ಕೃಷಿ-ಮಾರುಕಟ್ಟೆ | ಚಾಲಿ ಅಡಿಕೆಯ ಉಪಯೋಗದ ವಿಧಾನಗಳು

June 3, 2025
9:27 PM
ಅಡಿಕೆಯನ್ನು ಮುಖ್ಯವಾಗಿ ಬೀಡಾದ ತಯಾರಿಯಲ್ಲಿ ಒಂದು ಮೂಲ ಉತ್ಪನ್ನ ಆಗಿ ಬಳಸಲಾಗುತ್ತಿದೆ.ಇದನ್ನು ವಿವಿಧ ರೀತಿಯ ತುಂಡುಗಳನ್ನಾಗಿ ಮಾಡಿ ಗ್ರಾಹಕರ ರುಚಿಗನುಗುಣವಾಗಿ ಬೀಡಾದ ಮಾರಾಟಗಾರರಿಗೆ ಉತ್ತರ ಭಾರತದಲ್ಲಿ ಪೂರೈಸಲಾಗುತ್ತದೆ.ಇಲ್ಲಿ ಬೆಳೆಗಾರರು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಈ ಎಲ್ಲಾ ಪಾನ್ ವಾಲಾಗಳು ತಾವು ಖರೀದಿಸಿದ ಅಡಿಕೆಗೆ ತಕ್ಷಣ ಹಣದ ಪಾವತಿಯನ್ನು ಮಾಡದೆ, ಇವರ ವ್ಯವಹಾರ ಸಾಲದ ರೂಪದ್ದೆಂಬುದು.....

ಅಡಿಕೆಯನ್ನು ಮುಖ್ಯವಾಗಿ ಬೀಡಾದ ತಯಾರಿಯಲ್ಲಿ ಒಂದು ಮೂಲ ಉತ್ಪನ್ನ ಆಗಿ ಬಳಸಲಾಗುತ್ತಿದೆ.ಇದನ್ನು ವಿವಿಧ ರೀತಿಯ ತುಂಡುಗಳನ್ನಾಗಿ ಮಾಡಿ ಗ್ರಾಹಕರ ರುಚಿಗನುಗುಣವಾಗಿ ಬೀಡಾದ ಮಾರಾಟಗಾರರಿಗೆ ಉತ್ತರ ಭಾರತದಲ್ಲಿ ಪೂರೈಸಲಾಗುತ್ತದೆ.ಇದರ ಪೂರೈಕೆಗಾಗಿ ಅಲ್ಲಿ ಹಲವು ಗೃಹ ಉದ್ದಿಮೆಗಳು ಕಾರ್ಯ ನಿರ್ವಹಿಸುತ್ತವೆ. ಇವನ್ನು ಕಟ್ಟಿಂಗ್ ಸೆಂಟರ್ಗಳೆಂದು ಕರೆಯಲಾಗುತ್ತದೆ. ಇಲ್ಲಿ ಸುಮಾರು ಹತ್ತರಿಂದ ಇಪ್ಪತ್ತು ಕೆಲಸಗಾರರು ಕಾರ್ಯ ನಿರ್ವಹಿಸುತ್ತಾರೆ.ಇವುಗಳಲ್ಲಿ ವಿವಿಧ ರೂಪದಲ್ಲಿ ಅಡಿಕೆ ಪರಿವರ್ತನೆ ಆಗಿ ಅದನ್ನು ವಿವಿಧ ತೂಕದ ಪ್ಯಾಕೆಟುಗಳಲ್ಲಿ ತುಂಬಿಸಿ ಬೀಡಾ ಅಂಗಡಿಗಳ ಮಾಲಕರಿಗೆ ಪೂರೈಸಲಾಗುತ್ತದೆ.ಈ ವ್ಯವಹಾರವು ಹೆಚ್ಚಾಗಿ ಸಾಲದ ರೂಪದಲ್ಲಿ ಆಗುತ್ತದೆ.ಇನ್ನು ಈ ಪೂರೈಕೆದಾರರು ಬೀಡಾದ ತಯಾರಿಗೆ ಬೇಕಾದ ಇತರೇ ಉತ್ಪನ್ನಗಳಾದ ವೀಳ್ಯದ ಎಲೆ, ಸುಣ್ಣ, ತಂಬಾಕು,ಸಂಬಾರ ಪದಾರ್ಥಗಳು ಇತ್ಯಾದಿಗಳನ್ನು ತಮ್ಮ ರಖಂ ಮತ್ತು ಚಿಲ್ಲರೆ ಅಂಗಡಿಗಳ ಮೂಲಕ ಕೊಡುವುದಿದೆ.…..ಮುಂದೆ ಓದಿ….

ಚಾಲಿ ಅಡಿಕೆಯನ್ನಿಂದು ಬೀಡಾ ಅಂಗಡಿಗಳಿಗೆ ಹುರಿದು,ತುಂಡಾಗಿ ಮತ್ತು ಪುಡಿಯಾಗಿ ಪೂರಯಿಸಲಾಗುತ್ತಿದ್ದು,ಇವೆಲ್ಲಾ ಅಂಗಡಿಗಳ ಅಗತ್ಯಕ್ಕೆ ಅನುಗುಣವಾಗಿ ಪೂರೈಕೆ ಆಗುತ್ತದೆ.ಸಾಮಾನ್ಯವಾಗಿ ಬೀಡಾ ಅಂಗಡಿ ಮಾಲಿಕರು ಇಡಿ ಅಡಿಕೆಯನ್ನು ಹೆಚ್ಚಾಗಿ ಖರೀದಿಸುತ್ತಾರೆ ಮತ್ತು ಇತರೇ ಅಡಿಕೆಗೆ ಬೇಡಿಕೆ ಕಡಿಮೆ.ಇದಕ್ಕೆ ಮುಖ್ಯ ಕಾರಣ ಸಂಸ್ಕರಣೆಗೊಂಡಂತೆ ಅದರ ಬೆಲೆ ಜಾಸ್ತಿ ಆಗಿರುವುದು.ಕೆಲವೊಂದು ಬೀಡಾದ ಅಂಗಡಿಯವರು ಒಳ್ಳೆ ಗುಣಮಟ್ಟದ ಅಡಿಕೆ ಖರೀದಿಯೊಂದಿಗೆ ಪಠೋರವನ್ನು ತೆಕ್ಕೊಂಡು ಬೀಡಾದ ತಯಾರಿಗೆ ಅದನ್ನು ಬಳಸುತ್ತಾರೆ.

ಇನ್ನು ಚಾಲಿ ಅಡಿಕೆಯನ್ನು ಗಾತ್ರಕ್ಕೆ ಅನುಗುಣವಾಗಿ ಗ್ರಾಹಕರು ಕೊಂಡು ಕೊಂಡು ತಮ್ಮಲ್ಲಿ ನಡೆಯುವ ದಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಾರೆ.ಇಲ್ಲಿ ಅಡಿಕೆಯ ಬಳಕೆ ಆಗುವ ಅಡಿಕೆಯ ಗಾತ್ರ ಅವರ ಪ್ರತಿಷ್ಠೆಯನ್ನು ನಿರ್ಧರಿಸುತ್ತದೆ.

ಬೀಡಾ ಅಂಗಡಿಗಳು :  ಭಾರತದಲ್ಲಿ ಲಕ್ಷಕ್ಕಿಂತಲೂ ಅಧಿಕ ಬೀಡಾ ಅಂಗಡಿಗಳು ಇದ್ದು,ಇತ್ತೀಚಿನ ವರ್ಷಗಳಲ್ಲಿ ಅವುಗಳ ಸಂಖ್ಯೆ ಕಡಿಮೆ ಆಗುತ್ತಿದೆ.ಇದಕ್ಕೆ ಮುಖ್ಯ ಕಾರಣ ನಗರಗಳಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು.ಈ ಅಂಗಡಿಗಳಿದ್ದಾಗ ಎಲ್ಲೆಂದರಲ್ಲಿ ಉಗಿಯುವುದು ಆಗುವುದರಿಂದ ಇಲಾಖೆಗಳ ಇವುಗಳ ಹತೋಟಿಗೆ ಮುಂದಾಗುತ್ತಿರುವುದು ಇವುಗಳ ಇಳಿಕೆಗೆ ಕಾರಣ ಆಗುವುದರೊಂದಿಗೇ ಈಗ ಲಭ್ಯ ಆಗುತ್ತಿರುವ ಗುಟ್ಕಾ ಕೂಡ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಒಂದು ಬೀಡಾ ಅಂಗಡಿಯಲ್ಲಿ ದಿನ ಒಂದರ ಕಾಲು ಕಿಲೋದಿಂದ ಹಿಡಿದು ಐದು ಕಿಲೋ ತನಕ ಅಡಿಕೆ ಬೀಡಾಕ್ಕಾಗಿ ಬಳಕೆ ಆಗುತ್ತದೆ. ಗುಜರಾತ್,ಮಹಾರಾಷ್ಟ್ರ,ಮದ್ಯ ಪ್ರದೇಶ ಇತ್ಯಾದಿ ರಾಜ್ಯಗಳ ಅಂಗಡಿಗಳಲ್ಲಿ ಈ ಬಳಕೆ ಅಧಿಕ ಪ್ರಮಾಣದಲ್ಲಿ ಆದರೆ ಉಳಿದ ರಾಜ್ಯಗಳಲ್ಲಿ ಇದು ಕಡಿಮೆ ಆಗಿದೆ. ದೇಶದಲ್ಲಿರುವ ಬೀಡಾ ಅಂಗಡಿಗಳನ್ನು ಮುಖ್ಯವಾಗಿ ಐದು ರೀತಿಯಲ್ಲಿ ವರ್ಗೀಕರಿಸಬಹುದು.ಈ ರೀತಿಯ ಅಂಗಡಿಗಳು ಗ್ರಾಹಕರ ರುಚಿ,ಶುಚಿ,ವ್ಯವಹಾರದ ಸ್ಥಳಕ್ಕೆ ಅನುಗುಣವಾಗಿ ಇಲ್ಲವೇ ಬೇಡಿಕೆಯ ಪ್ರದೇಶಕ್ಕೆ ಅನುಗುಣ ಆಗಿ ಮಾಡಬಹುದಾಗಿದೆ.ಅವುಗಳೆಂದರೆ…

  • ಕಳಪೆ ದರ್ಜೆ :  ಈ ಅಂಗಡಿಗಳು ಹೆಚ್ಚಾಗಿ ಬಡ ಜನರ ಬೇಡಿಕೆಗೆ ಅನುಗುಣವಾಗಿ ಕಾರ್ಯ ನಿರ್ವಹಿಸುವವು.ಇಲ್ಲಿ ದೊರಕುವ ಬೀಡಾದ ಗುಣಮಟ್ಟ ಕೆಳ ದರ್ಜೆಯದ್ದು ಆಗಿದ್ದು,ಇದರ ಬೆಲೆಯೂ ಕಡಿಮೆ.ಇಲ್ಲಿ ಬೀಡಾವನ್ನು ತಯಾರಿಸಲು ತಯಾರಿಸಲು ಕಡಿಮೆ ಬೆಲೆಯ ಪೂರಕ ಉತ್ಪನ್ನಗಳನ್ನು ಉಪಯೋಗಿಸುತ್ತಾರೆ.ಇಲ್ಲಿ ಬಳಸುವ ಅಡಿಕೆ,ತಂಬಾಕು ಇತ್ಯಾದಿಗಳ ಗುಣಮಟ್ಟ ಕಡಿಮೆಯದ್ದಾಗಿದೆ.ಇಲ್ಲಿ ಉತ್ತಮ ಗುಣಮಟ್ಟದ ತಂಬಾಕನ್ನು ಗ್ರಾಹಕ ಕೇಳಿದಾಗ ಉತ್ತಮ ಗುಣಮಟ್ಟದ ತಂಬಾಕನ್ನು ಪೂರಯಿಸುವ ಡಬ್ಬದಲ್ಲಿ ಕಳಪೆ ಗುಣಮಟ್ಟದ ತಂಬಾಕನ್ನು ತುಂಬಿಸಿ ಅದನ್ನು ಗ್ರಾಹಕರಿಗೆ ಕೊಡುವ ಕ್ರಮ ಸರ್ವೇ ಸಾಮಾನ್ಯ.ಈ ರೀತಿಯ ಅಂಗಡಿಗಳು ಹೆಚ್ಚಾಗಿ ಸಂತೆ ಪ್ರದೇಶಗಳು,ಹೆಚ್ಚು ಜನ ಸೇರುವ ಬಸ್ ನಿಲ್ದಾಣ,ಸಾಮಾನ್ಯ ಗುಣಮಟ್ಟದ ಹೋಟೆಲ್ಗಳು,ಇಲ್ಲವೇ ತರಾತುರಿಯಲ್ಲಿ ವ್ಯವಹಾರ ಕೈಗೊಳ್ಳುವ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.ಇದರ ಸ್ಥಾಪನೆ ಮತ್ತು ನಿರ್ವಹಣಾ ವೆಚ್ಚ ಕಡಿಮೆ ಇದ್ದರೂ ಈ ಅಂಗಡಿಯ ವಾರಸುದಾರರಿಗೆ ವಿವಿಧ ವರ್ಗಗಳ ಕಿರುಕುಳ ಜಾಸ್ತಿ.
  • ಸಾಮಾನ್ಯ ದರ್ಜೆ : ಇವು ಹೆಚ್ಚಾಗಿ ಹೋಟೆಲ್,ಸಿನಿಮಾ ಮಂದಿರ ಪಟ್ಟಣಗಳ ರಸ್ತೆ ಬದಿಯಲ್ಲಿ ಒಂದು ಬಣ್ಣ ಬಣ್ಣದ ಛತ್ರಿ ಅಡಿಯಲ್ಲಿ ಒಂದೋ ಮೇಜನ್ನಿಟ್ಟು ಇಲ್ಲವೇ ಕಂಚಿನ ತಟ್ಟೆಯಲ್ಲಿಟ್ಟು ಕಾರ್ಯ ನಿರ್ವಹಿಸುತ್ತವೆ.ಇಲ್ಲಿ ಉತ್ತರ ಪ್ರದೇಶ,ಗುಜರಾತ್ ಮತ್ತಿತರ ರಾಜ್ಯಗಳಿಂದ ವಲಸೆ ಬಂದ ಜನರು ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಾರೆ.ಇಲ್ಲಿ ದೊರಕುವ ಬೀಡಾ ಉತ್ತಮ ಗುಣಮಟ್ಟದ ಇಲ್ಲದಿದ್ದರೂ ಕಳಪೆ ಮಟ್ಟದ್ದಲ್ಲ.ಇಲ್ಲಿಗೆ ಬರುವ ಗ್ರಾಹಕರು ವಿಭಿನ್ನ ವರ್ಗಕ್ಕೆ ಸೇರಿದ್ದು,ಇಲ್ಲಿ ಗ್ರಾಹಕರನ್ನು ನೋಡಿ ಅವರ ರುಚಿಯನ್ನು ಗ್ರಹಿಸುವ ಮಟ್ಟಕ್ಕೆ ಈ ಪಾನ್ವಾಲಗಳು ಶಿಕ್ಷಿತರಾಗಿ ಇದ್ದಾರೆ.
  • ಮದ್ಯ ದರ್ಜೆ : ಇವು ಹೆಚ್ಚಾಗಿ ಮಾದ್ಯಮ ದರ್ಜೆಯ ಹೋಟೆಲ್ ಗಳ ಮುಂಬಾಗದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತವೆ.ಇಲ್ಲಿ ಎಲ್ಲಾ ತರದ ಬೀಡಾ ದೊರಕುತ್ತಿದ್ದು,ಇವಕ್ಕೆ ತಗಲುವ ವೆಚ್ಚ ನಿರ್ದಿಷ್ಟ ಮಟ್ಟದ್ದಾಗಿದೆ.ಈ ಎಲ್ಲಾ ಅಂಗಡಿಗಳು ಹೋಟೆಲ್ ಮಾಲಕರ ಕೃಪಾಕಟಾಕ್ಷಕ್ಕೆ ಒಳಪಟ್ಟಿದೆ.ಇಲ್ಲಿ ಒಂದು ನಿರ್ದಿಷ್ಟ ಬಾಡಿಗೆ ಇರುತ್ತದೆ.ಇಲ್ಲಿನ ಪಾನವಲಾಗಲು ಹೋಟೆಲ್ಗೆ ಬರುವ ಗ್ರಾಹಕರನ್ನು ಸೆಳೆಯಲು ಯಶಸ್ವಿ ಆಗುವುದು ಒಂದು ಸಾಮಾನ್ಯ ಸಂಗತಿ.
  • ಉತ್ತಮ ದರ್ಜೆ : ಈ ಪಾನವಾಲಾಗಳು ಹೆಚ್ಚಾಗಿ ಉತ್ತಮ ದರ್ಜೆಯ ಹೋಟೆಲ್‌ ಗಳ ಎದುರುಗಡೆ ಹೋಟೆಲ್ ಆವರಣದಲ್ಲಿ ಒಂದು ಪ್ರತ್ಯೇಕ ಕೊಠಡಿಯಲ್ಲಿ,ಇಲ್ಲವೇ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಒಂದು ಪ್ರತ್ಯೇಕ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.ಇಲ್ಲಿನ ಪಾನ್ ವಾಲಾಗಳು ಒಂದು ರೀತಿಯ ಶಿಸ್ತನ್ನು ಹೊಂದಿದ್ದು,ಇಲ್ಲಿ ಸ್ವಚ್ಚತೆಗೆ ಆದ್ಯತೆ ಹೆಚ್ಚು.ಗ್ರಾಹಕರ ರುಚಿಗೆ ಅನುಗುಣವಾಗಿ ಇಲ್ಲಿ ಬೀಡಾ ತಯಾರಿಸಲಾಗುತ್ತಿದ್ದು,ಇವುಗಳ ಬೆಲೆಯೂ ಹೆಚ್ಚು.ಇಲ್ಲಿಗೆ ಬರುವ ಗ್ರಾಹಕರು ಹೆಚ್ಚಾಗಿ ಖಾಯಂ ಗಿರಾಕಿಗಳು ಆಗಿದ್ದು,ಒಬ್ಬೊಬ್ಬ ಗ್ರಾಹಕ ಒಂದು ಬಾರಿ ಒಂದಕ್ಕಿಂತ ಹೆಚ್ಚು ಬೀದಾಗಳನ್ನು ಕಟ್ಟಿಸಿ ಕೊಂಡು ಹೋಗುವುದು ರೂಢಿ.ಗ್ರಾಹಕರ ವೈಯಕ್ತಿಕ ವಿಚಾರಗಳ ಬಗ್ಗೆ ಪಾನ್ವಾಲಾಗಲು ಆಸಕ್ತಿ ತೋರಿಸುವುದರಿಂದ ಇವರು ಗ್ರಾಹಕ ಸ್ನೇಹಿ ಎನ್ನಬಹುದು.ಇಲ್ಲಿ ಬಳಸುವ ಅಡಿಕೆ ಮತ್ತಿತರ ಉತ್ಪನ್ನಗಳೂ ಉತ್ಕೃಷ್ಟ ಮಟ್ಟದ್ದಾಗಿದೆ.ದೇಶದ ಕೆಲವೊಂದು ಬಾಗಗಳಲ್ಲಿ ,ಈ ರೀತಿಯ ಪಾನ್ ಅಂಗಡಿಗಳಲ್ಲಿ ಬೀಡಕ್ಕೆ ಮುಂಗಡ ಕಾದಿರಿಸುವ ಕ್ರಮ ಇದೆ.
  • ಅತ್ಯುತ್ತಮ ದರ್ಜೆ :  ಈ ರೀತಿಯ ಪಾನ್ ಅಂಗಡಿಗಳು ಹೆಚ್ಚಾಗಿ ಪಂಚತಾರ ಹೋಟೆಲ್ ಗಳ ಆವರಣ,ಮೆಟ್ರೋ ಪಟ್ಟಣಗಳಲ್ಲಿ ಉತ್ತಮ ದರ್ಜೆಯ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತವೆ.ಕೆಲವು ಕಡೆ ಹವಾನಿಯಂತ್ರಿತ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಇಲ್ಲಿ ದೊರಕುವ ಬೀಡಾದ ರುಚಿ ಮತ್ತು ಅವುಗಳಿಗೆ ವಿಧಿಸುವ ದರ ಅಧಿಕ ಪ್ರಮಾಣದಲ್ಲಿ ಇದೆ.ಈ ಬೀಡಾಗಳಿಗೆ ಆಂತರಿಕ ಮತ್ತು ಅಂತರರಾಷ್ಟ್ರೀಯ ಶ್ರೀಮಂತ ವರ್ಗದ ಗ್ರಾಹಕರು ಇದ್ದಾರೆ.ಆದ್ದರಿಂದ ಇಲ್ಲಿನ ಉತ್ಪನ್ನಗಳೂ ದುಬಾರಿ ಆಗಿದೆ.

ಬೀಡಾ ಅಂಗಡಿಯಲ್ಲಿ ಇರುವ ಉತ್ಪನ್ನಗಳ ಪಟ್ಟಿ:  ಸಾಮಾನ್ಯ ದರ್ಜೆಯಿಂದ ಹಿಡಿದು ಉತ್ತಮ ದರ್ಜೆಯ ಅಡಿಕೆ,ಹುರಿದ ಅಡಿಕೆ,ಕೆಳ ದರ್ಜೆಯ ಅಡಿಕೆ, ನೀರಿನಲ್ಲಿ ನೆನೆಸಿದ ಅಡಿಕೆ,ಅಡಿಕೆ ಪುಡಿ, ತುಂಡಡಿಕೆ,ಚಿಪ್ಸ್ ಅಡಿಕೆ,ವಿವಿಧ ಬ್ರಾಂಡಿನ ತಂಬಾಕು, ಬೀಡಾದ ತಯಾರಿಗೆ ಬಳಸುವ ಕತ್ತಾ, ಕಿಮಾಮ್, ಸುಣ್ಣ, ಲವಂಗ, ಏಲಕ್ಕಿ, ಸುವಾಸನಾ ಭರಿತ ಸಿಹಿ ಪದಾರ್ಥ,ಪರಿಮಳ ದ್ರವ್ಯಗಳು,ಇತರೇ ಸಂಬಾರ ಪದಾರ್ಥಗಳು,ಪಾನ್ ಮಸಾಲ, ಗುಟ್ಕಾ, ಸೇಲಂ, ಬಾಂಗ್ಲಾ, ಕೊಲ್ಕತ್ತಾ ಇತ್ಯಾದಿ ವೀಳ್ಯದ ಎಲೆಗಳು ಸಿಹಿ ಪುಡಿ ಇತ್ಯಾದಿಗಳು.ಬೀಡಾ ತಯಾರಿಸುವಾಗ ಗ್ರಾಹಕನ ತನು, ಮನ ಮತ್ತು ದನಕ್ಕೆ ಅನುಗುಣವಾಗಿ ಈ ಪದಾರ್ಥಗಳು ಬದಲಾಗುತ್ತವೆ.

ಈ ಎಲ್ಲಾ ಅಂಗಡಿಗಳಲ್ಲಿ ಬೀಡಾ ಮಾತ್ರವಲ್ಲದೆ ಬೀಡಿ,ಸಿಗರೇಟ್ ಇತ್ಯಾದಿಗಳೂ ದೊರಕುತ್ತದೆ.ಇದರಿಂದಾಗಿ ಇವು ಗ್ರಾಹಕರ ರುಚಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತವೆ.ಇನ್ನು ಇಲ್ಲಿ ದೊರಕುವ ಬೀಡಾದ ದರ ಇತ್ತೀಚಿನ ವರ್ಷಗಳಲ್ಲಿ ಏರುತ್ತಾ ಹೋಗುತ್ತಿವೆ.ಇದರೊಂದಿಗೆ ಇಲ್ಲಿ ಬಳಸುವ ಉತ್ಪನ್ನ,ಅಡಿಕೆಯ ಪ್ರಮಾಣ,ವೀಳ್ಯದ ಎಲೆಯ ಗುಣಮಟ್ಟ ಅಡಿಕೆಯ ನಮೂನೆ ಇತ್ಯಾದಿಗಳಿಂದ ದರ ನಿರ್ಧಾರವಾಗುತ್ತದೆ.ಇನ್ನು ಅತ್ಯುತ್ತಮ ದರ್ಜೆಯ ಅಂಗಡಿಗಳಲ್ಲಿ ಚಿನ್ನದ ದ್ರವವನ್ನು ಸೇರಿಸಿ ತಿನ್ನುವುದೂ ರೂಡಿಯಲ್ಲಿದೆ ಎನ್ನುತ್ತಾರೆ.

ಇನ್ನು ಬೀಡಾ ಒಂದಕ್ಕೆ ಬಳಸುವ ಅಡಿಕೆ ಪ್ರಮಾಣ ಅಂಗಡಿಯಿಂದ ಅಂಗಡಿಗೆ,ಗ್ರಾಹಕನಿಂದ ಗ್ರಾಹಕನಿಗೆ,ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಉದಾಹರಣೆಗೆ ಗುಜರಾತ್ ನಲ್ಲಿ ಬಳಸುವ ಅಡಿಕೆ ಪ್ರಮಾಣ ಜಾಸ್ತಿ ಆದರೆ ಇನ್ನಿತರೇ ರಾಜ್ಯಗಳಲ್ಲಿ ಇದು ಅಲ್ಲಿಗೆ ಹೋಲಿಸಿದಾಗ ಕಡಿಮೆ ಆಗಿದೆ.

ಒಟ್ಟಾಗಿ ನಮ್ಮಲ್ಲಿ ಬೆಳೆಯುವ ಅಡಿಕೆ ಅಡಿಕೆ ಯಾವ ರೀತಿ ಗ್ರಾಹಕನಿಗೆ ತಲಪುತ್ತದೆ ಎಂಬುದು ಮೇಲಿನ ಅಂಶಗಳಿಂದ ತಿಳಿದುಕೊಳ್ಳಬಹುದು.ಇಲ್ಲಿ ಬೆಳೆಗಾರರು ಗಮನಿಸಬೇಕಾದ ಒಂದು ಮುಖ್ಯ ಅಂಶವೆಂದರೆ ಈ ಎಲ್ಲಾ ಪಾನ್ ವಾಲಾಗಳು ತಾವು ಖರೀದಿಸಿದ ಅಡಿಕೆಗೆ ತಕ್ಷಣ ಹಣದ ಪಾವತಿಯನ್ನು ಮಾಡದೆ, ಇವರ ವ್ಯವಹಾರ ಸಾಲದ ರೂಪದ್ದೆಂಬುದು.ಇವರು ಪಾವತಿ ವಿಳಂಬ ಮಾಡಿದಷ್ಟು ಪೂರೈಕೆದಾರರಿಗೆ ಹಣಕಾಸಿನ ಸಮಸ್ಯೆಗಳು ಬರುತ್ತದೆ.ಇದೆ ಸಮಸ್ಯೆ ಮುಂದೆ ನಮ್ಮಲ್ಲಿ ಧಾರಣೆ ಏರು ಪೇರಿಗೆ ದಾರಿ ಮಾಡಿಕೊಡುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

ಡಾ|ವಿಘ್ನಶ್ವರ ಭಟ್ ವರ್ಮುಡಿ ಅವರು ಕೃಷಿಕರು. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದವರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯದ ಪೆರ್ಲದ ನಲಂದಾ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಅರ್ಥಶಾಸ್ತ್ರಜ್ಞರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಂಶೋಧನಾ ಬರಹಗಳು ಪ್ರಕಟವಾಗಿದೆ. ಅಡಿಕೆ ಮಾರುಕಟ್ಟೆ ಬಗ್ಗೆ ಅಧಿಕೃತವಾಗಿ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅಡಿಕೆಯ ಬಗ್ಗೆ ವಿವಿಧ ಬರಹಗಳನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ

ಭಾರತದಲ್ಲಿ ಮಳೆಗಾಲದ ತೀವ್ರತೆ ಹೆಚ್ಚಳ | ತಾಪಮಾನ ಏರಿಕೆಯಿಂದ ‘ಸೂಪರ್ ಚಾರ್ಜ್’ ಆಗುತ್ತಿರುವ ಮಾರುತ
March 4, 2026
7:27 AM
by: ದ ರೂರಲ್ ಮಿರರ್.ಕಾಂ
ಅಡಿಕೆ ತೋಟದ ಹಳದಿ ಎಲೆ ರೋಗ ಚೀನಾದಲ್ಲೂ ಮದ್ದಿಲ್ಲ…! | ಮಣ್ಣಿನೊಳಗಿನ ಡಿಎನ್‌ಎ ನೀಡುತ್ತಿದೆ ಎಚ್ಚರಿಕೆ
March 2, 2026
9:49 PM
by: ದ ರೂರಲ್ ಮಿರರ್.ಕಾಂ
ಬಯಕೆ, ಕಾಮ, ಆಕರ್ಷಣೆ, ಪ್ರೀತಿ ಮತ್ತು ಪ್ರೇಮ – ಜೀವನದ ಅಂತರಂಗದ ಹಂತಗಳು
February 28, 2026
7:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಮನೆಯಲ್ಲೇ ಸುಲಭವಾಗಿ ಮಾಡುವ ಎಳೆಯ ಹಲಸಿನ ಕಾಯಿ ಸುಕ್ಕ
February 28, 2026
7:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror