ರೈತರ ಸಾಗುವಳಿ ಭೂಮಿಯ ಆರ್.ಟಿ.ಸಿ.ಯಲ್ಲಿ ಬೆಳೆ ದಾಖಲಾಗದೆ ಆಗುತ್ತಿರುವ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

July 24, 2019
9:14 AM

ಸುಳ್ಯ: ರೈತರ ಕೃಷಿ ಭೂಮಿಗೆ ಸಂಬಂಧ ಪಟ್ಟಂತೆ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದಾಗಿದ್ದರೆ ಮಾತ್ರ ಸರಕಾರದ ಸೌಲಭ್ಯಗಳು ರೈತರಿಗೆ ದೊರೆಯುತ್ತದೆ. ಸರ್ಕಾರದ ಇಲಾಖೆಗಳಾದ ತೋಟಗಾರಿಕೆ, ಕೃಷಿ ಇಲಾಖೆಯಿಂದ ದೊರೆಯುವ ಬೀಜಗಳು, ವಿವಿಧ ಗಿಡಗಳು ರೋಗ ನಿರೋಧಕ ಔಷಧಗಳು ವಿವಿಧ ಗೊಬ್ಬರಗಳು ಸಹಾಯಧನದಲ್ಲಿ ಸಿಗುವಂತಹ ವಿವಿಧ ಕೃಷಿ ಉಪಕರಣಗಳು ಹೀಗೆ ಇತ್ಯಾದಿ ಸೌಲಭ್ಯಗಳು ರೈತನ ಸಾಗುವಳಿ ಭೂಮಿಯ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದಾಗಿದ್ದರೆ ಮಾತ್ರ ದೊರೆಯುತ್ತದೆ. ಆದರೆ ಭೂಮಿಕೇಂದ್ರದಲ್ಲಿ ಆರ್.ಟಿ.ಸಿ.ಯಲ್ಲಿ ಸೂಕ್ತ ರೀತಿಯಲ್ಲಿ ಬೆಳೆ ದಾಖಲು ಮಾಡದೇ ಸಮಸ್ಯೆ ಎದುರಾಗುತ್ತಿದೆ. ಸೌಲಭ್ಯ ಪಡೆಯಬೇಕಾದರೆ ರೈತ ಪ್ರತಿ ಸಲ ಗ್ರಾಮಕರಣಿಕರ ಬಳಿ ಹೋಗಿ ಬೆಳೆ ನಮೂದಿಸಬೇಕಾಗುತ್ತದೆ. ಇದರಿಂದ ರೈತನಿಗೂ – ಅಧಿಕಾರಿಗಳಿಗೂ ತೊಂದರೆಯಾಗುತ್ತದೆ. ಆದ್ದರಿಂದ ರೈತರ ಆರ್.ಟಿ.ಸಿ.ಯಲ್ಲಿ ಬೆಳೆ ನಮೂದು ಒಮ್ಮೆ ಮಾಡಿದರೆ ಮತ್ತೆ ಸಮಸ್ಯೆ ಆಗದಂತೆ ಕ್ರಮ ವಹಿಸಬೇಕೆಂದು ಪದ್ಮನಾಭ ನೂಜಾಲುರವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ಮನವಿಯ ಪ್ರತಿಯನ್ನು ಜು.23 ರಂದು ಪದ್ಮನಾಭರು ಸುಳ್ಯ ತಹಶೀಲ್ದಾರ್‌ರಿಗೂ ನೀಡಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,
May 7, 2026
1:59 PM
by: ಸಾಯಿಶೇಖರ್ ಕರಿಕಳ
ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ
May 7, 2026
7:50 AM
by: ದ ರೂರಲ್ ಮಿರರ್.ಕಾಂ
ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ
May 7, 2026
7:40 AM
by: ಮಿರರ್‌ ಡೆಸ್ಕ್
ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ
May 7, 2026
7:37 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror