ಮಳೆಯಾರ್ಭಟ ಹೆಚ್ಚಾಗಿದೆ. ಶನಿವಾರ ಮಧ್ಯಾಹ್ನದ ನಂತರ ತಡ ರಾತ್ರಿಯ ತನಕವೂ ವರುಣನ ಭರ್ಜರಿ ಆಟ. ವ್ಯಾಪಕವಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ನಿನ್ನೆ ಮುಸ್ಸಂಜೆಯ ಭಾರೀ ಮಳೆಗೆ ಬೆಳ್ಳಾರೆ ಸಮೀಪದ ಪೆರುವಾಜೆಯ ಶ್ರೀ ಜಲದುರ್ಗಾ ದೇವೀ ದೇವಸ್ಥಾನದ ಒಳಾಂಗಣಕ್ಕೆ ಗೌರೀ ಹೊಳೆಯ ಪ್ರವಾಹದ ನೀರು ನುಗ್ಗಿತ್ತು.
ಉಳಿದಂತೆ ಬೆಳ್ತಂಗಡಿ ನಗರದಲ್ಲಿ ಗರಿಷ್ಟ ಮಳೆ 175 ಮಿ ಮೀ. ಬಳ್ಪ 162, ಕಲ್ಮಡ್ಕ 134, ಎಣ್ಮೂರು 115, ಕಲ್ಲಾಜೆ 111, ಕಮಿಲ 110, ಹಾಲೆಮಜಲು 101, ಮೆಟ್ಟಿನಡ್ಕ 97, ಅಯ್ಯನಕಟ್ಟೆ 94, ಬಾಳಿಲ, ಕೋಡಿಂಬಳ-ತೆಕ್ಕಡ್ಕ ತಲಾ 89,
ಹರಿಹರ-ಮಲ್ಲಾರ, ಸುಳ್ಯ ನಗರ, ಎಂ ಚೆಂಬು ತಲಾ 84, ಮುಳ್ಯ-ಅಜ್ಜಾವರ 78, ಮಡಪ್ಪಾಡಿ 74, ಕೊಳ್ತಿಗೆ-ಎಕ್ಕಡ್ಕ 73,
ದೊಡ್ಡತೋಟ 72, ವಾಲ್ತಾಜೆ-ಕಂದ್ರಪ್ಪಾಡಿ 71, ಅಡೆಂಜ-ಉರುವಾಲು 68, ತೊಡಿಕಾನ 66, ಸುಬ್ರಹ್ಮಣ್ಯ 65, ಕೊಲ್ಲಮೊಗ್ರ 60,
ಉಳಿದಂತೆ ಕೆದಿಲ, ಮುಂಡೂರು ತಲಾ 35, ಆರ್ಯಾಪು-ಬಂಗಾರಡ್ಕ 25, ಕೆಲಿಂಜ 23 ಬಲ್ನಾಡು, ಕಡಬ ತಲಾ 15, ಮಂಚಿ 14 ಹಾಗೂ ಕಾಸರಗೋಡಿನ ಕಲ್ಲಕಟ್ಟದಲ್ಲಿ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಇತರೆಡೆಗೆ ಹೋಲಿಸಿದರೆ ನಿನ್ನೆಯೂ ಪುತ್ತೂರು, ಬಂಟ್ವಾಳ, ಕಾಸರಗೋಡು ತಾಲೂಕುಗಳಲ್ಲಿ ಮಳೆ ಕಡಿಮೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶ ಎಂದರೆ ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಭರ್ಜರಿ ಮಳೆಯಾಗಿದ್ದು, ಕಡಬದಲ್ಲಿ ತುಂಬಾ ಕಡಿಮೆ ಮಳೆ 5 ಮಿ.ಮೀ. ಅಷ್ಟೇ ದಾಖಲಾಗಿದೆ.!
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ರಾಸಾಯನಿಕಗಳು…
ಕಾರವಾರದ ರವೀಂದ್ರನಾಥ್ ಟಾಗೋರ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಏಪ್ರಿಲ್ 18…