ಮಳೆ ಬಂದಾಗ ಮರವನ್ನು ಮರೆತರೇ…?

August 7, 2019
9:44 PM

ಸುಳ್ಯ: ಮಳೆ ಇಲ್ಲದಿರುವಾಗ ಗಿಡ ನೆಡಬೇಕು, ಮರ ಉಳಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಿರಂತರ ಎರಡು ದಿನ ಮಳೆ ಬಂದಾಗ ಜನ ಮರವನ್ನು ಮರೆತರೇ… ?ಹೀಗೊಂದು ಜಿಜ್ಞಾಸೆ ಹುಟ್ಟಿಕೊಂಡದ್ದು ಬುಧವಾರ ಸುಳ್ಯದಲ್ಲಿ ನಡೆದ ಪ್ರಕೃತಿ ವಿಕೋಪ ತಡೆ ಕಾರ್ಯಸೂಚಿ ಸಭೆಯಲ್ಲಿ.

ಸಭೆಯಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ‘ಜೂನ್ ತಿಂಗಳ ಕೊನೆಯವರೆಗೆ ಮಳೆಯೇ ಬಾರದಿದ್ದಾಗ ಗಿಡಗಳನ್ನು ನೆಡಬೇಕು, ಮರಗಳನ್ನು ಉಳಿಸಬೇಕು. ನೆಡಲು ಗಿಡ ಕೊಡಿ ಸಾರ್.. ಎಂದು ಹಲವು ಮಂದಿ ಕೇಳುತ್ತಿದ್ದರು. ಆದರೆ ಎರಡು ದಿನ ಮಳೆ ಸುರಿದಾಗ ಮರಗಳು ಅಪಾಯಕಾರಿಯಾಗಿದೆ, ಮರ ಕಡಿಯಿರಿ ಸಾರ್ ಎಂದು ಕರೆ ಮಾಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದಾಗ ಗಂಭೀರ ಸಭೆಯಲ್ಲಿ ಕೆಲ ಕಾಲ ನಗುವಿನ ಕಾರಂಜಿ ಚಿಮ್ಮಿತು.

ಮಳೆ ಬಂದ ಕೂಡಲೇ ಮರಗಳನ್ನು, ಗಿಡಗಳನ್ನು ಮರೆಯುವುದು ಸರಿಯಲ್ಲ‌. ಗಿಡ ಬೆಳೆಸುವ, ಮರ ಉಳಿಸುವ ಜಾಗೃತಿ ಸದಾ ಇರಲಿ, ತೀರಾ ಅಪಾಯಕಾರಿ ಆಗಿದ್ದಲ್ಲಿ ಮಾತ್ರ ಅಂತಹಾ ಮರಗಳನ್ನು ಮಾತ್ರ ತೆರವು ಮಾಡಲು ಬೇಡಿಕೆ ಸಲ್ಲಿಸಿ. ಮಳೆಗಾಲದ ನೆಪದಲ್ಲಿ ಸದಾ ನಮ್ನನ್ನು ಸಲಹುವ ಮರಗಳನ್ನು ಕಡಿಯದಂತೆ ಎಚ್ಚರ ವಹಿಸಿ, ಗಿಡಗಳನ್ನು ನೆಡಲು ಆಸಕ್ತಿ ಮುಂದುವರಿಸಿ ಎಂದು ಅವರು ವಿನಂತಿಸಿದಾಗ ನಗು ಕರತಾಡನವಾಗಿ ಮಾರ್ಪಾಡಾಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?
September 3, 2026
1:13 PM
by: ಸಾಯಿಶೇಖರ್ ಕರಿಕಳ
ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ
September 3, 2026
7:08 AM
by: ದ ರೂರಲ್ ಮಿರರ್.ಕಾಂ
ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?
September 2, 2026
10:52 PM
by: ದ ರೂರಲ್ ಮಿರರ್.ಕಾಂ
ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ
September 2, 2026
7:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror