ವೀಕೆಂಡ್‌ ಚಾರಣ…! | ಒಮ್ಮೆಲೇ ಏಕೆ ಕುಮಾರ ಪರ್ವತ ಚಾರಣಕ್ಕೆ ಬರುತ್ತಿದ್ದಾರೆ…? | ಕಾಡು ಉಳಿಯಲಿ, ಕುಮಾರಪರ್ವತದ ರಕ್ಷಣೆಯ ಅಗತ್ಯವೂ ಇದೆ |

January 28, 2024
9:43 PM
ಕುಮಾರಪರ್ವತ ಚಾರಣಿಗರ ಸಂಖ್ಯೆ ಹೆಚ್ಚಾಗಿದೆ. ಒಮ್ಮೆಲೇ ಸಾವಿರಾರು ಮಂದಿ ತೆರಳುವುದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ. ಪರಿಸರ ಕಾಳಜಿಯೂ ಬಹುಮುಖ್ಯವಾದ ವಿಷಯವಾಗಿದೆ.

ಕಳೆದ ಎರಡು ವಾರಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ವಿಪರೀತ ಮಂದಿ ಆಗಮಿಸುತ್ತಿದ್ದಾರೆ. ಅಷ್ಟೂ ಜನರೂ ಪರಿಸರ ಪ್ರೇಮಿಗಳೇ…!?. ಟ್ರೆಕಿಂಗ್‌ ಹೆಸರಲ್ಲಿ ಮಜಾ ಮಾಡಲು ಬರುತ್ತಿದ್ದಾರೆಯೇ..? ಇದೆರಡೂ ಪ್ರಶ್ನೆಗಳ ನಡುವೆ ಈಗ ಯಾಕಿಷ್ಟು ಮಂದಿ ಕುಮಾರಪರ್ವತ ಚಾರಣಕ್ಕೆ ಬರುತ್ತಿದ್ದಾರೆ…?ಮುಂದೆ ಓದಿ

ರಾಜ್ಯದ ಬೇರೆ ಬೇರೆ ಕಡೆಯಿಂದ  ಕುಮಾರಪರ್ವತ ಚಾರಣಕ್ಕೆ ಒಮ್ಮೆಲೇ ಹೆಚ್ಚಾಗಿ ಜನರು ಆಗಮಿಸುತ್ತಿದ್ದಾರೆ. ರಜಾ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಕಾಣಸಿಗುತ್ತಾರೆ. ಕಳೆದ ಎರಡು-ಮೂರು ವಾರಗಳಿಂದ ವಿಪರೀತ ಜನಸಂದಣಿಯಲ್ಲಿ ಚಾರಣಿಗರು ಕಾಣುತ್ತಿದ್ದಾರೆ. ಈಗಾಗಲೇ ಅಂತರ್ಜಾಲದ ಮೂಲಕ ಕುಮಾರಪರ್ವತದ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿದೆ. ಹೀಗಾಗಿ ಬಹಳ ಆಸಕ್ತಿಯಿಂದ ಚಾರಣಿಗರು ಬರುತ್ತಿದ್ದಾರೆ.ಮುಂದೆ ಓದಿ

ಕುಮಾರಪರ್ವತ ಚಾರಣ ಮುಂಜಾನೆ

ಈಚೆಗೆ ಗಿರಿಗದ್ದೆಯ ಭಟ್ಟರು ನಿಧನವಾದ ಸಂದರ್ಭ ಕುಮಾರಪರ್ವತ ಹಾಗೂ ಗಿರಿಗದ್ದೆಯ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿತ್ತು. ಅದರ ಜೊತೆಗೇ ಕುಮಾರಪರ್ವತ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಹಿನ್ನೆಲೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸಹಜವಾಗಿಯೇ ಕುಮಾರಪರ್ವತದ ಬಗ್ಗೆ ಕುತೂಹಲ ಹೆಚ್ಚಾಯಿತು. ಕುಮಾರ ಪರ್ವತದಲ್ಲಿ ಪೂಜೆ ನಡೆಯುತ್ತದೆ ಎನ್ನುವುದು  ಸಾಕಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕಳೆದ  ಎರಡು ವರ್ಷಗಳಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ವೈರಲ್‌ ಆಗಿದೆ. ಇದೆಲ್ಲವೂ ಕುಮಾರಪರ್ವತ ಚಾರಣಿಗರ ಸಂಖ್ಯೆ ಏರಿಕೆಗೆ ಕಾರಣವಾಗಿದೆ.ಮುಂದೆ ಓದಿ

ಕಾಡು ದಾರಿಯ ನಡುವಿನ ಪಯಣ ಹಾಗೂ ಸುಂದರ ಪರಿಸರದ ನಡುವಿನ ಪಯಣ ಈ ಚಾರಣ. ಪರ್ವತ ಏರುವ ಮೊದಲೇ ಅರಣ್ಯ ಇಲಾಖೆ ಸಾಕಷ್ಟು ತಪಾಸಣೆ ಮಾಡುತ್ತಿದ್ದರೂ, ಕಾಡು ಹಾದಿಯ ನಡುವೆ ಪ್ಲಾಸ್ಟಿಕ್‌ ಹಾಗೂ ಪರಿಸರ ಕೆಡಿಸುವ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆಲೇ ವಿಪರೀತ ಚಾರಣಿಗರು ತೆರಳಿದರೆ, ಕಾಡಿನ ಒಳಗಿನ ಗಲಾಟೆ, ಬೊಬ್ಬೆಗಳಿಂದ ಕಾಡು ಪ್ರಾಣಿಗಳೂ ಭಯಗೊಂಡು ತೊಂದರೆ ನೀಡುವ ಸಂಭವವೂ ಇದೆ. ಪರಿಸರವೂ ಬೇಗನೆ ಕಲುಷಿತವಾಗುವುದು ಸಾಧ್ಯತೆ ಇದೆ. ಹೀಗಾಗಿ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಾದ್ದು ಅಗತ್ಯ ಇದೆ.

Kumara Parvatha

ಕುಮಾರಪರ್ವತ

More and more people are coming from different parts of the state for the Kumara Parvata trek. A large number of trekkers come even on holidays. For the last two-three weeks, there has been a huge numbers of trekkers. Now environmental protection is a big challenge.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿಒಪಿ ಗಣಪತಿಗೆ ಬ್ರೇಕ್..? ಕರಾವಳಿಯ 90–95% ಪರಿಸರ ಸ್ನೇಹಿ ಮಾದರಿ ರಾಜ್ಯಕ್ಕೆ ಪಾಠ
August 23, 2026
12:18 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಸಂರಕ್ಷಣೆ ಹೆಸರಿನಲ್ಲಿ ಕೃಷಿಕರಿಗೆ ನಿರ್ಬಂಧ ಬೇಡ – ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕರಿಸಲು ಆಗ್ರಹ
August 23, 2026
11:47 AM
by: ಮಿರರ್‌ ಡೆಸ್ಕ್‌
ಮುಂಗಾರು ಬೇಗನೆ ವಿದಾಯ ಹೇಳುತ್ತಿದೆಯೇ..? ಸೆಪ್ಟೆಂಬರ್‌ನಲ್ಲಿ ಮಳೆ ಕಡಿಮೆಯಾಗುವ ಮುನ್ಸೂಚನೆ..?
August 22, 2026
10:25 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror