#WeatherMirror | ಕರಾವಳಿ ಜಿಲ್ಲೆಯ ಹೆಚ್ಚಿನ ಕಡೆ ಸಾಮಾನ್ಯ ಮಳೆ ಮುನ್ಸೂಚನೆ | ಜುಲೈ 17 ರಿಂದ ಮತ್ತೆ ಮುಂಗಾರು ಚುರುಕಾಗುವ ಸಾಧ್ಯತೆ |

July 11, 2023
1:09 PM
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಲಕ್ಷಣವಿದೆ. ಜು. 17 ರ ನಂತರ ಮತ್ತೆ ಮುಂಗಾರು ಚುರುಕಾಗುವ ಲಕ್ಷಣ ಇದೆ.

12.07.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣ ಕನ್ನ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಒಂದೆರಡು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕೊಡಗು, ಮೈಸೂರು, ಹಾಸನ, ತುಮಕೂರು, ಕೋಲಾರ, ದಾವಣಗೆರೆ ಜಿಲ್ಲೆಗಳ ಒಂದೆರಡು ಕಡೆ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಪಾವಗಡ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ.

ಮುಂಗಾರು ದುರ್ಬಲಗೊಂಡಿದ್ದರೂ ಜುಲೈ 13 ಹಾಗೂ 14ರಂದು ರಾಜ್ಯದ ಕರಾವಳಿ, ಮಲೆನಾಡು ಭಾಗಗಳಲ್ಲಿ ಉತ್ತಮ, ಹಾಗೂ ಒಳನಾಡು (ಉತ್ತರ ಮತ್ತು ದಕ್ಷಿಣ) ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. 15 ಹಾಗೂ 16ರಂದು ಮಳೆಯ ಕಡಿಮೆಯಾಗಿ ಜುಲೈ 17ರಿಂದ ಮತ್ತೆ ಮುಂಗಾರು ಚುರುಕಾಗುವ ಲಕ್ಷಣಗಳಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಸಾಯಿಶೇಖರ್ ಕರಿಕಳ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಚಿನ್ನದ ಬೇಟೆ – ಒಂದೇ ದಿನ 4 ಚಿನ್ನ; ಪದಕಗಳ ಸಂಖ್ಯೆ 60ಕ್ಕೆ ಏರಿಕೆ
September 30, 2026
10:51 PM
by: ದ ರೂರಲ್ ಮಿರರ್.ಕಾಂ
ಅಡಿಕೆ ವಹಿವಾಟಿನ ಮೇಲೆ ಹೆಚ್ಚಿದ ಕಣ್ಗಾವಲು..!, ಗಮನ ಸೆಳೆದ ಪ್ರತ್ಯೇಕ ಮೂರು ಘಟನೆಗಳು
September 30, 2026
9:10 PM
by: ದ ರೂರಲ್ ಮಿರರ್.ಕಾಂ
ಹಿಂಗಾರು ಬೆಳೆಗಳಿಗೆ ಕೇಂದ್ರದಿಂದ ಬೆಂಬಲ ಬೆಲೆ ಹೆಚ್ಚಳ
September 30, 2026
8:47 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 30-09-2026 | ಅರಬ್ಬಿ ಸಮುದ್ರದ ಗಾಳಿ ದುರ್ಬಲ… ಕರ್ನಾಟಕದ ಮಳೆಯ ಸ್ವರೂಪ ಬದಲಾಗುತ್ತಾ?
September 30, 2026
8:13 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror