ಒಂದು ದೇಶದ ಸಾಮರ್ಥ್ಯ ಅದರ ಸೇನೆಯ ಮೇಲೆ ನಿಂತಿರುತ್ತದೆ. ಇತರೆ ದೇಶಗಳು ಕೂಡ ಈ ಬಗ್ಗೆ ಇತರ ದೇಶಗಳ ಸೇನಾ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಲೇ ಇರುತ್ತವೆ. ಇದೀಗ ಜಾಗತಿಕ ರಕ್ಷಣಾ-ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡುವ ಡೇಟಾ ವೆಬ್‌ಸೈಟ್ ಗ್ಲೋಬಲ್ ಫೈರ್‌ಪವರ್ ಸೂಚ್ಯಂಕದ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಯನ್ನು ಹೊಂದಿದೆ, ರಷ್ಯಾ ಮತ್ತು ಚೀನಾ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದೆ ಮತ್ತು ಭಾರತ ನಾಲ್ಕನೇ ಸ್ಥಾನದಲ್ಲಿದೆ.
60ಕ್ಕೂ ಹೆಚ್ಚು ಅಂಶಗಳನ್ನು ಮೌಲ್ಯಮಾಪನ ಮಾಡುವ 2023ರ ಮಿಲಿಟರಿ ಪವರ್ ಶ್ರೇಯಾಂಕಗಳು, ಭೂತಾನ್ ಮತ್ತು ಐಸ್ಲ್ಯಾಂಡ್ ಸೇರಿದಂತೆ ವಿಶ್ವದ ದುರ್ಬಲ ಮಿಲಿಟರಿಗಳನ್ನು ಹೊಂದಿರುವ ದೇಶಗಳನ್ನು ಸಹ ಒಳಗೊಂಡಿದೆ.
ಗ್ಲೋಬಲ್ ಫೈರ್ಸ್ ಈ ಶ್ರೇಯಾಂಕಗಳ ಬಗ್ಗೆ ವಿವರಿಸುತ್ತಾ “ಮಿಲಿಟರಿ ಘಟಕಗಳ ಸಂಖ್ಯೆ, ಆರ್ಥಿಕ ಸ್ಥಿತಿ, ವ್ಯವಸ್ಥಾಪನಾ ಸಾಮರ್ಥ್ಯಗಳು ಮತ್ತು ಭೌಗೋಳಿಕ ಸ್ಥಳ ಸೇರಿದಂತೆ, ಹಲವು ವಿಭಾಗಗಳನ್ನು ಪರಿಗಣಿಸಿ ನಿರ್ದಿಷ್ಟ ದೇಶಕ್ಕೆ ಅಂಕಗಳನ್ನು” ನೀಡಲಾಗಿದೆ ಎಂದು ತಿಳಿಸಿದೆ. ನಮ್ಮ ಅನನ್ಯ ಆಂತರಿಕ ಸೂತ್ರವು ಚಿಕ್ಕ (ಮತ್ತು) ಹೆಚ್ಚು ತಾಂತ್ರಿಕವಾಗಿ ಮುಂದುವರಿದ ದೇಶಗಳು ದೊಡ್ಡ (ಮತ್ತು) ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ.
