ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ

February 26, 2025
6:26 AM

ಶಿವಮೊಗ್ಗ ಜಿಲ್ಲೆಯ ಸಾಗರದ  ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ  ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ಸ್ವಾವಲಂಬನೆಯನ್ನು ಬೆಂಬಲಿಸಿ ‘ಅವ್ವ ಸಂತೆ’ ಆಯೋಜಿಸಲಾಗಿತ್ತು.ಮಹಿಳಾ ಸಂಘಟನೆಗಳು ತಯಾರಿಸಿದ  ಶೇಂಗಾ ಎಣ್ಣೆ, ಕೊಬ್ಬರಿ ಎಣ್ಣೆ, ಜೇನುತುಪ್ಪ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬಾಳೆ ನಾರಿನ ಉತ್ಪನ್ನ, ಖಾದಿ ಬಟ್ಟೆ, ಆಹಾರ ಉತ್ಪನ್ನ ಸೇರಿದಂತೆ   ಬಗೆಬಗೆಯ   ಉತ್ಪನ್ನಗಳ  ಪ್ರದರ್ಶನ  ಹಮ್ಮಿಕೊಳ್ಳಲಾಗಿತ್ತು.

ನಾಲ್ಕು ವರ್ಷದಿಂದ  ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಮನೆಯಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜೀವನ್ಮುಖಿ ಸಂಘಟನೆಯ ಸಂಘಟಕರಾದ ಚೂಡಮಣಿ ರಾಮಚಂದ್ರ ಹೇಳುತ್ತಾರೆ.

ಕೇಂದ್ರ ಸರ್ಕಾರದ ಯೋಜನೆಯಾದ ಪಿಎಂ-ಎಫ್ ಎಂಇ ಯೋಜನೆಯಡಿ ಆಹಾರ ಉತ್ಪನ್ನಗಳ ತಯಾರಿಕೆಗಾಗಿ ಆರ್ಥಿಕ ಸಹಾಯ ಪಡೆದಿದ್ದು, ಇದರಿಂದ  ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ , ಶೇಂಗಾ ಎಣ್ಣೆ ತಯಾರು ಮಾಡಲಾಗುತ್ತಿದೆ. ಇದರ ಜೊತೆಗೆ ಬಗೆ ಬಗೆಯ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿದೆ ಎಂದು ಫಲಾನುಭವಿ ಅಮೃತಾ ಕಾಕಲ್ ಹೇಳುತ್ತಾರೆ.

ಉತ್ಪನ್ನಗಳ ತಯಾರಕರಾದ ಸ್ನೇಹ ಜೈನ್ ಅವರು  ಸೌಂದರ್ಯ ವರ್ಧಕ ಉತ್ಪನ್ನಗಳನ್ನು ತಯಾರು ಮಾಡಿ,  ಅವುಗಳನ್ನು ಮಹಿಳೆಯರೇ ಮಾರಾಟ  ಮಾಡಿದ್ದು, ಅವುಗಳಿಗೆ ಉತ್ತಮ ಮಾರುಕಟ್ಟೆ ದೊರೆಯುತ್ತಿದೆ ಎಂದು ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮೇಘಾಲಯದ ಅಡಿಕೆಗೆ ಜಿಐ ಟ್ಯಾಗ್‌ ಪ್ರಕ್ರಿಯೆ..! ಮಲೆನಾಡು ಅಡಿಕೆಗೂ ಏಕೆ ಪ್ರಯತ್ನಿಸಬಾರದು..?
September 27, 2026
8:12 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 27-09-2026 | ಕರ್ನಾಟಕದಲ್ಲಿ ಸದ್ಯ ಒಣಹವೆ ; ಸೆ.28ರಿಂದ ಮತ್ತೆ ಮಳೆ ಸಾಧ್ಯತೆ..!
September 27, 2026
1:53 PM
by: ಸಾಯಿಶೇಖರ್ ಕರಿಕಳ
ಮಲೆನಾಡಿನಲ್ಲಿ ಅಡಿಕೆ ಕಷ್ಟ…!, ಬಯಲುಸೀಮೆಯಲ್ಲಿ ಅಡಿಕೆ ಇಷ್ಟು ಸುಲಭವೇ? ಕಾರಣ ತಿಳಿದರೆ ಅಚ್ಚರಿಯಾಗುತ್ತೆ!
September 27, 2026
10:34 AM
by: ಪ್ರಬಂಧ ಅಂಬುತೀರ್ಥ
ಹಾಲಿನ ದರ ಏರಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ – ಡಿ.ಕೆ.ಶಿವಕುಮಾರ್
September 27, 2026
8:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror