ಮಳೆಗಾಲದಲ್ಲಿ ಸಿಗುವ ಆಹಾರ ಪದಾರ್ಥಗಳು ಬಹಳ ಖುಷಿ ಕೊಡುತ್ತವೆ. ಕೆಲವಂತೂ ಮಳೆಗಾಲದಲ್ಲಿ ಮಾತ್ರವೇ ಸಿಗುತ್ತವೆ. ಮಲೆನಾಡು(Malenadu) ಕರಾವಳಿಗಳಲ್ಲಂತೂ ಮಳೆಗಾಲ ಆಹಾರ ಪದ್ದತಿಯೇ(Coastal food system) ಬೇರೆ. ಪತ್ರೊಡೆ, ಕಳಲೆ, ಹಲಸಿನ ಹಣ್ಣು, ಕಾಡು ಅಣಬೆ, ಹೊಳೆಯ ಮೀನು, ಏಡಿ… ಇತ್ಯಾದಿ. ಅದರಲ್ಲೂ ಕಾಡಿನಲ್ಲಿ ಮಳೆಗಾಲದಲ್ಲಿ ಕಾಡು ಅಣಬೆ ಶಿಕಾರಿ(Mushroom Harvest) ಮಾಡೋದಂದ್ರೆ ಅದರ ಮಜನೇ ಬೇರೆ. ಆದ್ರೆ ನಾವು ಕಾಡಿನಲ್ಲಿ ಶಿಕಾರಿ ಬೇಟೆ ಮಾಡಬೇಕಾದರೆ ಒಂದಷ್ಟು ಕ್ರಮಗಳನ್ನು ಅನುಭವಿಸಲೇ ಬೇಕು.
ಅಣಬೆ ಶಿಕಾರಿ..! : ಮಳೆಗಾಲದ ಪದಾರ್ಥಗಳ ರಾಣಿ, ಕಾಡಿನ ಅಂಚಲ್ಲಿ ಬೆಳೆದು ಮನೆಯಲ್ಲಿ ಮಸಾಲೆಯೊಡನೆ ಬೆರೆಯುವ ದುಬಾರಿ ಅಣಬೆಯನ್ನು ಈಗೀಗ ತುಂಬಾ ಜನ ಮನೆಯಲ್ಲಿ ಬೆಳೆಯುತ್ತಿದ್ದಾರೆ. ಆದರೆ ಕಾಡಿನ ಅಣಬೆಯ ಮುಂದೆ ಅವು ಸಪ್ಪೆ. ಇಂತಿಪ್ಪ, ಕಾಡಿನ ಅಣಬೆಗಳ ಪ್ರಭೇದಗಳೂ ಬಹಳ. ಆದರೆ ಅವುಗಳನ್ನು ಕೀಳುವ ವಿಚಾರಕ್ಕೆ ಬಂದರೆ ನೂರಾರು ರೀತಿ ರಿವಾಜು ಇದೆ. ಅದೇ ಒಂದು ಇಂಟೆರೆಸ್ಟಿಂಗ್ ಕಥೆ ಕೂಡಾ.
ಹೀಗಿದೆ ರೀತಿ..! : ಅಣಬೆಯನ್ನು ನೇರವಾಗಿ ಕೀಳಲಾಗುವುದಿಲ್ಲ. ಅಣಬೆಯ ಜಾಗದಲ್ಲಿ ಗಲೀಜು ಮಾಡುವ ಹಾಗಿಲ್ಲ, ಅಣಬೆ ಕೀಳುವಾಗ ಕಾಲು ಮಡಿಚಿ ಕೂರುವಂತಿಲ್ಲ. ಅಷ್ಟೇ ಅಲ್ಲ ಅಣಬೆ ಕೀಳುವಾಗ ಶಬ್ದ ಮಾಡುವ ಆಗೂ ಇಲ್ಲ. ಇಷ್ಟಲ್ಲ ರಿವಾಜುಗಳು ಪಾಲಿಸೋದಿದ್ರಷ್ಟೇ ನಿಮ್ಗೂ ಅಣಬೆ ಶಿಕಾರಿಗೆ ಹೋಗ್ಬಹದು.
ವಿಶಿಷ್ಟ ನಂಬಿಕೆ : ಅಣಬೆ ಕೀಳಬೇಕಾದರೆ ಅಣಬೆ ಬೆಳೆದ ಜಾಗದಲ್ಲಿ ಬೆನ್ನನ್ನು ಮಾತ್ರ ಬಗ್ಗಿಸಿ ಒಂದು ಚೂಪಾದ ಕೋಲು ಅಥವಾ ರಾಡ್ ತೆಗೆದುಕೊಂಡು ಅಣಬೆಯನ್ನು ನೆಲದಿಂದ ಕೀಳಬೇಕು. ಈ ಸಂದರ್ಭದಲ್ಲಿ ಎಂತಾ ಕಷ್ಟವಿದ್ದರೂ ಮಾತನಾಡಬಾರದು, ನಂತರ ಆ ಜಾಗವನ್ನು ಗಲೀಜು ಮಾಡದೇ ಅಲ್ಲಿ ಯಾವುದೇ ರೀತಿಯ ಕಸ ಹಾಕದೇ ಅಲ್ಲಿಂದ ಮೌನವಾಗಿ ಬರಬೇಕು. ಅಣಬೆಯನ್ನು ಸಂಗ್ರಹಿಸಿದ ನಂತರ ಬೇಕಾದರೆ ಮಾತನಾಡಬಹುದು, ಇದು ಜಾನಪದ ನಂಬಿಕೆ. ಒಮ್ಮೆ ಮೂರರಿಂದ ಆರು ಜಾಗದಲ್ಲಿ ಇವು ಬೆಳೆಯುತ್ತವೆ. ಅಲ್ಲದೇ ಆರು ದಿನ ಈ ಬೆಳೆ ಇರುತ್ತದೆ. ಈ ಸಲ ಅವಧಿಗೂ ಮುನ್ನ ಅಣಬೆ ಬಂದಿವೆ. ಒಂದು ವೇಳೆ ಮೇಲೆ ಹೇಳಿದ ನಿಯಮ ಅನುಸರಿಸದೇ ಇದ್ದಲ್ಲಿ ಅಣಬೆ ಮುಂದಿನ ವರ್ಷ ಬೆಳೆಯುದಿಲ್ಲ ಎಂಬ ನಂಬಿಕೆಯಿದೆ.
ಮಾನಸಿಕ ವಿಕಲಚೇತನರಾಗಿ ಉಡುಪಿಯಲ್ಲಿ ರಸ್ತೆ ಬದಿ ತಿರುಗಾಡುತ್ತಿದ್ದ ಬಿಹಾರದ ರಮಾದೇವಿ ಅವರು ವರ್ಷದ…
ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…
ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …