ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯ

August 30, 2019
6:24 PM

ಬೆಳ್ಳಾರೆ: ಮಕ್ಕಳ ಒಳಗೆ ಅನೇಕ ಪ್ರತಿಭೆಗಳಿರುತ್ತದೆ. ಅದನ್ನು ಪ್ರಸ್ತುತಪಡಿಸುವಿಕೆಗೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ. ಸೋಲು ಗೆಲುವುಗಳನ್ನು ಮಕ್ಕಳು ಸಮಾನವಾಗಿ ಪರಿಗಣಿಸಿ ಪರಿಪಕ್ವವಾಗಬೇಕು ಎಂದು ತಾಲೂಕು ಶಿಕ್ಷಣ ಸಂಯೋಜಕ ವಸಂತ್ ಏನೆಕಲ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸಮಗ್ರ ಶಿಕ್ಷಣ, ತಾಲೂಕು ಶಿಕ್ಷಣ ಇಲಾಖೆ ಆಯೋಜನೆಯೊಂದಿಗೆ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಸಿ ಮಾತನಾಡಿದರು. ಮುಖ್ಯ ಅತಿಥಿ ಕಳಂಜ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಅರ್ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಗಂಗಾಧರ್ ತೋಟದಮೂಲೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಸವಿತಾ, ತಾಲೂಕು ಶಿಕ್ಷಕರ ಸಂಘದ ಸದಸ್ಯೆ ಹಾಗು ಪೆರುವಾಜೆ ಸಹಿಪ್ರಾ ಶಾಲಾ ಮುಖ್ಯೋಪಾಧ್ಯಾಯಿನಿ ತುಳಸಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಗೀತಾ ಉಪಸ್ಥತರಿದ್ದರು.

ಮುಖ್ಯಶಿಕ್ಷಕಿ ಮೋಹಿನಿ ಎ.ಕೆ ಸ್ವಾಗತಿಸಿ, ಹಿರಿಯ ಶಿಕ್ಷಕಿ ರೋಹಿಣಿ ವಂದಿಸಿದರು. ಶಿಕ್ಷಕಿ ರಾಣಿ ಕೆ.ಪಿ ಕಾರ್ಯಕ್ರಮ ನಿರೂಪಿಸಿದರು. ಒಟ್ಟು ಹನ್ನೆರಡು ಶಾಲೆಗಳು ಭಾಗವಹಿಸಿದ್ದು, ಇಪ್ಪತ್ತೈದು ಸ್ಪರ್ಧೆಗಳು ನಡೆಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರಾವಳಿಯಲ್ಲಿ ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ | ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ
May 17, 2026
7:48 PM
by: ದ ರೂರಲ್ ಮಿರರ್.ಕಾಂ
ಭಾರತದ ಕೃಷಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಹಾವಳಿ..! ಮಣ್ಣಿನೊಳಗೆ ‘ಪ್ಲಾಸ್ಟಿಕ್ ವಿಷ’! ರೈತರ ಭವಿಷ್ಯಕ್ಕೆ ಮೈಕ್ರೋಪ್ಲಾಸ್ಟಿಕ್ ದೊಡ್ಡ ಎಚ್ಚರಿಕೆ
May 17, 2026
2:30 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 17-05-2026 | ಮೇ 19 ರಿಂದ ಹವಾಮಾನದಲ್ಲಿ ದೊಡ್ಡ ಬದಲಾವಣೆ ಸಾಧ್ಯ..!
May 17, 2026
11:53 AM
by: ಸಾಯಿಶೇಖರ್ ಕರಿಕಳ
ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ‘ಲೈಟ್‌ ಅಬ್ಬರ’…! ಬೆಂಕಿಗಾಹುತಿಯಾದ ಬಸ್‌ ಘಟನೆ ಮತ್ತೆ ಎಚ್ಚರಿಸಿದ ಅಪಾಯದ ಗಂಟೆ..!
May 17, 2026
7:43 AM
by: ಸಮರ್ಥ ಸಮನ್ಯು

You cannot copy content of this page - Copyright -The Rural Mirror