ ಕಾಲ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಕೆಲವು ಕಡೆ ಭಾರೀ…