ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

April 27, 2026
9:23 AM
ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ. ಈ ಕ್ರಮದಿಂದ ಮಾನವ–ವನ್ಯಜೀವಿ ಸಂಘರ್ಷ ಕಡಿಮೆಯಾಗುತ್ತಿದೆ.

ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಾದ ಹಿನ್ನೆಲೆ ಮಲೆನಾಡಿನಲ್ಲಿಯೂ ವನ್ಯಜೀವಿಗಳಿಗೆ ನೀರಿನ ಕೊರತೆ ಉಂಟಾಗಿದೆ. ಇದನ್ನು ಮನಗಂಡ ಅರಣ್ಯ ಇಲಾಖೆ, ಕಾಡು ಪ್ರಾಣಿ ಮತ್ತು ಪಕ್ಷಿಗಳ ದಾಹ ತಣಿಸಲು ವಿಶೇಷ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ, ನಿಯಮಿತವಾಗಿ ನೀರು ತುಂಬುವ ಕಾರ್ಯ ನಡೆಯುತ್ತಿದೆ. ಮೂರು ದಿನಕ್ಕೊಮ್ಮೆ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದ್ದು, ಪಕ್ಷಿಗಳಿಗಾಗಿ ಮರಗಳಿಗೆ ನೀರಿನ ಬಾಟಲ್‌ಗಳನ್ನು ಕಟ್ಟಲಾಗಿದೆ.

ಕಾಳಿ ಹುಲಿ ರಕ್ಷಿತ ಪ್ರದೇಶ, ಶರಾವತಿ ಮೀಸಲು ಅರಣ್ಯ ಮತ್ತು ಬೇಡ್ತಿ–ಶಾಲ್ಮಲ ಅರಣ್ಯ ವ್ಯಾಪ್ತಿಯಲ್ಲಿ ನೂರಾರು ಕೃತಕ ನೀರಿನ ಮೂಲಗಳನ್ನು ಸೃಷ್ಟಿಸಲಾಗಿದೆ.

ಶಿರಸಿ ತಾಲೂಕಿನ ಹುಲೆಕಲ್ ಮತ್ತು ಮಂಚೀಕೇರಿ ಅರಣ್ಯ ಭಾಗಗಳಲ್ಲಿ ನೀರಿನ ಕೊರತೆಯಿಂದ ಪ್ರಾಣಿ–ಪಕ್ಷಿಗಳು ನಾಡಿನತ್ತ ಬರಲು ಪ್ರಾರಂಭಿಸಿದ್ದವು. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಉಂಟಾಗುವ ಸಾಧ್ಯತೆ ಇದ್ದುದರಿಂದ, ಕಾಡಿನಲ್ಲೇ ನೀರಿನ ವ್ಯವಸ್ಥೆ ಮಾಡಲಾಗಿದೆ.

ಮಂಚೀಕೇರಿ ವಲಯದ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರ ಪ್ರಕಾರ, ಕುಂದರಗಿ, ಜಕ್ಕೊಳ್ಳಿ ಮತ್ತು ಬಿಳಕಿ ಶಾಖೆಗಳಲ್ಲಿ 29 ಸ್ಥಳಗಳಲ್ಲಿ ಸಿಮೆಂಟ್ ರಿಂಗ್‌ಗಳ ಮೂಲಕ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳಿಗೊಮ್ಮೆ ನೀರು ತುಂಬುವ ಮೂಲಕ ಕಾಡಿನಲ್ಲೇ ಜೀವಜಲ ಒದಗಿಸಲಾಗುತ್ತಿದೆ.

ಕುಂದರಗಿ ವಲಯದಲ್ಲಿ ಹೆಮ್ಮಡಿ ಮತ್ತು ಭರಣಿ ಪ್ರದೇಶಗಳಲ್ಲಿ ಚುಕ್ಕೆ ಜಿಂಕೆ, ಬಾರ್ಕಿಂಗ್ ಡೀರ್ ಹಾಗೂ ಮೌಸ್ ಡೀರ್‌ಗಳ ಸಂಖ್ಯೆ ಹೆಚ್ಚಿದೆ. ಬೇಸಿಗೆಯಲ್ಲಿ ನೀರಿಗಾಗಿ ಗ್ರಾಮಗಳಿಗೆ ಬರುತ್ತಿದ್ದ ಈ ಪ್ರಾಣಿಗಳ ಚಲನವಲನವನ್ನು ತಡೆಯಲು, ಗ್ರಾಮ ಅರಣ್ಯ ಸಮಿತಿಗಳ ಸಹಕಾರದಲ್ಲಿ 10 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ಜಕ್ಕೊಳ್ಳಿ ಶಾಖೆಯಲ್ಲಿಯೂ ಗ್ರಾಮ ಅರಣ್ಯ ಅಭಿವೃದ್ಧಿ ನಿಧಿಯನ್ನು ಬಳಸಿ 10 ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ನಿಯಮಿತವಾಗಿ ನೀರು ತುಂಬಲಾಗುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈ ಕ್ರಮಗಳಿಂದ ಕಾಡು ಪ್ರಾಣಿಗಳಿಗೆ ಕಾಡಿನಲ್ಲೇ ನೀರು ಲಭ್ಯವಾಗುತ್ತಿದ್ದು, ಗ್ರಾಮಗಳತ್ತ ಬರುವುದನ್ನು ತಡೆದು ಮಾನವ–ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ನೆರವಾಗುತ್ತಿದೆ.

Due to intense summer heat, wildlife in Uttara Kannada forests is facing water scarcity. The Forest Department has constructed artificial water troughs and bird water feeders across multiple forest ranges, refilling them every three days. This initiative helps animals stay within forests, reducing human-wildlife conflict and ensuring their survival.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೀಟನಾಶಕವೇ ರೈತರ ಜೀವಕ್ಕೆ ಕಂಟಕ…? ರಾಜಸ್ಥಾನದಲ್ಲಿ 2 ವರ್ಷದಲ್ಲಿ 535 ರೈತರ ಸಾವು – ಬೆಚ್ಚಿಬೀಳಿಸಿದ ವರದಿ..!
June 7, 2026
9:17 PM
by: ದ ರೂರಲ್ ಮಿರರ್.ಕಾಂ
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?
June 7, 2026
7:32 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 07.06.2026 | ಜೂನ್ 8ರಿಂದ ರಾಜ್ಯದಲ್ಲಿ ಮುಂಗಾರು ಚುರುಕು| ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ, ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ
June 7, 2026
1:56 PM
by: ಸಾಯಿಶೇಖರ್ ಕರಿಕಳ
“ಜಾಕ್‌ಫ್ರೂಟ್‌ ಹಬ್ಬ”ಕ್ಕೆ ಜನಸಾಗರ – 50 ಕ್ಕೂ ಹೆಚ್ಚು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ
June 6, 2026
11:05 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror