ನೆಟ್ಟಾರಿನಲ್ಲಿ ಉಪಯೋಗವಿಲ್ಲದೆ ಪಾಳುಬಿದ್ದಿದೆ ಬಸ್‍ನಿಲ್ದಾಣ

June 15, 2019
1:00 PM

ಬೆಳ್ಳಾರೆ : ಬೆಳ್ಳಾರೆ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ನೆಟ್ಟಾರು ಬಸ್‍ನಿಲ್ದಾಣ ಉಪಯೋಗವಿಲ್ಲದೆ ಪಾಳು ಬಿದ್ದಿದ್ದು, ಕುಸಿಯುವ ಭೀತಿಯೂ ಇದೆ.
ಬಸ್ ನಿಲ್ದಾಣದ ಛಾವಣಿಯ ಪಕ್ಕಾಸು ಮುರಿದಿದ್ದು, ಹೆಂಚು ಹಾರಿ ಹೋಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ಬೃಹತ್ ಪೊದೆಗಳು ಬೆಳೆದು ನಿಂತಿದ್ದು, ನಿಲ್ದಾಣವನ್ನು ಗುರುತಿಸುವುದೇ ಕಷ್ಟಸಾಧ್ಯವಾಗಿದೆ.

Advertisement
Advertisement

ಪುತ್ತೂರಿನಿಂದ ಬೆಳ್ಳಾರೆಗೆ ಹಾಗು ಪೆರ್ಲಂಪಾಡಿಯಿಂದ ಬೆಳ್ಳಾರೆಗೆ ಸಂಪರ್ಕಿಸುವ ನೆಟ್ಟಾರು ಜಂಕ್ಷನಿನಲ್ಲಿ ಇರುವ ಈ ಬಸ್‍ನಿಲ್ದಾಣ ಹಲವು ವರ್ಷಗಳಿಂದ ಪಾಳು ಬಿದ್ದ ಸ್ಥಿತಿಯಲ್ಲಿದ್ದರೂ ದುರಸ್ಥಿಗೊಳಿಸದಿರುವುದರಿಂದ ಪ್ರಯಾಣಿಕರು ರಸ್ತೆ ಬದಿಯಲ್ಲಿ ಬಸ್‍ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪೆರ್ಲಂಪಾಡಿ ಹಾಗು ಮಾಡಾವು ಮೂಲಕವಾಗಿ ಪುತ್ತೂರಿಗೆ ಸಂಪರ್ಕ ಕಲ್ಪಿಸುವಲ್ಲಿ ನೆಟ್ಟಾರು ಪ್ರಮುಖ ಜಂಕ್ಷನ್ ಆಗಿದ್ದು, ದಿನಂಪ್ರತಿ ನೂರಾರು ಬಸ್‍ಗಳು ಸಂಚರಿಸುತ್ತವೆ. ಆದರೆ ಈಗಿರುವ ಬಸ್‍ನಿಲ್ದಾಣ ಯಾವ ಕಡೆಯಿಂದ ಬಸ್ ಬಂದರೂ ಉಪಯೋಗವಿಲ್ಲ ಎಂಬಂತಾಗಿದೆ. ಬಸ್ ನಿಲ್ದಾಣ ಒಂದು ಕಡೆಯಾದರೆ ಬಸ್ ನಿಲ್ಲುವುದೇ ಬೇರೆಯೇ ಕಡೆ. ಆದುದರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ರಸ್ತೆ ಬದಿಯಲ್ಲಿಯೋ ಅಥವ ಸ್ಥಳಿಯ ಅಂಗಡಿಗಳ ಜಗಲಿಯಲ್ಲಿಯೋ ಬಸ್‍ಗಾಗಿ ಕಾಯುವುದು ಅನಿವಾರ್ಯವಾಗಿದೆ. ಬಸ್ ನಿಲ್ದಾಣವನ್ನು ಸರಿಯಾದೆಡೆಗೆ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಲು ಸಾರ್ವಜನಿಕರು ಹಲವು ಬಾರಿ ಆಗ್ರಹಿಸಿದರೂ ಇದುವರೆಗೂ ಪ್ರಯೋಜನವಾಗಿಲ್ಲ.ಪ್ರಯಾಣಿಕರ ಬಸ್ ತಂಗುದಾಣ ಇದೀಗ ಕುಡುಕ್ಕರು ಹಾಗು ಭಿಕ್ಷುಕರ ಆಶ್ರಯ ತಾಣವಾಗಿದೆ.

ಅಂಚೆ ಕಚೇರಿಗೂ ಕಾದಿದೆ ಅಪಾಯ:
ಬಸ್ ನಿಲ್ದಾಣದ ಪಕ್ಕದಲ್ಲಿ ಮಣಿಕ್ಕಾರ ಅಂಚೆ ಕಛೇರಿ ಕಾರ್ಯಾಚರಿಸುತ್ತಿದ್ದು, ಬಸ್ ನಿಲ್ದಾಣದ ಛಾವಣಿ ಕುಸಿತದಲ್ಲಿ ಅಂಚೆ ಕಛೇರಿಗೂ ಅಪಾಯ ತಪ್ಪಿದ್ದಲ್ಲ. ಪ್ರಯಾಣಿಕರ ವಿಶ್ರಾಂತಿ ಕೊಠಡಿಯ ಛಾವಣಿ ಮೂಲಕ ನೀರು ಸೋರುತ್ತಿದೆ. ಛಾವಣಿ ಕುಸಿದು ಬಿದ್ದಲ್ಲಿ ಅಂಚೆ ಕಛೇರಿಯ ಕಡತಗಳಿಗೂ ಹಾನಿಯಾಗುವ ಅಪಾಯವಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ
ಹೆದ್ದಾರಿಗಳಲ್ಲಿ ಹಸಿರು ಅಭಿಯಾನ | 4.78 ಕೋಟಿಗೂ ಹೆಚ್ಚು ಗಿಡಗಳ ನಾಟಿ
July 9, 2025
10:27 PM
by: The Rural Mirror ಸುದ್ದಿಜಾಲ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಕೃಷಿ ಅರಣ್ಯೀಕರಣ ಉತ್ತೇಜನಕ್ಕೆ ಕ್ರಮ | ಕೃಷಿ ಭೂಮಿಯಲ್ಲಿರುವ ಮರ ಕಡಿಯಲು ನಿಯಮಾವಳಿ |
June 30, 2025
6:13 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group