ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಬಹಳವಾಗಿ ಕಾಡುತ್ತಿರುವ ವಿಷಯ. ಏಕೆ ಹೀಗೆ ಎಂದು ಅಧ್ಯಯನಗಳು ನಡೆದರೆ ಭೂಮಿಯ ಉಷ್ಣತೆಯಲ್ಲಿ ಏರಿಕೆ ಮೊದಲಾಗಿ ಕಂಡುಬರುತ್ತಿದೆ. ಈಚೆಗೆ ನಡೆದ ಅಂತರಾಷ್ಟ್ರೀಯ ಹವಾಮಾನ ಸಮ್ಮೇಳನದಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು. ಮುಂದಿನ ದಿನಗಳಲ್ಲಿ ಇಡೀ ಪ್ರಪಂಚದಲ್ಲಿ ಈಗಿನ ಉಷ್ಣತೆಗಿಂತ ಎರಡು ಡಿಗ್ರಿ ಕಡಿಮೆ ಮಾಡಲು ಶಿಫಾರಸು ಮಾಡಲಾಗಿತ್ತು. ಇದಕ್ಕಾಗಿ ಅರಣ್ಯ ಸಂರಕ್ಷಣೆ, ವಾಯು ಮಾಲಿನ್ಯ ಕಡಿಮೆ ಮಾಡುವುದು ಸೇರಿದಂತೆ ಸೋಲಾರ್ ಬಳಕೆಗೆ ಆದ್ಯತೆ ನೀಡಲೂ ಶಿಫಾರಸು ಮಾಡಲಾಗಿತ್ತು.
ಈಗಾಗಲೇ ಭಾರತಕ್ಕೆ ಈ ವರ್ಷದ ಪ್ರಥಮ ವಾಯುಭಾರ ಕುಸಿತವು ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದು ಇನ್ನೆರಡು ದಿನಗಳಲ್ಲಿ ತಮಿಳುನಾಡು ಕರಾವಳಿಗೆ ತಲಪುವ ನಿರೀಕ್ಷೆ ಇದೆ. ಈಗಿನ ಮುನ್ಸೂಚೆನೆಯಂತೆ ಮಾರ್ಚ್ 7 ರಂದು ದಕ್ಷಿಣ ಕರ್ನಾಟಕದ ಒಳನಾಡಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಇದರಿಂದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ತೇವಾಂಶ ಏರಿಕೆಯಾಗಿ ಮಾರ್ಚ್ 8 ರಿಂದ ಗುಡುಗು ಸಿಡಿಲು ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮಾರ್ಚ್ 13 ರ ತನಕವೂ ಕರಾವಳಿ ಹಾಗೂ ಕೊಡಗಿನ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಈ ನಡುವೆ ಶಿವರಾತ್ರಿ ಮುಗಿಯುತ್ತಿದ್ದಂತೆ ಸೆಖೆ ಆರಂಭವಾಗಬೇಕಿದ್ದ ಕಾಲದಲ್ಲಿ ಉಷ್ಣಾಂಶ ಮಾತ್ರ ಏರಿಕೆಯಾಗಿ ಶುಷ್ಕ ಹವೆ ಪ್ರಾರಂಭವಾಗಿರುವುದು ಮಳೆ ಬೀಳುವ ಸಾಧ್ಯತೆಯನ್ನು ದೂರ ಮಾಡಬಹುದೆ ? ಎಂಬ ಆತಂಕ ಮನೆಮಾಡಿದೆ. ಈ ವಾಯುಭಾರ ಕುಸಿತವು ಉತ್ತರ ಭಾರತದ ಕಡೆಯಿಂದ ಶುಷ್ಕ ಹವೆಯನ್ನು ಸೆಳೆಯುತ್ತಿದೆ. ಒಂದು ವಿಶ್ಲೇಷಣೆಯಂತೆ ವಾಯುಭಾರ ಕುಸಿತವು ತಮಿಳುನಾಡು ಪ್ರವೇಶಿಸಿದಂತೆ ವಾತಾವರಣದಲ್ಲಿ ತೇವಾಂಶ ಏರಿಕೆಯಾಗಬಹುದು.
ಕರಾವಳಿ ಭಾಗದಲ್ಲಿ ಈಗ ವಾತಾವರಣದ ಉಷ್ಣತೆ 38 ಡಿಗ್ರಿಯಿಂದ 41 ಡಿಗ್ರಿಯವರೆಗೂ ಏರಿಕೆಯಾಗುತ್ತದೆ, ಇಳಿಕೆಯಾಗುತ್ತದೆ. ಈ ನಡುವೆ ವಾತಾವರಣದ ತೇವಾಂಶವೂ ಕಡಿಮೆಯಾಗುತ್ತಿರುವುದು ಗಮನಾರ್ಹ ಅಂಶವಾಗಿದೆ. ಕರಾವಳಿ ಪ್ರದೇಶದಲ್ಲೂ ಈಗ ಶೇಕಡಾ 12 – 15 ರಷ್ಟು ವಾತಾವರಣದ ತೇವಾಂಶ ಕಂಡುಬರುತ್ತಿದೆ. ಮಲೆನಾಡು ಪ್ರದೇಶದಲ್ಲೂ ತೇವಾಂಶ ಕುಸಿತವಾಗುವ ಕಾರಣದಿಂದ ಭೂಮಿಯ ಉಷ್ಣತೆ ಹೆಚ್ಚಾಗುತ್ತಿದೆ, ಹೀಗಾಗಿ ಈಚೆಗೆ ಕೆಲವು ವರ್ಷಗಳಿಂದ ಕೃಷಿಗೆ ವಿಪರೀತವಾದ ಬಿಸಿಲಿನ ಸಮಸ್ಯೆ ಕಾಡುತ್ತಿರುವುದು ಕಂಡುಬರುತ್ತಿದೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…