ಗ್ರಾಮೀಣ ಭಾಗದಲ್ಲಿ ಸಾಕಷ್ಟು ಜನರು ಬದುಕಿನಲ್ಲಿ ಗೆದ್ದಿದ್ದಾರೆ. ಓದಿದ ವಿದ್ಯೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಕಲಿತ ವಿದ್ಯೆ ಉಪಯೋಗಕ್ಕೆ ಬಂದಿದೆ. ಇಂತಹ ಸಾಲಿನಲ್ಲಿ ಮಹಿಳೆಯೊಬ್ಬರು ಇದ್ದಾರೆ.ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದ ಈ ಮಹಿಳೆ, ಬದುಕು ಕಟ್ಟುವ ಸಮಯದಲ್ಲಿ ಆಯ್ಕೆ ಮಾಡಿದ್ದು ತೆಂಗಿನ ಕಾಯಿ(Coconut) ಸುಲಿಯುವ ಕಾಯಕ. ಈಗ ಅರ್ಧ ದಿನದಲ್ಲಿ ಒಂದು ಸಾವಿರ ತೆಂಗಿನ ಕಾಯಿ ಸುಲಿಯಬಲ್ಲರು. ಇಬ್ಬರು ಮಕ್ಕಳ ಸಹಿತ ಕುಟುಂಬವನ್ನು ಸಾಕುತ್ತಿದ್ದಾರೆ.
ಮೂಲತಃ ಮಡಿಕೇರಿಯವರಾದ 40 ವರ್ಷದ ಹರಿಣಾಕ್ಷಿ, ಪ್ರಸ್ತುತ ಕಾಸರಗೋಡಿನ ವಾಣಿನಗರದಲ್ಲಿ ವಾಸಿಸುತ್ತಿದ್ದಾರೆ. ಮದುವೆಯಾದ ನಂತರ ವೈಯಕ್ತಿಕ ಕಾರಣಗಳಿಂದ ಮಕ್ಕಳೊಂದಿಗೆ ಕಾಸರಗೋಡು ವಾಣೀನಗರಕ್ಕೆ ಬಂದು ನೆಲೆಸಿದ್ದರು. ಆರಂಭದಲ್ಲಿ ಮನೆಗಳಿಗೆ ತೋಟದ ಕೆಲಸಗಳಿಗೆ ಹೋಗುತ್ತಿದ್ದರು. ಅಲ್ಲಿ ತೆಂಗಿನ ಕಾಯಿ ಸುಲಿಯಲು ಕಲಿತಿದ್ದರು. ಇದೀಗ ತೆಂಗಿನ ಕಾಯಿ ಸುಲಿಯುವುದೇ ಕಾಯಕ ಮಾಡಿಕೊಂಡಿದ್ದಾರೆ.ಈಗ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಗಡಿಭಾಗದ ಮನೆಗಳಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸದಲ್ಲಿ ತೊಡಗಿದ್ದಾರೆ. ಅವರು ಪ್ರತಿ ತೆಂಗಿನಕಾಯಿಗೆ 1 ರೂಪಾಯಿ ಗಳಿಸುತ್ತಾರೆ ಮತ್ತು ಅರ್ಧ ದಿನದಲ್ಲಿ ಸುಮಾರು 1,000 ತೆಂಗಿನಕಾಯಿಗಳನ್ನು ಸುಲಿಯಬಲ್ಲರು. ಪುತ್ರ ಹಾಗೂ ಪುತ್ರಿಯ ಜೊತೆ ವಾಸಿಸುತ್ತಿರುವ ಹರಿಣಾಕ್ಷಿ, ಆದಾಯಕ್ಕೆ ಪೂರಕವಾಗಿ ಹಸುವನ್ನು ಸಾಕುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಏಣಿಯನ್ನು ಬಳಸಿ ಅಡಿಕೆ ಕೊಯ್ಲು ಮತ್ತು ಮೆಣಸು ಕೊಯ್ಲು ಕೆಲಸ ಕೂಡ ಮಾಡುತ್ತಾರೆ.
ಕಾಸರಗೋಡಿಗೆ ಸ್ಥಳಾಂತರಗೊಂಡಾಗ ಈ ಕೆಲಸ ಪ್ರಾರಂಭಿಸಿದೆ. ಒಂಟಿಯಾಗಿ ಇಬ್ಬರು ಮಕ್ಕಳೊಂದಿಗೆ ಬದುಕಬೇಕಾಗಿ ಬಂದಾಗ, ನಾನು ಆದಾಯದ ಮಾರ್ಗವನ್ನು ಕಂಡುಹಿಡಿಯಬೇಕಾಗಿತ್ತು. ಇಡುಕ್ಕಿಯಲ್ಲಿ ಆಯುರ್ವೇದ ಚಿಕಿತ್ಸಕನಾಗಿ ತರಬೇತಿ ಪಡೆದಿದ್ದೇನೆ ಮತ್ತು ಈ ಹಿಂದೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಕೆಲಸ ಮಾಡಿದ್ದೇನೆ” ಎಂದು ಹರಿಣಾಕ್ಷಿ ಅವರು ಹೇಳುತ್ತಾರೆ.
ಹರಿಣಾಕ್ಷಿ ಅವರು ಗ್ರಾಮೀಣ ಭಾಗದ ಹಲವು ಕಡೆ ತನ್ನದೇ ವಾಹನದ ಮೂಲಕ ತೆಂಗಿನ ಕಾಯಿ ಸುಲಿಯುವ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆಲಸದಲ್ಲಿನ ಬದ್ಧತೆಯೇ ಅವರನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತಿದೆ ಎಂದು ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರು ಹೇಳುತ್ತಾರೆ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…