ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ(Richest man). ಹಾಗೆ ಮುಕೇಶ್ ಅಂಬಾನಿ, ವಿಶ್ವದ ಅಗ್ರ ಧನಿಕರ ಪಟ್ಟಿಯಲ್ಲಿ 11ನೇ ಶ್ರೀಮಂತ ವ್ಯಕ್ತಿ ಕೂಡ ಹೌದು. ಬಿಡುಗಡೆಯಾದ ವರದಿವೊಂದರ ಪ್ರಕಾರ 106 ಬಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸರಿಸುಮಾರು ರೂ. 9,15,405 ಕೋಟಿ) ಸಂಪತ್ತು ಹೊಂದಿರುವ ಅಂಬಾನಿ, ದಿನವೊಂದರ ಗಳಿಕೆ ಎಷ್ಟು ಗೊತ್ತಾ?
ಗಂಟೆಗೆ 90 ಕೋಟಿ ರೂ. ಗಳಿಕೆ..!: 2020ರಲ್ಲಿ IIFL ವೆಲ್ತ್ ಹುರುನ್ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ಪ್ರಕಾರ ಮುಖೇಶ್ ಅಂಬಾನಿ ಅವರ ಪ್ರತಿ ಗಂಟೆಯ ಗಳಿಕೆ ಸರಿಸುಮಾರು 90 ಕೋಟಿ ರೂ. ಅಂತೆ. ಆಕ್ಸ್ ಫ್ಯಾಮ್ ವರದಿ ಕೂಡ ಇದೇ ಅಂಕಿ – ಅಂಶವನ್ನು ಉಲ್ಲೇಖಿಸಿದೆ. ಲಾಕ್ಡೌನ್ ಹಾಗೂ ಕೊರೊನಾದಂತಹ ಸಂದಿಗ್ಧ ಸಮಯದಲ್ಲೂ ಇದೇ ರೀತಿಯ ಆರ್ಥಿಕ ಸ್ಥಿತಿಗತಿ ಹೊಂದಿದ್ದರು ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ. ಆದರೆ, ಮತ್ತೊಂದು ವರದಿ ಪ್ರಕಾರ ದೇಶದ ಶೇ.24 ರಷ್ಟು ಜನರ ತಿಂಗಳ ಗಳಿಕೆ ಕೇವಲ 3000 ರೂ. ಮಾತ್ರವಂತೆ!.
ನಾವು ಸಹ ಗಳಿಸಬಹುದೇ?: ಅಂಕಿ – ಅಂಶಗಳ ಪ್ರಕಾರ, ಒಂದು ಗಂಟೆಯಲ್ಲಿ ಅಂಬಾನಿ ಗಳಿಸುವಷ್ಟು ಹಣವನ್ನು ಗಳಿಸಲು ಒಬ್ಬ ಸರಾಸರಿ ಭಾರತೀಯನಿಗೆ ಕನಿಷ್ಠ 17.4 ಮಿಲಿಯನ್ ವರ್ಷಗಳು ಬೇಕಂತೆ!. ವಿವರಿಸಿ ಹೇಳುವುದಾದರೆ, ವಾರ್ಷಿಕ 4 ಲಕ್ಷ ರೂ. (ತಿಂಗಳಿಗೆ ಸರಿಸುಮಾರು ರೂ.33 ಸಾವಿರ) ಗಳಿಸುವ ಓರ್ವ ವ್ಯಕ್ತಿ, 90 ಕೋಟಿ ರೂ. ಗಳಿಸಲು ಸುಮಾರು 1.74 ಕೋಟಿ ವರ್ಷಗಳೇ ಬೇಕಂತೆ!. ಮನುಷ್ಯ 100 ವರ್ಷಗಳ ಕಾಲ ಬದುಕುವುದೇ ವಿರಳ. ಲಕ್ಷಾಂತರ ವರ್ಷಗಳ ಕಾಲ ದುಡಿದು ಯಾರಾದರೂ ಹಾಗೆ ಹಣ ಗಳಿಸಲು ಸಾಧ್ಯವೇ? ಇನ್ನೂ ಸರಳವಾಗಿ ಹೇಳಬೇಕಂದರೆ, ಅಂಬಾನಿ ಓರ್ವ ಸಾಮಾನ್ಯ ವ್ಯಕ್ತಿ ತನ್ನ ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಗಳಿಸುತ್ತಾರೆ. ಅಷ್ಟು ಸಂಪತ್ತು ಸಹ ಅವರ ಬಳಿ ಇದೆ.
ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?: ರಿಲಯನ್ಸ್ ಇಂಡಸ್ಟ್ರೀಸ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮುಕೇಶ್ ಅಂಬಾನಿ ತಮ್ಮ ವಾರ್ಷಿಕ ವೇತನದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ವಾರ್ಷಿಕ ವೇತನವನ್ನು 15 ಕೋಟಿ ರೂ.ಗೆ ಸೀಮಿತಗೊಳಿಸಿಕೊಂಡಿರುವುದಾಗಿ ಅವರೇ ಈ ಹಿಂದೆ ಹೇಳಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…
ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಹೊಸತನದ ಶೋರೂಮ್ ಅನಾವರಣದ ಅಂಗವಾಗಿ ಮೇ 9…