ಕವನ ಸಂಕಲನ ‘ಉಷಾಕಿರಣ’ ಬಿಡುಗಡೆ

October 7, 2019
6:24 AM

ಸುಳ್ಯ: ಸರಳಿಕುಂಜದಲ್ಲಿರುವ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ಭಾನುವಾರ ಸುಳ್ಯ ಹವ್ಯಕ ವಲಯ ದ ವತಿಯಿಂದ  ಸಂಧ್ಯಾ ಕುಮಾರ್ ಉಬರಡ್ಕ ಅವರ ಸ್ವರಚಿತ ಕವನ ಸಂಕಲನ ‘ಉಷಾಕಿರಣ’ದ ಬಿಡುಗಡೆ ಸಮಾರಂಭವು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಹವ್ಯಕ ವಲಯದ ಅಧ್ಯಕ್ಷ ಈಶ್ವರ ಕುಮಾರ್ ಭಟ್ ವಹಿಸಿದ್ದರು. ಕವನ ಸಂಕಲನ ಬಿಡುಗಡೆ ಮಾಡಿದ ತಾಲುಕು ಕಸಾಪ ಅಧ್ಯಕ್ಷ   ಡಾ| ಹರಪ್ರಸಾದ ತುದಿಯಡ್ಕ  ಮಾತನಾಡಿ ಕವನ ಸಂಕಲನಕ್ಕೆ ಶುಭ ಹಾರೈಸಿ ಸಾಹಿತ್ಯಾಸಕ್ತರನ್ನು ಹುರಿದುಂಬಿಸಿದರು.

ಪ್ರಧಾನ ಭಾಷಣಕಾರರಾದ ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿನ ಉಪನ್ಯಾಸಕ  ರಾಧೇಶ್ ತೋಳ್ಪಾಡಿ, ‘ಉಷಾಕಿರಣ’ದ ಕವನಗಳ ಕಿರುಚಿತ್ರಣ ನೀಡಿ, ವಿಮರ್ಶಿಸಿ ,ಶುಭ ಹಾರೈಸಿದರು. ಮೈತ್ರಿ ಯು. ಇವರು ‘ಉಷಾಕಿರಣ’ ಕವನ ಸಂಕಲನದಿಂದ ಆಯ್ದ ಎರಡು ಕವನಗಳನ್ನು ರಾಗಬದ್ಧವಾಗಿ ಹಾಡಿದರು.

ಮುಖ್ಯ ಅತಿಥಿಗಳಾದ ಪ್ರೊ| ಟಿ. ಶ್ರೀಕೃಷ್ಣಭಟ್  ಕವನ ಸಂಕಲನಕ್ಕೆ ಶುಭ ಕೋರಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕಿ  ಸಂಧ್ಯಾ ಕುಮಾರ್  ಉಪಸ್ಥಿತರಿದ್ದರು.

ಶ್ರುತಿ ಯು. ಪ್ರಾರ್ಥಿಸಿದರು. ವಿಷ್ಣು ಕಿರಣ ನೀರಬಿದ್ರೆ  ಸ್ವಾಗತಿಸಿ, ಗೋಪಾಲಕೃಷ್ಣ ಭಟ್ ಶಿವ ನಿವಾಸ ವಂದಿಸಿದರು. ಶ್ರುತಿ ಹಾಗೂ ಪ್ರೀತಿ ಯು‌ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಮೈಸೂರಿನಲ್ಲಿ ಸೆ. 22 ರಿಂದ ಅಕ್ಟೋಬರ್ 1 ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ
September 20, 2025
7:08 AM
by: The Rural Mirror ಸುದ್ದಿಜಾಲ
ಮಾಗುವುದು ಸಾಧನೆ ಬೀಗುವುದು ಸುಮ್ಮನೆ
September 16, 2025
7:14 AM
by: ದ ರೂರಲ್ ಮಿರರ್.ಕಾಂ
ಕಡಬದ ಸಮ್ಯಕ್ತ್ ಜೈನ್ ಅವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
August 8, 2025
6:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror