ಕಳೆದ ಎರಡು ವಾರಗಳಿಂದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತ ಚಾರಣಕ್ಕೆ ವಿಪರೀತ ಮಂದಿ ಆಗಮಿಸುತ್ತಿದ್ದಾರೆ. ಅಷ್ಟೂ ಜನರೂ ಪರಿಸರ ಪ್ರೇಮಿಗಳೇ…!?. ಟ್ರೆಕಿಂಗ್ ಹೆಸರಲ್ಲಿ ಮಜಾ ಮಾಡಲು ಬರುತ್ತಿದ್ದಾರೆಯೇ..? ಇದೆರಡೂ ಪ್ರಶ್ನೆಗಳ ನಡುವೆ ಈಗ ಯಾಕಿಷ್ಟು ಮಂದಿ ಕುಮಾರಪರ್ವತ ಚಾರಣಕ್ಕೆ ಬರುತ್ತಿದ್ದಾರೆ…?ಮುಂದೆ ಓದಿ
ರಾಜ್ಯದ ಬೇರೆ ಬೇರೆ ಕಡೆಯಿಂದ ಕುಮಾರಪರ್ವತ ಚಾರಣಕ್ಕೆ ಒಮ್ಮೆಲೇ ಹೆಚ್ಚಾಗಿ ಜನರು ಆಗಮಿಸುತ್ತಿದ್ದಾರೆ. ರಜಾ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಕಾಣಸಿಗುತ್ತಾರೆ. ಕಳೆದ ಎರಡು-ಮೂರು ವಾರಗಳಿಂದ ವಿಪರೀತ ಜನಸಂದಣಿಯಲ್ಲಿ ಚಾರಣಿಗರು ಕಾಣುತ್ತಿದ್ದಾರೆ. ಈಗಾಗಲೇ ಅಂತರ್ಜಾಲದ ಮೂಲಕ ಕುಮಾರಪರ್ವತದ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿದೆ. ಹೀಗಾಗಿ ಬಹಳ ಆಸಕ್ತಿಯಿಂದ ಚಾರಣಿಗರು ಬರುತ್ತಿದ್ದಾರೆ.ಮುಂದೆ ಓದಿ
ಈಚೆಗೆ ಗಿರಿಗದ್ದೆಯ ಭಟ್ಟರು ನಿಧನವಾದ ಸಂದರ್ಭ ಕುಮಾರಪರ್ವತ ಹಾಗೂ ಗಿರಿಗದ್ದೆಯ ಬಗ್ಗೆ ಸಾಕಷ್ಟು ಮಾಹಿತಿ ರವಾನೆಯಾಗಿತ್ತು. ಅದರ ಜೊತೆಗೇ ಕುಮಾರಪರ್ವತ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಹಿನ್ನೆಲೆಯ ಬಗ್ಗೆಯೂ ಸಾಕಷ್ಟು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಸಹಜವಾಗಿಯೇ ಕುಮಾರಪರ್ವತದ ಬಗ್ಗೆ ಕುತೂಹಲ ಹೆಚ್ಚಾಯಿತು. ಕುಮಾರ ಪರ್ವತದಲ್ಲಿ ಪೂಜೆ ನಡೆಯುತ್ತದೆ ಎನ್ನುವುದು ಸಾಕಷ್ಟು ಜನರಿಗೆ ಮಾಹಿತಿಯೇ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಾಹಿತಿ ವೈರಲ್ ಆಗಿದೆ. ಇದೆಲ್ಲವೂ ಕುಮಾರಪರ್ವತ ಚಾರಣಿಗರ ಸಂಖ್ಯೆ ಏರಿಕೆಗೆ ಕಾರಣವಾಗಿದೆ.ಮುಂದೆ ಓದಿ
ಕಾಡು ದಾರಿಯ ನಡುವಿನ ಪಯಣ ಹಾಗೂ ಸುಂದರ ಪರಿಸರದ ನಡುವಿನ ಪಯಣ ಈ ಚಾರಣ. ಪರ್ವತ ಏರುವ ಮೊದಲೇ ಅರಣ್ಯ ಇಲಾಖೆ ಸಾಕಷ್ಟು ತಪಾಸಣೆ ಮಾಡುತ್ತಿದ್ದರೂ, ಕಾಡು ಹಾದಿಯ ನಡುವೆ ಪ್ಲಾಸ್ಟಿಕ್ ಹಾಗೂ ಪರಿಸರ ಕೆಡಿಸುವ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆಲೇ ವಿಪರೀತ ಚಾರಣಿಗರು ತೆರಳಿದರೆ, ಕಾಡಿನ ಒಳಗಿನ ಗಲಾಟೆ, ಬೊಬ್ಬೆಗಳಿಂದ ಕಾಡು ಪ್ರಾಣಿಗಳೂ ಭಯಗೊಂಡು ತೊಂದರೆ ನೀಡುವ ಸಂಭವವೂ ಇದೆ. ಪರಿಸರವೂ ಬೇಗನೆ ಕಲುಷಿತವಾಗುವುದು ಸಾಧ್ಯತೆ ಇದೆ. ಹೀಗಾಗಿ ಇಲಾಖೆಯು ಈ ಬಗ್ಗೆ ಗಮನಹರಿಸಬೇಕಾದ್ದು ಅಗತ್ಯ ಇದೆ.
ಕುಮಾರಪರ್ವತ
More and more people are coming from different parts of the state for the Kumara Parvata trek. A large number of trekkers come even on holidays. For the last two-three weeks, there has been a huge numbers of trekkers. Now environmental protection is a big challenge.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…