(ಸಾಂದರ್ಭಿಕ ಚಿತ್ರ)
ಎಲ್ಲೆಡೆ ಪತಿಯ ಕಾಟಕ್ಕೆ ಪತ್ನಿ ಆತ್ಮಹತ್ಯೆ ಮಾಡುವ ಸುದ್ದಿ ಕಾಣುತ್ತಿದೆ, ಇಲ್ಲಿ ಮಾತ್ರಾ ಪತ್ನಿಯ ಕಾಟಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಆತ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ, ಪತ್ನಿಯ ಹೀಯಾಳಿಕೆ. ಪ್ರತೀ ಬಾರಿ ಹಳ್ಳಿ ಗುಗ್ಗು ಎನ್ನುತ್ತಿದ್ದ ಕಾರಣದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿಈ ನಡೆದಿದೆ. 38 ವರ್ಷದ ಮಂಜುನಾಥ್ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಈ ವ್ಯಕ್ತಿ ಕಿರಾತಕಿ ಪತ್ನಿಯ ಹಿಂಸೆ ತಾಳಲಾರದೇ ಪತಿ ಮಗಳನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮುನ್ನ ತನ್ನ ಒಡ ಹುಟ್ಟಿದ ಅಣ್ಣನಿಗೆ ಆಡಿಯೋ ಸಂದೇಶ ರವಾನಿಸಿ ಪ್ರಾಣ ಬಿಟ್ಟಿದ್ದಾನೆ. ಅಲ್ದೇ ಆಡಿಯೋದಲ್ಲಿ ಹೆಂಡತಿಯಿಂದ ತನು ಅನುಭವಿಸಿದ ಕಷ್ಟ ನೋವು ಅವಮಾನ ಎಲ್ಲವನ್ನ ಸಹೋದರನ್ನ ಬಳಿ ಹೇಳಿಕೊಂಡು ಮಗಳನ್ನ ಚೆನ್ನಾಗಿ ನೋಡಿಕೋ ಅಣ್ಣ ಅಂತ ಹೇಳಿ ಪಾಪದ ಪತಿ ಇಹ ಲೋಕ ತ್ಯಜಿಸಿಬಿಟ್ಟಿದ್ದಾನೆ.
ನೀನು ಹಳ್ಳಿ ಗುಗ್ಗು ಅಂತ ಪದೇ ಪದೇ ಕಿಚಾಯಿಸ್ತಿದ್ದ ಹೆಂಡತಿಯ ಮಾತಿನಿಂದ ಬೇಸತ್ತ ಈ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ. ಇಂಜಿನಿಯರ್ ಆಗಿ ಸಂಬಳಕ್ಕೇನು ಕೊರತೆ ಇರಲಿಲ್ಲ. ಮದುವೆ ಆಗಿ 9ವರ್ಷ ಆದರೂ ಕೂಡ ಪತ್ನಿಯ ನಿರಂತರ ಕಾಟ ತಪ್ಪಿರಲಿಲ್ಲ ಪತ್ನಿಯ ನಿತ್ಯದ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಗೋಮಾಳ, ಕೆರೆ ಜಾಗ ಸೇರಿದಂತೆ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ತೆರವುಗೊಳಿಸಲು ಕಠಿಣ…
ಕ್ರಿಕೆಟ್ ಪಂದ್ಯವನ್ನು ಅಥವಾ ಗ್ರಹಣವನ್ನು ವೀಕ್ಷಿಸುವುದಕ್ಕಾಗಿ ಸಮಯವನ್ನಿಟ್ಟುಕೊಂಡು ಸಿದ್ಧರಾಗುವಂತೆ ನಾನು ಸಿದ್ಧನಾಗಿದ್ದೆ. ಇಲ್ಲಿ…
ರಾಜ್ಯದ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 22 ರಿಂದ ಬೇಸಿಗೆ ಮಳೆ ಆರಂಭವಾಗುವ…
ಈಚೆಗೆ ಕರಾವಳಿ-ಮಲೆನಾಡು ಭಾಗದಲ್ಲಿ ತಾಪಮಾನ ವಿಪರೀತ ಏರಿಕೆಯಾಗುತ್ತಿದೆ. ಅದರ ಜೊತೆಗೇ ತೇವಾಂಶ ಗಣನೀಯವಾಗಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490