ಮಲೆನಾಡು ಗಿಡ್ಡ ಸಂರಕ್ಷಣೆ ಹಾಗೂ ಸಂವರ್ಧನಾ ಅಭಿಯಾನದ ಅಂಗವಾಗಿ ಮಲೆನಾಡು ಗಿಡ್ಡ ತಳಿಯ ಮಾಹಿತಿ ಕಾರ್ಯಾಗಾರ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದಲ್ಲಿ ನಡೆಯಿತು.ಗೋತಳಿ ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿತ್ತು. ಸಾಕಷ್ಟು ಸಂಖ್ಯೆಯ ಆಸಕ್ತ ಹೈನುಗಾರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಲೆನಾಡು ಗಿಡ್ಡ ಗೋತಳಿಯ ಬಗ್ಗೆ ಮಾಹಿತಿ ನೀಡಿದ ರಾಷ್ಟ್ರೀಯ ಹೈನುಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಡಾ. ಕೆ ಪಿ ರಮೇಶ್, ದೇಸೀ ಗೋತಳಿ ಹಲವು ವಿಶೇಷ ಗುಣಗಳನ್ನು ಹೊಂದಿದೆ. ಅದರಲ್ಲೂ ಮಲೆನಾಡು ಗಿಡ್ಡ ಗೋತಳಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ದೇಸೀ ತಳಿಯ ದನದ ಹಾಲನ್ನು ರಾತ್ರಿ ವೇಳೆ ಅಂದರೆ ಮಲಗುವ ಮೊದಲು ಕುಡಿದರೆ ಶಾಂತ ಚಿತ್ತದಿಂದ ನಿದ್ರೆ ಮಾಡಲು ಅನುಕೂಲವಾಗುತ್ತದೆ. ಏಕೆಂದರೆ ಕ್ರಿಪ್ಟೋ ಫಯನಾನ್ ಎನ್ನುವ ಆಮಿನೋ ಆಸಿಡ್ ಇರುವುದರಿಂದ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.
ದೇಸೀ ಗೋವಿನ ತಳಿ ಹಾಗೂ ಇತರ ಗೋತಳಿಗಳನ್ನು ಗಮನಿಸಿದರೆ ಎರಡೂ ತಳಿಗಳಲ್ಲಿ ಹಾಲು ಇದೆ, ಹಾಲಿನ ಉತ್ಪನ್ನಗಳೂ ಲಭ್ಯವಿದೆ. ಆದರೆ ಔಷಧೀಯ ಗುಣಧರ್ಮಗಳಲ್ಲಿ ದೇಸೀ ತಳಿಯ ಹಸುವಿನಲ್ಲಿ ಹೆಚ್ಚಿದೆ. ಏಕೆಂದರೆ ಈ ಹಸುಗಳ ಮೈಕಟ್ಟು ಹಾಗೂ ದೇಹದ ರಚನೆ ಇಲ್ಲಿನ ಮಣ್ಣಿಗೆ, ವಾತಾವರಣಕ್ಕೆ ಹೊಂದಿಕೊಂಡಿರುತ್ತದೆ. ಈ ಗೋವುಗಳು ಬಿಸಿಲಿಗೆ ಮೈಯೊಡ್ಡಿ ಅವುಗಳೆ ಆಹಾರವನ್ನು ತಿಂದು ಬರುವಂತಾಗಬೇಕು. ಆಗ ಮಾತ್ರಾ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿರುತ್ತದೆ ಎಂದರು. ಮುಂದಿನ ದಿನಗಳಲ್ಲಿ ಈ ತಳಿಯ ಉಳಿವು ಮಾತ್ರವಲ್ಲ ಪ್ರತೀ ಮನೆಯಲ್ಲೂ ದೇಸೀ ತಳಿಯ ದನ ಇರುವ ಹಾಗೆ ಆಗಬೇಕು ಎಂದರು.
ಇದೇ ವೇಳೆ ಮಲೆನಾಡು ಗೊಡ್ಡ ಹಸುವಿನ ಉತ್ಪನ್ನಗಳ ಔಷಧೀಯ ಗುಣಗಳ ಬಗ್ಗೆ ಈಶ್ವರ ನಂಜನಗೂಡು, ಗವ್ಯೋತ್ಪನ್ನ ತಯಾರಿಕೆ ಕುರಿತು ಶ್ರೀಗುರು ಗೋಸೇವಾ ಪರಿವಾರದ ಶ್ರೀಗುರು ಅವರು ಮಾಹಿತಿ ನೀಡಿದರು. (ಆಡಿಯೋ ಮಾಹಿತಿ ಇಲ್ಲಿದೆ..)
ಮುರುಳ್ಯದ ಅಕ್ಷಯ ಆಳ್ವ ಅವರ ಮನೆ ರೇಷ್ಮಾ ನಿಲಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಎಪಿ ಸದಾಶಿವ ಮರಿಕೆ, ಶಾಸಕಿ ಭಾಗೀರಥಿ ಮುರುಳ್ಯ, ಕೊಂಕೋಡಿ ಪದ್ಮನಾಭ, ಸಾಜ ರಾಧಾಕೃಷ್ಣ ಆಳ್ವ, ಅಶೋಕ್ ನೆಕ್ರಾಜೆ, ಸೀತಾರಾಮ ರೈ ಸವಣೂರು, ಪ್ರಸನ್ನ ಭಟ್ ಎಣ್ಮೂರು, ನಿರಂಜನ ಪೋಳ್ಯ, ಚಂದ್ರಶೇಖರ ತಾಳ್ತಜೆ ಮೊದಲಾದವರು ಭಾಗವಹಿಸಿದ್ದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…