ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧ್ಯವಾಗಿಲ್ಲ: ಇಸ್ರೋ ಅಧ್ಯಕ್ಷ ಶಿವನ್

September 21, 2019
7:32 PM

ಭುವನೇಶ್ವರ: ಚಂದ್ರನ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್​ ಜತೆ ಇದುವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ವಿಕ್ರಂ ಲ್ಯಾಂಡರ್​ನ 14 ದಿನಗಳ ಜೀವಿತಾವಧಿ ಶನಿವಾರ ಮುಕ್ತಾಯಗೊಂಡಿದೆ. ಹಾಗಾಗಿ ಇಸ್ರೋ ಗಗನಯಾನ ಯೋಜನೆ ಮೇಲೆ ಹೆಚ್ಚಿನ ಒತ್ತು ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್​ ತಿಳಿಸಿದ್ದಾರೆ.

ಐಐಟಿ ಭುವನೇಶ್ವರದ 8 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶಿವನ್,​ ಚಂದ್ರಯಾನ 2 ಆರ್ಬಿಟರ್​ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿರುವ 8 ಉಪಕರಣಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಚಂದ್ರಯಾನ 2 ಯೋಜನೆ ಶೇ. 98 ರಷ್ಟು ಯಶಸ್ವಿಯಾಗಿದೆ. ಚಂದ್ರಯಾನ 2 ಯೋಜನೆ ಯಶಸ್ವಿಯಾಗಿರುವುದಕ್ಕೆ 2 ಕಾರಣಗಳಿವೆ. ಅದರಲ್ಲಿ ಮೊದಲನೆಯದು ವಿಜ್ಞಾನ ಮತ್ತು ಎರಡನೆಯದು ತಂತ್ರಜ್ಞಾನಗಳ ಪ್ರದರ್ಶನ. ತಂತ್ರಜ್ಞಾನದ ಬಳಕೆಯಲ್ಲಿ ಯಶಸ್ಸಿನ ಪ್ರಮಾಣ ಪೂರ್ಣವಾಗಿದೆ ಎಂದು ತಿಳಿಸಿದರು.

ಇಸ್ರೋದ ಭವಿಷ್ಯದ ಯೋಜನೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ವರ್ಷ ಗಗನಯಾನ ಯೋಜನೆಯನ್ನು ಯಶಸ್ವಿಗೊಳಿಸುವುದು ನಮ್ಮ ಮುಂದಿನ ಗುರಿ. ಹಾಗಾಗಿ ಮೊದಲಿಗೆ ಲ್ಯಾಂಡರ್​ಗೆ ಏನಾಗಿದೆ? ಅದು ಸಂಪರ್ಕ ಕಡಿದುಕೊಂಡಿದ್ದು ಏಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ರಾಷ್ಟ್ರಮಟ್ಟದ ಸಮಿತಿ ಮತ್ತು ಇಸ್ರೋದ ತಜ್ಞರು ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಳ್ಳಲು ಕಾರಣ ಏನು ಎಂಬುದನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದರು.

ಶನಿವಾರ ಬೆಳಗ್ಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾರ್​ ನೈಟ್​ ಪ್ರಾರಂಭವಾಗಿದೆ. ಇದೇ ಪ್ರದೇಶದಲ್ಲಿ ವಿಕ್ರಂ ಲ್ಯಾಂಡರ್​ ಸೆ. 7 ರಂದು ಇಳಿದಿತ್ತು. ಲೂನಾರ್​ ನೈಟ್​ ಆರಂಭವಾಗಿರುವುದರಿಂದ ಇಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಕ್ರಂ ಲ್ಯಾಂಡರ್​ ವಿದ್ಯುತ್​ ಉತ್ಪಾದಿಸಲು ಸಾಧ್ಯವಿಲ್ಲ. ಜತೆಗೆ ಲೂನಾರ್​ ನೈಟ್​ ಸಂದರ್ಭದಲ್ಲಿ ದಕ್ಷಿಣ ಧ್ರುವದಲ್ಲಿ ತಾಪಮಾನ ಮೈನಸ್​ 200 ಡಿಗ್ರಿಗಿಂತ ಕಡಿಮೆಯಾಗುತ್ತದೆ. ಇಷ್ಟು ಕಡಿಮೆ ತಾಪಮಾನದಲ್ಲಿ ಲ್ಯಾಂಡರ್​ನಲ್ಲಿರುವ ಉಪಕರಣಗಳು ಚಳಿಯಿಂದ ನಿಷ್ಕ್ರಿಯಗೊಳ್ಳಲಿವೆ ಎಂದು ಕೆ. ಶಿವನ್​ ಈ ಮೊದಲೇ ತಿಳಿಸಿದ್ದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ
ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು
August 10, 2026
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ
August 9, 2026
12:36 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror