ಸುಳ್ಯ: ಮೂರನೆ ಬಾರಿಗೆ ದೆಹಲಿ ಚುನಾವಣೆಯಲ್ಲಿ ಪ್ರಚಂಡ ಬಹುಮತದೊಂದಿಗೆ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಸುಳ್ಯ ಅಮ್ ಅದ್ಮಿ ಪಕ್ಷದ ಕಾರ್ಯಕರ್ತರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರಕಾರದ ಕಾರ್ಯವೈಖರಿ ಬಗ್ಗೆ ಜನ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸುಳ್ಯ ಅಮ್ ಆದ್ಮಿ ಪಕ್ಷದ ಸಹ ಸಂಚಾಲಕ ರಶೀದ್ ಜಟ್ಟಿಪಳ್ಳ, ರಾಮಕೃಷ್ಣ ಬಿರಮಂಗಿಲ, ಡಿ.ಮ್ ಶಾರೀಕ್, ಕಲಂದರ್ ಶಾಫಿ ಹಳೆಗೇಟು, ಶಂಶುದ್ದಿನ್ ಕೆ.ಎಂ, ದೀಕ್ಷಿತ್ ಜಯನಗರ, ಸುಮಿತ್ರ ತೊಡಿಕಾನ, ಬಶೀರ್ ಕ್ವಾಲಿಟಿ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel