ಸುಳ್ಯ ಸರಕಾರಿ ಆಸ್ಪತ್ರೆ ರಸ್ತೆಯನ್ನೊಮ್ಮೆ ನೋಡಿ ಸರ್…!

August 5, 2019
4:00 PM

ಸುಳ್ಯ: ಸುಳ್ಯ ಸರಕಾರಿ ‌ತಾಲೂಕು ಆಸ್ಪತ್ರೆ ರಸ್ತೆ ಪರಿಸ್ಥಿತಿ ಇದು..!. ಸರ್ ಪ್ಲೀಸ್ ಇದನ್ನೊಮ್ಮೆ ನೋಡ್ತೀರಾ ? ಯಾವಾಗಲಾದರೊಮ್ಮೆ ಇದನ್ನೊಮ್ಮೆ ದುರಸ್ತಿ ಮಾಡಿಸ್ತೀರಾ ? ಹೀಗೆ ಪ್ರಶ್ನೆ ಕೇಳ್ತಿದಾರೆ ಜನ…!

ಸುಳ್ಯದ ಮುಖ್ಯ ರಸ್ತೆ ಯಿಂದ ಆಸ್ಪತ್ರೆ ಗೆ ಬರುವ ರಸ್ತೆಯನ್ನು ನೋಡಿದರೆ ಆಸ್ಪತ್ರೆಯ ಮುಂಭಾಗವೇ ಕಿತ್ತು ಹೋಗಿದೆ. 90% ಆಸ್ಪತ್ರೆ ಬರುವ ಜನಸಾಮಾನ್ಯರ ದೈಹಿಕ ಕ್ಷೀಣ ಪರಿಸ್ಥಿತಿಯಲ್ಲಿ ಈ ಇಳಿಜಾರು ಅವೈಜ್ಞಾನಿಕ ರಸ್ತೆ ಏರುವುದು ಇಳಿಯುವುದೇ ಕಠಿಣ, ಅದರ ನಡುವೆ ಕಿತ್ತು ಹೋದ ರಸ್ತೆ ಬಡಜನತೆಯ ಶಾಪಕ್ಕೆ ತುತ್ತಾಗಬೇಕಿದೆ ನಗರ ಆಡಳಿತ  ಅದಲ್ಲದೇ ಹಲವಾರು ಸಮಸ್ಯೆ ಗಳಿವೆ ತಿಳಿಸಿದರೆ ಮುಗಿಯದ ಗೋಳು . ಜನಪ್ರಿಯ ಶಾಸಕರು ಸಂಸದರು . ಅದಲ್ಲದೇ ‌ಉಸ್ತುವಾರಿಸಚಿವರು ಹಲವಾರು ಬಾರಿ ಸುಳ್ಯ ಕ್ಕೆ ಭೇಟಿ ನೀಡುವಾಗ ತಮ್ಮ ಧರ್ಮದ, ತಮ್ಮ ಪಕ್ಷದ ಕಾರ್ಯಕ್ರಮಗಳೇ ಹೆಚ್ಚಾಯಿತೇ?

Advertisement

ಜನಸಾಮಾನ್ಯರಿಗೆ ಉಪಯೋಗವಾಗುವ ಆಸ್ಪತ್ರೆ ತಮ್ಮ ದೃಷ್ಟಿ ಗೆ ಕಾಣದಾಯಿತೆ? ಕಣ್ಣಿದ್ದು‌‌ ಕರುಡರಾದರೇ? ರಾಷ್ಟ್ರೀಯ ಪಕ್ಷಗಳ ಸ್ವಯಂ ಘೋಷಿತ ನಾಯಕರು ಗಳೇ ತಮಗೂ ನಾಚಿಕೆ ಮಾನ ಮರ್ಯಾದೆ ಜವಾಬ್ದಾರಿ, ಕರ್ತವ್ಯ ಇಲ್ಲದಾಯಿತೆ?

ಎಷ್ಟೋ ಬಡಜನರ ದೇವಾಲಯ ಆಸ್ಪತ್ರೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗದ ಈ ನಾಚಿಕೆ ಗೇಡಿನ ಸಾಂಪ್ರದಾಯಿಕ ಪಕ್ಷ ರಾಜಕೀಯ ಜನ ಸಾಮಾನ್ಯರಿಗೆ ಅಗತ್ಯವಿದೆಯೇ?

Advertisement

ಕಾಂಕ್ರೀಟ್ ರಸ್ತೆ ಮಾಡಿ ಶಾಶ್ವತ ಪರಿಹಾರಕ್ಕೆ ಆಸ್ಪತ್ರೆ ಭೇಟಿ ನೀಡುವ ಸುಳ್ಯದ ಬಡನತೆಯ ಕರುಳಿನ ರೋಧನವಾಗಿದೆ ಖಂಡಿತವಾಗಿಯೂ ಈ ನಿರ್ಲಕ್ಷ್ಯ, ಸಾಮಾಜಿಕ ಆರ್ಥಿಕ ಹಿಂದುಳಿದ ಜನರ ಮೇಲೆ ಶೋಷಣೆಯ ಪ್ರತೀಕವಾಗಿದೆ.

  • ದೀಕ್ಷಿತ್ ಕುಮಾರ್ ಜಯನಗರ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ
June 25, 2026
8:41 PM
by: ಅರುಣ್‌ ಕುಮಾರ್ ಕಾಂಚೋಡು
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror