#NalinKumarKateel | ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ರಾಜೀನಾಮೆ ಹೇಳಿಕೆ…! | ನಿಜಕ್ಕೂ ಅವರು ಹೇಳಿದ್ದೇನು.. ? |

June 24, 2023
2:46 PM

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸುವಾಗ ಮಾಧ್ಯಮ ಪ್ರತಿನಿಧಿಗಳು ರಾಜೀನಾಮೆ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭ ನಳಿನ್‌ ಅವರು ನೀಡುರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಮಾಧ್ಯಮಗಳೇ ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟಿಸಿವೆ ಎಂಬ ಆರೋಪ ಬಂದಿದೆ. ಹಾಗಿದ್ದರೆ ಅವರು ನಿಜಕ್ಕೂ ಹೇಳಿದ್ದೇನು ಎಂಬುದೇ ಪ್ರಶ್ನೆ.

ಖಾಸಗಿ ವಾಹಿನಿ ಟಿವಿ9  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಅವರು ಮಾತನಾಡಿರುವ ವಿಡಿಯೋ ಪ್ರಸಾರ ಮಾಡಿದೆ. ಅದರ ತುಣುಕು ಇಲ್ಲಿದೆ..

ಸುದ್ದಿಗೋಷ್ಟಿಯಲ್ಲಿ ಹೇಳಿರುವ ಪ್ರಕಾರ, ವಿಧಾನಸಭೆ ಚುನಾವಣೆ ಸೋಲಿನ ನೈತಿನ ಹೊಣೆ ಹೊತ್ತು ತಾನು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಮೌಖಿಕವಾಗಿಯೂ , ಲಿಖಿತವಾಗಿಯೂ ನೀಡಿದ್ದೇನೆ ಎಂದು ಹೇಳಿದ್ದಾರೆ. ಅದಾದ ಬಳಿಕದ ಕೆಲ ಹೊತ್ತಿನಲ್ಲಿ, ರಾಜೀನಾಮೆ ಹೇಳಿಕೆ ತಪ್ಪಾಗಿ ವರದಿಯಾಗುತ್ತಿದೆ ಎಂದು ಹೇಳಿದ್ದರು.ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ರಾಜಿನಾಮೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದು, ‘ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜಿನಾಮೆ ನೀಡಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ಕುರಿತ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಕಟೀಲ್ ತಿಳಿಸಿದ್ದಾರೆ.

ವಿಡಿಯೋ ಪ್ರಕಾರ, ವಿಧಾನಸಭೆ ಚುನಾವಣೆ ಸೋಲಿನ ನೈತಿನ ಹೊಣೆ ಹೊತ್ತು ತಾನು ಈಗಾಗಲೇ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನು ಮೌಖಿಕವಾಗಿಯೂ , ಲಿಖಿತವಾಗಿಯೂ ನೀಡಿದ್ದೇನೆ ಎಂದು ಸ್ವತಃ ನಳಿನ್‌ ಕುಮಾರ್‌ ಅವರು ಎರಡು ಬಾರಿ ಹೇಳಿದ್ದಾರೆ. ಅಂದರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಬಳಿಕವೂ ರಾಷ್ಟ್ರೀಯ ನಾಯಕರು, ವಿಳಂಬವಾದ ಆತ್ಮಾವಲೋಕನ ನಡೆಸುತ್ತಿರುವುದು ಏಕೆ?. ರಾಜ್ಯಾಧ್ಯಕ್ಷರ ರಾಜೀನಾಮೆ ಏಕೆ ಅಂಗೀಕಾರ ಮಾಡಲಿಲ್ಲ ? ಹೀಗೇ ಹಲವಾರು‌ ಪ್ರಶ್ನೆಗಳು ಎದ್ದಿವೆ. ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಸಂಸದರ ವಿರುದ್ಧ ಆಕ್ರೋಶಗಳು ಇದ್ದರೂ, ರಾಜ್ಯಾಧ್ಯಕ್ಷರಾದ ಬಳಿಕವೂ ಈ ಆಕ್ರೋಶ ಈಗಲೂ ಇರುವಾಗಲೂ ಏಕೆ ರಾಷ್ಟ್ರೀಯ ನಾಯಕರು ಮೌನವಹಿಸುತ್ತಿದ್ದಾರೆ ? .

ಬಿಜೆಪಿ ರಾಜ್ಯಾಧ್ಯಕ್ಷರ ರಾಜೀನಾಮೆ ಎಂಬ ಹೇಳಿಕೆಗಳು ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್‌ ಗೆ ಒಳಗಾಗಿ, ಬಿಜೆಪಿ ಸುಸ್ಥಿತಿಗೆ ಬರಲಿ ಎಂಬ ಹಾರೈಕೆಗಳು ಬಿಜೆಪಿ ಕಾರ್ಯಕರ್ತರಿಂದಲೇ ಬರುತ್ತಿರುವುದನ್ನೂ ಬಿಜೆಪಿ ನಾಯಕತ್ವಗಳು ಗಮನಿಸುವುದಿಲ್ಲವೇ ? ಇದೆಲ್ಲಾ ಪ್ರಶ್ನೆಗಳ ನಡುವೆಯೂ ಕೇಡರ್‌ ಹಿನ್ನಲೆಯ ಬಿಜೆಪಿ ಮಾತ್ರಾ ಯಾವುದೂ ಕೇಳದಂತೆ ಕುಳಿತಿದೆ. ಎಲ್‌ ಕೆ ಅಡ್ವಾಣಿ ಅವರಂತಹ ನಾಯಕರನ್ನೇ ರಾಜೀನಾಮೆ ಪಡೆದಿರುವ ಒಂದು ಕಾಲದ ಬಿಜೆಪಿ ಈಗ ಕಾರ್ಯಕರ್ತರ ಆಕ್ರೋಶ, ಅಸಮಾಧಾನಗಳು ಇದ್ದರೂ ಮೌನವಾಗಿರುವುದರ ಅರ್ಥ ಬಿಜೆಪಿ ಆಂತರಿಕವಾಗು ಕುಸಿದಿದೆ ಎಂಬುದು ಸ್ಪಷ್ಟವಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು
September 16, 2026
11:09 PM
by: ದ ರೂರಲ್ ಮಿರರ್.ಕಾಂ
“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ
September 16, 2026
9:14 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ
September 16, 2026
3:41 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror