ನೀವು ಗಮನಿಸಿದ್ದೀರೋ ಇಲ್ಲವೋ, ಇಂದಿನ ಯುವತಿಯರು(girls) ಕುಳ್ಳಗಿರುವುದೇ(short) ಹೆಚ್ಚು. ಜಗತ್ತಿನ ಸರಿಸುಮಾರು ಎಲ್ಲ ದೇಶಗಳಲ್ಲೂ(country) ಹುಡುಗರು(boys) ಮತ್ತು ಹುಡುಗಿಯರ ಎತ್ತರ(height) ಹೆಚ್ಚಾಗುತ್ತಿದ್ದರೆ ಭಾರತದಲ್ಲಿ(India) ಮಾತ್ರ ಈ ಎತ್ತರ ಕಡಿಮೆಯಾಗುತ್ತಿದೆ. ಅದರಲ್ಲೂ ಎಲ್ಲರ ಮನೆಗಳಲ್ಲೂ ಹುಡುಗಿಯರೇ ಕುಳ್ಳಿಯರು. ಇದಕ್ಕೆ ಕಾರಣಗಳು ಮೂರು. ಈ ಕಾರಣಗಳು ಹುಡುಗಿಯರನ್ನೇ ಹೆಚ್ಚು ಬಾಧಿಸುತ್ತವೆ ಆದುದರಿಂದ ಹುಡುಗಿಯರೇ ಎಲ್ಲರ ಮನೆಗಳಲ್ಲೂ ಕುಳ್ಳಿಯರು.
ಮೊದಲನೆಯ ಕಾರಣ ಚಿಕ್ಕಂದಿನಿಂದ ಅವರು ಅನುಭವಿಸುತ್ತಿರುವ ಪೋಷಕಾಂಶಗಳ ಕೊರತೆ. ನಾವು ಬಳಸುವ ಆಹಾರಗಳು ನಮ್ಮ ಅಜ್ಜ ಅಜ್ಜಿ ಸೇವಿಸಿದ ಆಹಾರಗಳೇ ಆಗಿರಬೇಕು. ಇಂದು ಅದಿಲ್ಲ. ನಾಟಿ ಬೀಜಗಳಿಂದ ಬೆಳೆದ ಆಹಾರಗಳು ಮತ್ತು ಕೀಟನಾಶಕಗಳು ಮತ್ತು ರಾಸಾಯನಿಕ ಬಳಸದೆಯೂ ಬೆಳೆದ ಆಹಾರಗಳನ್ನು ನಮ್ಮ ಹಿರಿಯರು ಬಳಸುತ್ತಿದ್ದರು. ಇಂತಹ ಆಹಾರಗಳು ಇಂದು ಹುಡುಕಿದರೆ ಎಲ್ಲಿಯೂ ಸಿಗುವುದಿಲ್ಲ. ಇದು ನಮ್ಮ ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಪೋಷಕಾಂಶಗಳ ಕೊರತೆಯನ್ನು ಉಂಟುಮಾಡುತ್ತಿದೆ. ಈ ಪೋಷಕಾಂಶಗಳ ಕೊರತೆಯಿಂದಾಗಿ ಅವರ ಬೆಳವಣಿಗೆಯ ಹಾರ್ಮೋನು ತೊಂದರೆಗೆ ಸಿಲುಕುತ್ತದೆ. ಅವರು ದೊಡ್ಡವರಾದಾಗ ಅವರ ಬೆಳವಣಿಗೆಯಲ್ಲಿ ಕೊರತೆಯಾಗುತ್ತಿದೆ. ಎತ್ತರ ಕಡಿಮೆಯಾಗುತ್ತಿದೆ.
ಹುಡುಗಿಯರ ಎತ್ತರ ಕಡಿಮೆಯಾಗುತ್ತಿರುವುದಕ್ಕೆ ಎರಡನೆಯ ಕಾರಣ ಚಿಕ್ಕಂದಿನಿಂದ ಅವರು ಅತಿ ಹೆಚ್ಚು ಸಕ್ಕರೆ ಮತ್ತು ಬೇಕರಿಯ ಆಹಾರಗಳನ್ನೇ ಸೇವಿಸುತ್ತಿರುವುದು.
ಬ್ರಿಟಿಷರ ಭಾರತದ ಆಡಳಿತ ಬರೀ ಅಧಿಕಾರ, ದಬ್ಬಾಳಿಕೆ, ಲೂಟಿ, ಇವುಗಳಿಗೆ ಸೀಮಿತವಾಗಿರಲಿಲ್ಲ. ಭಾರತದ ಸಾಂಸ್ಕೃತಿಕ ವೈವಿಧ್ಯಮತೆಯನ್ನು ಹಾಳುಮಾಡಿ ಮಾಡಿ ನಮ್ಮ ಆರೋಗ್ಯವನ್ನು ಎಂದೆಂದಿಗೂ ಹಾನಿಗೀಡು ಮಾಡುವ ಗುರಿಯನ್ನು ಕೂಡ ಅವರು ಹೊಂದಿದ್ದರು. ಈ ಗುರಿಯ ಭಾಗವಾಗಿ ಬ್ರಿಟಿಷ್ ಆಹಾರ ಪದ್ಧತಿಯಾದ ಬೇಕರಿ ಆಹಾರಗಳನ್ನು ಅವರು ಇಲ್ಲಿ ಬಳಸಲು ಪ್ರೇರೇಪಿಸಿದರು. ಅವುಗಳೇ ಶ್ರೇಷ್ಠವೆಂದು ಬಿಂಬಿಸಿದರು. ಅದನ್ನೇ ಬೆಳವಣಿಗೆ ಎಂದು ತಿಳಿದಿದ್ದ ನಮ್ಮ ಸರ್ಕಾರಗಳು ಕೂಡ ಈ ಆಹಾರಗಳನ್ನು ಬೆಂಬಲಿಸಿದವು. ಹೀಗಾಗಿ ಇಂದು ಪ್ರತಿ ಹಳ್ಳಿಗಳಲ್ಲಿಯೂ ಸಾಲು ಸಾಲಾಗಿ ಬೇಕರಿಗಳು ಎದ್ದು ನಿಂತಿವೆ. ಇಲ್ಲಿ ದೊರೆಯುವ ಯಾವುದೇ ಆಹಾರಗಳು ಭಾರತೀಯ ಮೂಲದವು ಅಲ್ಲ.
ಆಹಾರದಲ್ಲಿನ ಬದಲಾವಣೆಗಳು ನಮ್ಮ ಜೀವ ತಂತುಗಳಲ್ಲಿ ಕೂಡ ಬದಲಾವಣೆಗಳನ್ನು ತರುತ್ತವೆ. ಈ ಬದಲಾವಣೆಗಳಿಂದ ಬರುವ ಕಾಯಿಲೆಗಳು ಮೊದಲ ಪೀಳಿಗೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎರಡನೇ ಪೀಳಿಗೆಯಲ್ಲಿ ಸ್ವಲ್ಪವಾಗಿ ಮತ್ತು ಮೂರನೇ ಪೀಳಿಗೆಯಲ್ಲಿ ಹೆಚ್ಚಾಗಿ ಈ ಕಾಯಿಲೆಗಳು ಕಂಡುಬರುತ್ತವೆ. ಬೇಕರಿಯ ಆಹಾರಗಳೇ ಪ್ರಮುಖ ಆಹಾರಗಳಾದಾಗ ನಮ್ಮ ಮೂರನೆಯ ಪೀಳಿಗೆಯಿಂದ ನಂತರದ ಎಲ್ಲಾ ಪೀಳಿಗೆಗಳು ಈ ಕಾಯಿಲೆಗಳಿಗೆ ತುತ್ತಾಗುತ್ತವೆ. ಅಶಕ್ತ ಪೀಳಿಗೆಯನ್ನು ನಾವು ಹುಟ್ಟು ಹಾಕುತ್ತಿರುತ್ತೇವೆ.
ಬೇಕರಿಯ ಆಹಾರಗಳೇ ಪ್ರಮುಖ ಆಹಾರವಾದಾಗ ಮಕ್ಕಳು ಪೋಷಕಾಂಶಗಳ ಕೊರತೆಯಿಂದ ನರಳುತ್ತಾರೆ. ಬೆಳವಣಿಗೆಯ ತೊಂದರೆಯನ್ನೂ ಅನುಭವಿಸುತ್ತಾರೆ.
ಚಿಕ್ಕಂದಿನಿಂದ ಹೆಚ್ಚು ಬೇಕರಿಯ ಆಹಾರಗಳನ್ನು ಸೇವಿಸಿದ ಪರಿಣಾಮವಾಗಿ ಪೋಷಕಾಂಶಗಳ! ಕೊರತೆಯಿಂದಾಗಿ ಅವರ ಎತ್ತರ ಕಡಿಮೆಯಾಗುತ್ತಿದೆ. ಬೇಕರಿಯ ಆಹಾರಗಳು ಮತ್ತು ಸಿಹಿ ತಿಂಡಿಗಳಲ್ಲಿರುವ ಕೊಬ್ಬಿನ ಅಂಶದಿಂದಾಗಿ ಅವರ ಹಾರ್ಮೋನುಗಳಲ್ಲಿ ಕೂಡ ಬದಲಾವಣೆಗಳು ಉಂಟಾಗಿ ಹಾರ್ಮೋನುಗಳಲ್ಲಿನ ಏರುಪೇರಿನಿಂದಾಗಿ ಯುವತಿಯರು ಇಂದು ಮುಟ್ಟಿನ ತೊಂದರೆ, ಪಿಸಿಓಡಿ, ಸಂತಾನ ಹೀನತೆ ಯಂತಹ ಸಮಸ್ಯೆಗಳಿಗೆ ಕೂಡ ಸಿಲುಕಿ ಕೊಳ್ಳುತ್ತಿದ್ದಾರೆ. ಯುವಕರು ಕೂಡ ಸಮಸ್ಯೆಗಳಿಗೆ ಸಾವಕಾಶವಾಗಿ ಸಿಲುಕಿಕೊಳ್ಳುತ್ತಿದ್ದಾರೆ.
ಈ ಸಮಸ್ಯೆಗೆ ಮೂರನೆಯ ಕಾರಣ ಚಿಕ್ಕಂದಿನಿಂದಲೇ ನಮ್ಮ ಮಕ್ಕಳು ಕುಡಿಯುತ್ತಿರುವ ಆರ್ ಓ ಎಂಬ ಅಯೋಗ್ಯ ನೀರು. ಈ ನೀರಿನಲ್ಲಿ ಅವರಿಗೆ ಬೇಕಾದ ಯಾವುದೇ ಪೋಷಕಾಂಶಗಳಿರುವುದಿಲ್ಲ. ನಮ್ಮ ದೇಹಕ್ಕೆ ಪ್ರತಿ ದಿನ ಅತ್ಯವಶ್ಯವಾಗಿ ಬೇಕಾಗುವ ಖನಿಜಾಂಶಗಳಾದ ಮ್ಯಾಗ್ನೇಶಿಯಂ, ಕ್ಯಾಲ್ಸಿಯಂ, ಜಿಂಕ್, ಮುಂತಾದವುಗಳನ್ನು ಆರ್ ಓ ಹೊರಗೆ ಹಾಕಿ ಸತ್ತ ನೀರನ್ನು ನಮಗೆ ಕೊಡುತ್ತದೆ. ಮ್ಯಾಗ್ನೇಶಿಯಂ ನಮ್ಮ ಹೃದಯದ ಬೆಳವಣಿಗೆಗೆ ಅತಿ ಅವಶ್ಯಕ. ಕ್ಯಾಲ್ಸಿಯಂ ನಮ್ಮ ಮೂಳೆಗಳ ಮತ್ತು ಹಲ್ಲುಗಳ ಬೆಳವಣಿಗೆಗೆ ಅತಿ ಅವಶ್ಯಕ. ಜಿಂಕ್ ನಮ್ಮ ಸಂತಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಪೋಷಕಾಂಶಗಳಿಲ್ಲದ ನೀರನ್ನು ಪ್ರತಿನಿತ್ಯ ನಾವು ಸೇವಿಸಿದಾಗ ಈ ಪೋಷಕಾಂಶಗಳ ಕೊರತೆಯಿಂದ ನಮ್ಮ ಎತ್ತರವೂ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ಆರ್ ಓ ನೀರು ಮಾಡುವ ಅತ್ಯಂತ ಕೆಟ್ಟ ಕೆಲಸವೆಂದರೆ ದೇಹಕ್ಕೆ ಸೇರಿದಾಗ ಅದು ದೇಹದಲ್ಲಿನ ಪೋಷಕಾಂಶಗಳನ್ನು ಕೂಡ ಹೀರಿಕೊಂಡು ಹೊರ ಹೋಗುತ್ತದೆ. ತಾನು ತರುವುದು ಏನೂ ಇಲ್ಲ. ಇದ್ದದ್ದನ್ನು ದೋಚುತ್ತದೆ. ಕಾರಣ RO ನೀರು ಸೇವನೆ ಖಂಡಿತ ಒಳ್ಳೆಯದಲ್ಲ. ಅದು ನಮ್ಮ ಮಕ್ಕಳ ಎತ್ತರವನ್ನಷ್ಟೇ ಕುಗ್ಗಿಸುವುದಿಲ್ಲ ಎಲ್ಲಾ ಅಂಗಾಂಗಗಳನ್ನು ಹಾಳು ಮಾಡಿ ನಮ್ಮನ್ನು ಮಲ್ಟಿಪಲ್ ಆರ್ಗನ ಫೇಲ್ಯೂರ್, ಹಲವು ಅಂಗಾಂಗ ವೈಫಲ್ಯ ಎಂಬ ಕಾರಣದಿಂದ ಸಾವಿಗೆ ದೂಡುತ್ತದೆ. ಕಾರಣ ನಿಮ್ಮ ಕುಡಿಯುವ ನೀರಿಗಾಗಿ ಮತ್ತೊಮ್ಮೆ ಭಾವಿ ಕೆರೆಗಳನ್ನು ಹುಡುಕಿಕೊಂಡು ಹೋಗದೆ ಬೇರೆ ದಾರಿ ಮನುಷ್ಯನಿಗಿಂದು ಉಳಿದಿಲ್ಲ. ನೈಸರ್ಗಿಕ ನೀರಿಗೆ ಪರ್ಯಾಯ ವಾದುದು ಯಾವುದೂ ಇಲ್ಲ. ಸುಳ್ಳು ಜಾಹೀರಾತುಗಳಿಗೆ ಬಲಿಯಾಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ನಾಟಿ ಬೀಜಗಳ ಆಹಾರಗಳನ್ನು ಉಳಿಸೋಣ. ಆರ್ಗನಿಕ್ ರೀತಿಯಿಂದ ಬೆಳೆದ ಆಹಾರ ಬಳಸೋಣ. ಅತಿಯಾದ ಸಕ್ಕರೆ, ಬೇಕರಿಯ ಆಹಾರಗಳು ಮತ್ತು ಆರ್‌ಓ ನೀರನ್ನು ತ್ಯಜಿಸಿ ನಮ್ಮ ಮಕ್ಕಳ ಆರೋಗ್ಯವನ್ನು ರಕ್ಷಿಸೋಣ ,ಬಲಿಷ್ಠ ಭಾರತ ಕಟ್ಟೋಣ
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…
ರಾಜ್ಯದಲ್ಲಿ ತುಮಕೂರು, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಹೆಚ್ಚಾಗಿ ಹುಣಸೆಹಣ್ಣು ಬೆಳೆಯಲಾಗುತ್ತಿದೆ. ಈ…