Advertisement
MIRROR FOCUS

ಆಗ್ನೇಯ ಏಷ್ಯಾದಲ್ಲಿ ‘ಅಡಿಕೆ ಅಲರ್ಟ್‌’ | WHO ಹೊಸ “Strategic Framework”

Share

ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆಯಿಂದ ಉಂಟಾಗುತ್ತಿರುವ ಆರೋಗ್ಯ ಅಪಾಯಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಆಯೋಜಿಸಿದ್ದ ವೆಬಿನಾರ್‌ನ ಕೊನೆಯಲ್ಲಿ ಮಾತನಾಡಿದ WHO ದ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞೆ ಹಾಗೂ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ  ಪ್ರಾದೇಶಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಲಿಕಾ ಗುಣವರ್ಧನ ಅವರು WHO ರೂಪಿಸಿರುವ ಅಡಿಕೆ ಬಳಕೆ ನಿಯಂತ್ರಣ Strategic Framework ಕುರಿತು ವಿವರಿಸುತ್ತಾ, ಈ ನಿಯಮವನ್ನು ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಪಡೆದು, ಕಳೆದ ವರ್ಷದಿಂದ ಜಾರಿಗೆ ಬಂದಿದೆ ಎಂದು ಹೇಳಿದರು.  ಆಗ್ನೇಯ ಏಷ್ಯಾದಲ್ಲಿ ಅಡಿಕೆ ಬಳಕೆ, ಧೂಮರಹಿತ ತಂಬಾಕು ಹಾಗೂ ಹೊಸ ನಿಕೋಟಿನ್ ಉತ್ಪನ್ನಗಳಿಂದ ಉಂಟಾಗುತ್ತಿರುವ ಆರೋಗ್ಯ ಸಂಕಷ್ಟವನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ (WHO) ಹೊಸ ಚೌಕಟ್ಟು (Strategic Framework) ಬಿಡುಗಡೆ ಮಾಡಿದೆ ಎಂದರು.

ಸದಸ್ಯ ರಾಷ್ಟ್ರಗಳಿಂದ ಅನುಮೋದನೆ ಪಡೆದು ಕಳೆದ ವರ್ಷದಿಂದ ಜಾರಿಗೆ ಬಂದ ಈ ಚೌಕಟ್ಟು, ತಂಬಾಕು ನಿಯಂತ್ರಣಕ್ಕೆ ಇರುವ WHO–FCTC ಒಪ್ಪಂದ, Empower Package, NCD Best Buys ಹಾಗೂ Sustainable Development Goals (SDGs) ಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಈ ಚೌಕಟ್ಟಿನ ದೃಷ್ಟಿಯು WHO ಆಗ್ನೇಯ ಏಷ್ಯಾ ಪ್ರದೇಶವನ್ನು ತಂಬಾಕು, ನಿಕೋಟಿನ್, ಅಡಿಕೆ ಬಳಕೆ ಮುಕ್ತ ಪ್ರದೇಶವನ್ನಾಗಿಸುವುದು. ವಿಶೇಷವಾಗಿ ಯುವಜನತೆ, ಮಹಿಳೆಯರು ಹಾಗೂ ಹಿಂದುಳಿದ ಸಮುದಾಯಗಳನ್ನು ಈ ಉತ್ಪನ್ನಗಳ ಹಾನಿಯಿಂದ ರಕ್ಷಿಸಲು ಸಾಕ್ಷ್ಯಾಧಾರಿತ ನೀತಿಗಳು ಅಗತ್ಯವೆಂದು WHO ಸ್ಪಷ್ಟಪಡಿಸಿದೆ.

ಅಡಿಕೆ ಮತ್ತು ಧೂಮರಹಿತ ತಂಬಾಕು ಬಳಕೆಯಿಂದಾಗುವ ಆರೋಗ್ಯ, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಹಾನಿಯನ್ನು ಕಡಿಮೆ ಮಾಡಲು ದೇಶಗಳಿಗೆ ಮಾರ್ಗದರ್ಶನ ನೀಡುವುದು ಈ ಚೌಕಟ್ಟಿನ ಮುಖ್ಯ ಉದ್ದೇಶ ಆಗಿದೆ. ಇದಕ್ಕಾಗಿ 7 ಮಾರ್ಗದರ್ಶಕ  ಸೂತ್ರಗಳನ್ನು ನಿರ್ಮಿಸಲಾಗಿದೆ. ಈ ಚೌಕಟ್ಟು 7 ತತ್ವಗಳ ಮೇಲೆ ನಿರ್ಮಿತವಾಗಿದೆ. ರಾಷ್ಟ್ರೀಯ ಆದ್ಯತೆ ಮತ್ತು ಕಾನೂನುಗಳು, ಸರ್ಕಾರ–ಸಮಾಜ ಸಹಭಾಗಿತ್ವ, ಸಾಕ್ಷ್ಯಾಧಾರಿತ ಕ್ರಮ, ಪರಿಸರ ಮತ್ತು ಆರ್ಥಿಕ ಹೊಣೆಗಾರಿಕೆ ಸೇರಿದಂತೆ ಇತರ ಭಾಗ. ಇದೇ ವೇಳೆ ಈ ಸಮಸ್ಯೆ ಎದುರಿಸಲು 7 ಪ್ರಮುಖ ಗುರಿಗಳನ್ನು ಕೂಡಾ ಘೋಷಿಸಿದೆ. ನಾಯಕತ್ವ ಮತ್ತು ಆಡಳಿತ,  ನೀತಿ ಮತ್ತು ನಿಯಮಾವಳಿ ಸುಧಾರಣೆ, ಅನುಷ್ಠಾನ ಮತ್ತು ನಿಯಮ ಪಾಲನೆ , ಜಾಗೃತಿ ಮತ್ತು ಶಿಕ್ಷಣ, ಸಂಶೋಧನೆ ಮತ್ತು ಮೇಲ್ವಿಚಾರಣೆ.

 ಅಡಿಕೆ ನಿಯಂತ್ರಣಕ್ಕೆ ರಾಷ್ಟ್ರೀಯ ಚೌಕಟ್ಟು ರೂಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಡಾ.ನಲಿಕಾ ಹೇಳಿದರು. ಅಡಿಕೆ ಬಳಕೆಯನ್ನು ಕಡಿಮೆ ಮಾಡಲು ದೇಶಗಳು ತಮ್ಮದೇ ರಾಷ್ಟ್ರೀಯ ನಿಯಂತ್ರಣ ಚೌಕಟ್ಟು ರೂಪಿಸಬೇಕು. ಇದರಲ್ಲಿ ಜಾಗೃತಿ ಅಭಿಯಾನ, ಸಂಶೋಧನೆ, ರಕ್ಷಣಾ ವ್ಯವಸ್ಥೆಗಳು ಸೇರಬೇಕು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಅಡಿಕೆ ಸಮಸ್ಯೆ ಕುರಿತು ರಾಷ್ಟ್ರೀಯ ಮಟ್ಟದ ಪಾಲುದಾರರ ಸಂವಾದ ಆರಂಭವಾಗಬೇಕು,  ಸ್ಥಳೀಯ ಪರಿಸ್ಥಿತಿಗೆ ಹೊಂದುವ ನೀತಿ ರೂಪಿಸುವುದು, ಯುವಜನ, ಮಹಿಳೆಯರು, ಗ್ರಾಮೀಣ ಸಮುದಾಯಗಳಿಗೆ ವಿಶೇಷ ಜಾಗೃತಿ ಅಭಿಯಾನ, ತಂಬಾಕು ಸೇವೆಗಳಲ್ಲಿ ಅಡಿಕೆ ನಿಯಂತ್ರಣ ಸೇರಿಸುವುದು, ಆರೋಗ್ಯ ಪರಿಣಾಮ ಮತ್ತು ಮಾರುಕಟ್ಟೆ ಕುರಿತು ಸಂಶೋಧನೆ ಬೆಂಬಲ, ರಾಷ್ಟ್ರೀಯ ಸಮೀಕ್ಷೆಗಳಲ್ಲಿ ಅಡಿಕೆಯನ್ನು ಸೇರಿಸುವ ಮೇಲ್ವಿಚಾರಣಾ ವ್ಯವಸ್ಥೆ ಇರಬೇಕು. 2027 ಮತ್ತು 2030 ರಲ್ಲಿ ಪ್ರಗತಿ ವರದಿ ಪ್ರಾದೇಶಿಕ ಸಮಿತಿಗೆ ಸಲ್ಲಿಸುವುದಾಗಿ WHO ತಿಳಿಸಿದೆ.

ಒಟ್ಟಾರೆ, ಅಡಿಕೆ ಹಾಗೂ ಧೂಮರಹಿತ ತಂಬಾಕು ಬಳಕೆ ಆಗ್ನೇಯ ಏಷ್ಯಾದಲ್ಲಿ ಗಂಭೀರ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವುದರಿಂದ, ನೀತಿ ಸುಧಾರಣೆ, ಜಾಗೃತಿ, ಮೇಲ್ವಿಚಾರಣೆ ಮತ್ತು ಸಂಶೋಧನೆ ಮೂಲಕ ಸಮಗ್ರ ನಿಯಂತ್ರಣ ಅಗತ್ಯವೆಂದು WHO ಸ್ಪಷ್ಟಪಡಿಸಿದೆ.

ಇದನ್ನೂ ಓದಿ….

ನಿಮ್ಮ ಪ್ರತಿಕ್ರಿಯೆಗಳಿಗೆ….

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

8 hours ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

14 hours ago

ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ

ಈ ವರ್ಷ ಬೇಸಿಗೆ ಬಿತ್ತನೆ 64 ಲಕ್ಷ ಹೆಕ್ಟೇರ್ ದಾಟಿದ್ದು, ಕಳೆದ ವರ್ಷಕ್ಕಿಂತ…

14 hours ago

ಮುಂದಿನ 5 ದಿನ ತಾಪಮಾನ ಏರಿಕೆ ಎಚ್ಚರಿಕೆ ! ಉತ್ತರ-ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ತೀವ್ರ

ಮುಂದಿನ ಐದು ದಿನಗಳಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಾಗಲಿದೆ…

1 day ago

ಹವಾಮಾನ ವರದಿ | 14-04-2026 | ಕರ್ನಾಟಕದಲ್ಲಿ ಉರಿಬಿಸಿಲು…! ಆದರೆ ಮಳೆಯೂ ಬರುತ್ತಿದೆ ! ಯಾವಾಗ ಗೊತ್ತಾ? – ಸದ್ಯ ರೈತರಿಗೆ ಸಲಹೆ ಏನು..?

ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಮುಂದುವರಿದಿದ್ದು, ಏಪ್ರಿಲ್ 18ರಿಂದ ಮಳೆ ಆರಂಭವಾಗುವ ಸಾಧ್ಯತೆ ಇದೆ.…

1 day ago

ಇರಾನ್-ಇಸ್ರೇಲ್ ಯುದ್ಧದ ಪರಿಣಾಮ – ಮಾವಿನ ರಫ್ತು ಕುಸಿತ, ರೈತರಿಗೆ ಹೊಡೆತ | ಅಲ್ಫೋನ್ಸೊ ಬೆಲೆ ಅರ್ಧಕ್ಕೆ ಇಳಿಕೆ

ಇರಾನ್-ಇಸ್ರೇಲ್ ಯುದ್ಧದಿಂದ ಮಾವಿನ ರಫ್ತು ಕುಸಿತಗೊಂಡು ಬೆಲೆ ತೀವ್ರವಾಗಿ ಇಳಿಕೆಯಾಗಿದೆ. ರೈತರು ನಷ್ಟದಲ್ಲಿ…

2 days ago