ವಿಖಾಯ ಮೆಡಿಚೈನ್ ಮೂಲಕ ತುರ್ತು ಔಷಧಗಳು ಮನೆ ಬಾಗಿಲಿಗೆ

April 13, 2020
10:28 PM

ಸುಳ್ಯ: ದ ಕ ಜಿಲ್ಲಾ ವಿಖಾಯ ಸಮಿತಿ ಹಾಗೂ ಸುಳ್ಯ ಝೋನ್ ವಿಖಾಯ ಸಮಿತಿಯ ವತಿಯಿಂದ ಮಂಗಳೂರಿನಿಂದ ಸುಳ್ಯಕ್ಕೆ ವಿಖಾಯ ಮೆಡಿ ಚೈನ್ ಮೂಲಕ ಔಷಧಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸುಳ್ಯದ ಮೆಡಿಕಲ್ ಶಾಪ್ ಗಳಲ್ಲಿ ಸಿಗದಂತಹ ಔಷಧಗಳನ್ನು ವಿಖಾಯ ಕಾರ್ಯಕರ್ತರಿಗೆ ತಿಳಿಸಿದಾಗ, ಮಂಗಳೂರು ವಿಖಾಯ ಕಾರ್ಯಕರ್ತರು ಅಲ್ಲಿನ ಮೆಡಿಕಲ್ ಗಳಿಂದ ಖರೀದಿಸಿ ಬೆಳಿಗ್ಗೆ 10 ಗಂಟೆಗೆ ಬಿ,ಸಿ,ರೋಡ್ ತಲುಪಿಸಲಾಗುತ್ತದೆ. ಅಲ್ಲಿಂದ ಚೈನ್ ಸಿಸ್ಟಮ್ ಮೂಲಕ ಮಾಣಿ, ಕಬಕ, ಪುತ್ತೂರು, ಕುಂಬ್ರ, ತಿಂಗಳಾಡಿ ,ಮಾಡಾವು, ಬೆಳ್ಳಾರೆ, ಪೈಚಾರ್, ಮೂಲಕ ಸುಳ್ಯಕ್ಕೆ ಬರಲಿದೆ. ಸುಳ್ಯಕ್ಕೆ ಬಂದ ಔಷಧಗಳನ್ನು ಸುಳ್ಯದ ವಿಖಾಯ ಸ್ವಯಂ ಸೇವಕರು ನೇರವಾಗಿ ರೋಗಿಗಳ ಮನೆಯವರೆಗೆ ತಲುಪಿಸುತ್ತಾರೆ.

ಸುಳ್ಯ ನಗರದಿಂದ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಇದೇ ರೀತಿ ಚೈನ್ ಸಿಸ್ಟಮ್ ಮೂಲಕ ಔಷಧಗಳನ್ನು ತಲುಪಿಸಲಾಗುತ್ತಿದೆ. ಇಂದು ಮಂಗಳೂರಿನಿಂದ,ಬೆಳ್ಳಾರೆಯ ಒಬ್ಬ ರೋಗಿಗೆ,ಸುಳ್ಯದ ಒಬ್ಬರಿಗೆ ಹಾಗೂ ಕಲ್ಲುಗುಂಡಿಯ ಒಬ್ಬರಿಗೆ ಔಷಧಗಳನ್ನು ಮೆಡಿ ಚೈನ್ ಮೂಲಕ ತಲುಪಿಸಲಾಗಿದೆ.  ಸುಳ್ಯದಲ್ಲಿ ಸಿಗದಂತಹ ಔಷಧಗಳನ್ನು ಮಂಗಳೂರಿನ ಮೆಡಿಕಲ್ ಗಳಿಂದ ಖರೀದಿಸಿ ಸುಳ್ಯದ ಮನೆಗಳಿಗೆ ತಲುಪಿಸಲು ಸುಳ್ಯ ಝೋನ್ ವಿಖಾಯ ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ
ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ
August 11, 2026
6:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror