ಮಿಡತೆ ಹಾವಳಿ – ರೈತರಿಗೆ ಇಲಾಖೆಗಳಿಂದ ಸಲಹೆ

June 7, 2020
3:26 PM

 

ಮಿಡತೆ ದಾಳಿ ಬಗ್ಗೆ ಕೃಷಿ ಇಲಾಖೆ ಹೀಗೆ ಸಲಹೆ ನೀಡುತ್ತದೆ….

Advertisement

ಮಿಡತೆ ಕೀಟ ಹಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ  ಕಾಣಿಸಿಕೊಂಡಿರುತ್ತದೆ ಹಾಗೂ ಕಾಣಿಸಿಕೊಂಡ ಮಿಡತೆಗಳು ಮರುಭೂವಿಯಲ್ಲಿ ಕಂಡುಬಂದ ಮಿಡತೆಗಳು ಆಗಿರುವುದಿಲ್ಲ. ಮಿಡತೆಗಳು ಬೆಳೆಗೆ ಹಾನಿ ಮಾಡಿದಲ್ಲಿ ಅವುಗಳ ನಿಯಂತ್ರಣಕ್ಕಾಗಿ,  ಕೀಟವು ಬೆಳೆಗಳಲ್ಲಿ ಕಂಡುಬಂದಲ್ಲಿ, ಡ್ರಮ್‍ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ದವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸಬಹುದು.

ಬೇವಿನ ಮೂಲದ ಕೀಟನಾಶಕಗಳನ್ನು (0.15% ಇ.ಸಿ @3ಎಂ.ಎಲ್/ಲೀ) ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟವು ಬೆಳೆ ಹಾನಿ ಮಾಡುವುದು ಕಡಿಮೆಯಾಗುತ್ತದೆ. ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು.

Advertisement

ಕೀಟವು ಮರಿಹುಳುವಾಗಿದ್ದಲ್ಲಿ ಬಾಧಿತ ಪ್ರದೇಶ ಕನಿಷ್ಟ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸಬಹುದು. ಮಿಡತೆ ಹಗಲಿನಲ್ಲಿ ಚಲಿಸಿ ರಾತ್ರಿ ವೇಳೆ ಮರಗಿಡಗಳ ಮೇಲೆ ಆಶ್ರಯ ಪಡೆಯುವುದರಿಂದ ಟ್ರ್ಯಾಕ್ಟರ್ ಮೌಂಟೆಡ್‍ ಜೆಟ್ ಸ್ಪ್ರೇಯರ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು.ಆದರೆ ಈ ಕೀಟನಾಶಕಗಳನ್ನು ಜಲಮೂಲಗಳ ಸಮೀಪ ಸಿಂಪಡಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ.

ಬೆಳೆಯ ಅಥವಾ ಮರಗಳ ಮೇಲೆ ಮರುಭೂಮಿ ಮಿಡತೆ ಕಂಡುಬಂದಲ್ಲಿ ಕೀಟನಾಶಕ ಕ್ಲೊರೋಪೈರಿಪಾಸ್ 20%  ಪ್ರತೀ ಹೆಕ್ಟರ್ ಗೆ 1.2 ಲೀ, ಕೀಟನಾಶಕ ಕ್ಲೊರೋಪೈರಿಪಾಸ್ 50%  ಪ್ರತೀ ಹೆಕ್ಟರ್ ಗೆ 480 ಎಂ.ಎಲ್, ಕೀಟನಾಶ ಕಡೆಲ್ಟಮೆಥ್ರಿನ್ 2.8 ಪ್ರತಿ ಹೆಕ್ಟೇರ್ ಗೆ 450 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 5% ಎಸ್.ಸಿ ಪ್ರತಿ ಹೆಕ್ಟೇರ್ ಗೆ 125 ಎಂ.ಎಲ್, ಕೀಟನಾಶಕ ಫಿಪ್ರೋನಿಲ್ 2.8% ಇ.ಸಿ ಪ್ರತಿ ಹೆಕ್ಟೇರ್ ಗೆ 225 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 5.0% ಇ.ಸಿ.ಪ್ರತಿಹೆಕ್ಟೇರ್ ಗೆ 400 ಎಂ.ಎಲ್, ಕೀಟನಾಶ ಕಲಾಮ್ಡಾ ಸಹಲೋಥ್ರಿನ್ 10.0%  ಡಬ್ಲ್ಯೂಪಿ ಪ್ರತಿ ಹೆಕ್ಟೇರ್ ಗೆ 200 ಗ್ರಾಂ, ಕೀಟನಾಶಕ ಮಲಾಥಿಯಾನ್ 50% ಇ.ಸಿ.ಪ್ರತಿ ಹೆಕ್ಟೇರ್‍ ಗೆ 1.85 ಲೀ, ಕೀಟನಾಶಕ ಮಲಾಥಿಯಾನ್ 25% ಡಬ್ಲ್ಯೂಪಿ ಪ್ರತಿ ಹೆಕ್ಟೇರ್‍ ಗೆ 3.7 ಕಿ.ಗ್ರಾಂ ಕೀಟನಾಶಕಗಳನ್ನು ಬಳಸಿ ಹತೋಟಿ ಮಾಡಬಹುದು ಎಂದು ಪ್ರಕಟಣೆ ತಿಳಿಸುತ್ತದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ
June 28, 2026
6:57 AM
by: ದ ರೂರಲ್ ಮಿರರ್.ಕಾಂ
ಹಲಸು ಈಗ ಕೇವಲ ಹಣ್ಣು ಅಲ್ಲ… ಸೂಪರ್ ಫುಡ್..!‌ ಹಲಸಿನ ಹಣ್ಣಿನ ಔಷಧೀಯ ಗುಣಗಳಿಗೆ ಕೇರಳದಲ್ಲಿ ಪ್ರಚಾರ ಅಭಿಯಾನ
June 26, 2026
1:15 PM
by: ದ ರೂರಲ್ ಮಿರರ್.ಕಾಂ
ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ
June 25, 2026
8:17 PM
by: ದ ರೂರಲ್ ಮಿರರ್.ಕಾಂ
ಎಲ್ ನಿನೋ ಎಚ್ಚರಿಕೆ – ದೇಶದಲ್ಲಿ 43% ಮಳೆ ಕೊರತೆ, ಕರ್ನಾಟಕ ಸೇರಿ 12 ರಾಜ್ಯಗಳ 315 ಜಿಲ್ಲೆಗಳಿಗೆ ಕೇಂದ್ರದ ವಿಶೇಷ ಕೃಷಿ ಯೋಜನೆ
June 25, 2026
7:34 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror