05.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
ಕರಾವಳಿ : ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣ ಹವೆ ಆವರಿಸಲಿದೆ. ಮೋಡ ಅಥವಾ ಮಳೆಯ ಸಾಧ್ಯತೆ ಕಡಿಮೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ ಮೇಲೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮೋಡದ ವಾತಾವರಣದ ಮುನ್ಸೂಚನೆ ಇದೆ. ಆದರೆ ರಾತ್ರಿ ಸ್ವಚ್ಛ ವಾತಾವರಣ ಇರಬಹುದು. ಈಗಿನಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜ. 7ರ ತನಕ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. 8ರಿಂದ ಶ್ರೀಲಂಕಾ ಬಳಿಯ ವಾಯುಭಾರ ಕುಸಿತದ ಪರಿಣಾಮದಿಂದ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಮಲೆನಾಡು : ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ.
ಈಗಿನಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಜನವರಿ 7ರ ತನಕ ಒಣ ಹವೆ ಮುಂದುವರಿಯಲಿದೆ. 8ರಿಂದ ಮೋಡ ಹಾಗೂ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ಉತ್ತರ ಒಳನಾಡು : ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ಅಲ್ಲಲ್ಲಿ ಹಗುರ ಮೋಡದ ವಾತಾವರಣದ ಮುನ್ಸೂಚನೆ ಇದ್ದು, ಸಂಜೆ, ರಾತ್ರಿ ಸ್ವಚ್ಛ ವಾತಾವರಣ ಕಾಣಿಸುವ ಸಾಧ್ಯತೆ ಇದೆ. ಹಾವೇರಿ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಒಣ ಹವೆ ಮುಂದುವರಿಯಲಿದೆ. ಈಗಿನಂತೆ ಜ.5 ರಿಂದ ಒಣ ಹವೆ ಮುಂದುವರಿಯಲಿದೆ. ಚಳಿಯ ಪ್ರಮಾಣವು ಸಾಮಾನ್ಯವಾಗಿರಬಹುದು.
ದಕ್ಷಿಣ ಒಳನಾಡು : ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಒಣ ಹವೆ ಹಾಗೂ ಸಾಮಾನ್ಯ ಚಳಿ ಮುಂದುವರಿಯುವ ಮುನ್ಸೂಚನೆ ಇದೆ. ಈಗಿನಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಜ.7ರಿಂದ ಮತ್ತೆ ಮೋಡ ಹಾಗೂ 8ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಬಂಗಾಳಕೊಲ್ಲಿಯ ಶ್ರೀಲಂಕಾ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು ಸ್ವಲ್ಪ ಪ್ರಭಲಗೊಂಡು, ಶ್ರೀಲಂಕಾ ಪೂರ್ವ ಕರಾವಳಿಯ ಮೂಲಕ ತಮಿಳುನಾಡು ಕರಾವಳಿಗೆ ಜ. 8ರಂದು ತಲಪುವ ನಿರೀಕ್ಷೆಯಿದೆ. ಇದರ ಪರಿಣಾಮದಿಂದ ರಾಜ್ಯದ ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಜ.8ರಿಂದ ಮಳೆಯ ಮುನ್ಸೂಚನೆ ಇದೆ.
ಅಡಿಕೆ (Arecanut) ಶತಮಾನಗಳಿಂದ ಭಾರತೀಯ ಉಪಖಂಡದಲ್ಲಿ ಸಾಂಸ್ಕೃತಿಕ, ಔಷಧೀಯ ಹಾಗೂ ಕೃಷಿ ಆಧಾರಿತ…
ಕೃಷಿಯನ್ನು ನಂಬಿ ಸೋತ ಉದಾಹರಣೆ ಕಡಿಮೆ. ಆದರೆ ಹವಾಮಾನ, ನೀರಾವರಿ ಹಾಗೂ ಅವೈಜ್ಞಾನಿಕ…
ಚಳಿಗಾಲದಲ್ಲಿ ಬಿಸಿಬಿಸಿ ಕಡಲೆಕಾಯಿ ತಿನ್ನುವುದೇ ಖುಷಿ. ಕಡಲೆಕಾಯಿ ತಿನ್ನುವಾಗ ಹೆಚ್ಚಿನ ಜನರು ಅದರ…
ಕರ್ನಾಟಕ ಸರ್ಕಾರದ ವಿಕಲಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು “ಸಾಧನೆ” ಯೋಜನೆಯ…
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯ ಮೂಲಕ ಗರ್ಭಿಣಿಯರಿಗೆ ಗರ್ಭಧಾರಣೆಯ…
ಅಡಿಕೆ ಬೆಳೆಗಾರರಿಗೆ ನೂತನ ತಂತ್ರಜ್ಞಾನವೊಂದನ್ನು ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್…