ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿ ಮಂಗಳವಾರ ನಸುಕಿನ ಜಾವ ಗುಡ್ಡ ಕುಸಿತ ಉಂಟಾಗಿದೆ. ಭಾರಿ ಭೂಕುಸಿತದ ನಂತರ ಹತ್ತು ಮೃತದೇಹಗಳು ಪತ್ತೆಯಾಗಿದೆ. ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕೇರಳ ರಾಜ್ಯ ವಿಪತ್ತು ನರ‍್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದೆ. ನೂರಾರು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳೊಂದಿಗೆ ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ ತೆರಳುತ್ತಿದೆ.………ಮುಂದೆ ಓದಿ……..
ಮಂಗಳವಾರ ಮುಂಜಾನೆ ಕೇರಳದ ವಯನಾಡ್‌ನ ಚೂರಲ್‌ಮಲಾ ಮತ್ತು ಮುಂಡಕ್ಕಾಯಿಯಲ್ಲಿ ಭಾರೀ ಮಳೆಯ ನಡುವೆ ಭೂಕುಸಿತ ಸಂಭವಿಸಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ. ತೊರ್ನಾಡ್ ಗ್ರಾಮದಲ್ಲಿದ್ದ ನೇಪಾಳಿ ಕುಟುಂಬದ ಒಂದು ವರ್ಷದ ಮಗು ಭೂಕುಸಿತದಲ್ಲಿ ಸಾವನ್ನಪ್ಪಿದೆ ಎಂದು ವಯನಾಡ್ ಜಿಲ್ಲಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇರಳದ ಸುದ್ದವಾಹಿನಿ ಮನೋರಮಾ ಪ್ರಕಾರ, ಗ್ರಾಮದ ಪ್ರಮುಖ ಸೇತುವೆಯೊಂದು ಕೊಚ್ಚಿ ಹೋಗಿದೆ. ಭೂಕುಸಿತದ ಸ್ಥಳಗಳಲ್ಲಿ ಅನೇಕರು ಸಿಲುಕಿಕೊಂಡಿದ್ದಾರೆ. ಮನೋರಮಾ ವರದಿಗಳ ಪ್ರಕಾರ ಸಾವುನೋವುಗಳ ಸಂಖ್ಯೆ ನಿಖರವಾಗಿ ತಿಳಿದಿಲ್ಲ.
Wayanad Landslide | Ten killed, hundreds feared trapped amid landslides near Meppadi | rescue operations underway
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…