ವಾರ್ಷಿಕವಾಗಿ ಸಂಕಲಿಸಲಾದ ಬೋನಸ್ ಮತ್ತು ಪೆನಾಲ್ಟಿಗಳ ರೂಪದಲ್ಲಿ ವಿಶೇಷ ಮಾರ್ಪಾಡುಗಳನ್ನು ಬಳಸಿಕೊಂಡು ಪಟ್ಟಿಯನ್ನು ಮತ್ತಷ್ಟು ಪರಿಷ್ಕರಿಸಲಾಗಿದೆ ಎಂದು ಗ್ಲೋಬಲ್ ಫೈರ್ಸ್ ತಿಳಿಸಿದೆ. GFP ಸೂತ್ರದ ಬದಲಾವಣೆಗಳು ಸಹ ಇದಕ್ಕೆ ಕಾರಣವಾಗುವುದರಿಂದ “ಟ್ರೆಂಡ್‌ಗಳು ಕ್ಷೀಣಿಸುತ್ತಿರುವ ಶಕ್ತಿಯನ್ನು ಸೂಚಿಸುವುದಿಲ್ಲ” ಎಂದು ಗ್ಲೋಬಲ್ ಫೈರ್ಸ್ ವರದಿಯಲ್ಲಿ ಉಲ್ಲೇಖಿಸಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಹೊಂದಿರುವ 10 ರಾಷ್ಟ್ರಗಳು ಇಲ್ಲಿವೆ:
1) ಯುನೈಟೆಡ್ ಸ್ಟೇಟ್ಸ್
2) ರಷ್ಯಾ
3) ಚೀನಾ
4) ಭಾರತ
5) ಯುನೈಟೆಡ್ ಕಿಂಗ್ಡಮ್
6) ದಕ್ಷಿಣ ಕೊರಿಯಾ
7) ಪಾಕಿಸ್ತಾನ
8) ಜಪಾನ್
9) ಫ್ರಾನ್ಸ್
10) ಇಟಲಿ
ವಿಶ್ವದ ಅತ್ಯಂತ ಕಡಿಮೆ ಶಕ್ತಿಶಾಲಿ ಮಿಲಿಟರಿ ಹೊಂದಿರುವ 10 ರಾಷ್ಟ್ರಗಳು ಇಲ್ಲಿವೆ:
1) ಭೂತಾನ್
2) ಬೆನಿನ್
3) ಮೊಲ್ಡೊವಾ
4) ಸೊಮಾಲಿಯಾ
5) ಲೈಬೀರಿಯಾ
6) ಸುರಿನಾಮ
7) ಬೆಲೀಜ್
8)ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್
9) ಐಸ್ಲ್ಯಾಂಡ್
10) ಸಿಯೆರಾ ಲಿಯೋನ್
ಕಳೆದ ವರ್ಷಕ್ಕೆ ಹೋಲಿಸಿದರೆ ಆದ ಬದಲಾವಣೆಗಳು : 2022 ರ ಜಾಗತಿಕ ಫೈರ್‌ಪವರ್ ಪಟ್ಟಿಯಲ್ಲಿ ಮೊದಲ ನಾಲ್ಕು ರಾಷ್ಟ್ರಗಳು ಹಾಗೆಯೇ ಉಳಿದಿವೆ. ಆದರೆ, ಯುಕೆ ಕಳೆದ ವರ್ಷ ಎಂಟನೇ ಸ್ಥಾನದಿಂದ ಈ ವರ್ಷ ಐದನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷದಂತೆ ದಕ್ಷಿಣ ಕೊರಿಯಾ ಆರನೇ ಸ್ಥಾನದಲ್ಲಿ ಉಳಿದಿದೆ. ಟಾಪ್ 10 ದೇಶಗಳಲ್ಲಿ ಪಾಕಿಸ್ತಾನವು ಏಳನೇ ಸ್ಥಾನ ಪ್ರವೇಶಿಸಿದ್ದು ಜಪಾನ್ ಮತ್ತು ಫ್ರಾನ್ಸ್ ಕಳೆದ ವರ್ಷ ಐದು ಮತ್ತು ಏಳನೇ ಸ್ಥಾನದಲ್ಲಿದ್ದವು, ಈ ವರ್ಷ ಎಂಟು ಮತ್ತು ಒಂಬತ್ತನೇ ಸ್ಥಾನಕ್ಕೆ ಇಳಿದಿವೆ.
ಎರಡನೇ ಸ್ಥಾನದಲ್ಲಿ ರಷ್ಯಾ?: ಕಳೆದ ಫೆಬ್ರವರಿಯಲ್ಲಿ ಮಾಸ್ಕೋ ತನ್ನ ನೆರೆಯ ದೇಶದ ಮೇಲೆ ಆಕ್ರಮಣ ಮಾಡಲು “ವಿಶೇಷ ಕಾರ್ಯಾಚರಣೆ” ಪ್ರಾರಂಭಿಸಿದ ನಂತರ ಉಕ್ರೇನಿಯನ್ ಪಡೆಗಳನ್ನು ಸೋಲಿಸಲು ಅದರ ಸ್ಪಷ್ಟ ಅಸಮರ್ಥತೆಯಿದ್ದರೂ ಎರಡನೇ ಸ್ಥಾನವನ್ನು ಉಳಿಸಿಕೊಂಡಿರುವ ರಷ್ಯಾದ ಸಾಮರ್ಥ್ಯದ ಬಗ್ಗೆ ಹಲವು ಅನುಮಾನಗಳಿವೆ ಎಂದು ಗ್ಲೋಬಲ್ ಫೈರ್‌ಪವರ್ ವರದಿಗಳಲ್ಲಿ ಉಲ್ಲೇಖಿಸಿದೆ.
( ಕೃಪೆ :ಅಂತರ್ಜಾಲ )