

ಮಹಾರಾಷ್ಟ್ರದಲ್ಲಿ(Maharastra) ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ(Agri Tourism) ಅನ್ನು ಕರ್ನಾಟಕದಲ್ಲಿಯೂ(Karnataka) ಬೆಳೆಸುವ ಇಚ್ಛೆ ಇದೆ. ಕರ್ನಾಟಕದಲ್ಲಿ 108 ರೈತರನ್ನು Agri Tourism, ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಕೃಷಿ ಆಶ್ರಮ) ಸ್ಥಾಪನೆಗೆ ಮುಂದಾಗಲು ಪ್ರೋತ್ಸಾಹಿಸುವ ಕಾರ್ಯಕ್ರಮ ಇದಾಗಿದೆ.
ಕೃಷಿ ಆಶ್ರಮ ಎಂದರೇನು? ಅದರ ಸ್ಥಾಪನೆಗೆ ಸಿದ್ಧತೆ ಹೇಗೆ? ತೆರೆಯಲು ಎಷ್ಟು ವೆಚ್ಚ ಬಂದೀತು ? ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯುತ್ತಿರಬೇಕು? ನಿಬಂಧನೆಗಳು ಯಾವುವು? ಯಾವ ಯಾವ ವಸ್ತುಗಳು ಅಲ್ಲಿರಬಾರದು? ಯಾವ ವಸ್ತುಗಳು ಇರಬೇಕು? ಈ ವಿಚಾರಗಳನ್ನು ತಜ್ಞರಿಂದ ತಿಳಿಸಲಾಗುವುದು. ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಯುವ ಯಾವುದಾದರೂ ಒಂದು ಶಿಬಿರದಲ್ಲಿ ತಪ್ಪದೇ ಭಾಗವಹಿಸಿ ಕೃಷಿ ಆಶ್ರಮ ಸ್ಥಾಪಿಸಿದವರಿಗೆ “ಹೆಗ್ಗಳಿಕೆ ಪತ್ರ(Certificate) ಕನ್ನೇರಿ ಶ್ರೀಗಳಿಂದ ದೊರೆಯಲಿದೆ.
ಕೃಷಿ ಆಶ್ರಮ ಬಗೆಗಿನ ಚಿಂತನೆ, ಯೋಚನೆ ಮತ್ತು ಅದರ ಅಳವಡಿಕೆಗಳ ಬಗ್ಗೆ ನಿರಂತರವಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಅಮ್ಮನಘಟ್ಟ, ಕಗ್ಗೋಡ, ಬಟ್ಟೆ ಮಲ್ಲಪ್ಪ ಮತ್ತು ಕಪ್ಪತಗುಡ್ಡ ಗಳಲ್ಲಿ ಯಶಸ್ವಿಯಾಗಿ ಈ ಕಾರ್ಯಗಾರಗಳನ್ನು ನಡೆಸಲಾಗಿದೆ
ಇದೀಗ ಡಿ.16 ಹಾಗೂ 17 ರಂದು M. V. ಪಾಟೀಲ್ ಫಾರ್ಮ್ ಹೌಸ್, ಗುಡ್ಡದ ಹುಲಿಕಟ್ಟಿ ಬಳಿ ನಡೆಯಲಿದೆ. ಇದು ಕೃಷಿಕರಿಗಾಗಿ/ಕೃಷಿ ಆಸಕ್ತರಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ: 9972700958
ಮಾನವ ಸಮಾಜದಲ್ಲಿ ಹಣವು ಆವಶ್ಯಕತೆಯ ಆಧಾರಶಿಲೆ. “ಅನ್ನಂ ನ ನಿತ್ಯಂ, ಧನಂ ನ…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಶಿಥಿಲಗೊಂಡಿದ್ದು, ಅರಬ್ಬಿ ಸಮುದ್ರದ ವಾಯುಭಾರ ಕುಸಿತವು ಇನ್ನೂ 3…
ಶಾಲೆಯ ವಾರ್ಷಿಕೋತ್ಸವದಲ್ಲಿ ಕೃಷಿ ಸಾಧಕನಿಗೆ ಸನ್ಮಾನ. ಇಂತದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಕುಕ್ಕೆ…
ಮಂಗಳವಾರದಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಒಟ್ಟು 37,952…
ಮಹಿಳೆಯರ ಜೀವನದಲ್ಲಿ ಆರ್ಥಿಕ ಬದಲಾವಣೆ ತರಲು ಹಾಗೂ ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ…
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಅಶೋಕ ಮಾಸಾಳ ಅವರು ಜಮೀನಿನಲ್ಲಿ…