ಸುಳ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಡಿಕೆ , ಕೊಕೋವನ್ನು ಕ್ಯಾಂಪ್ಕೋ ಸಂಸ್ಥೆ ಹಾಗೂ ಗೇರು ಬೀಜವನ್ನು ಸಹಕಾರಿ ಸಂಸ್ಥೆಗಳು ಖರೀದಿ ಮಾಡಲು ದಕ ಜಿಲ್ಲಾಡಳಿತ ಜವಾಬ್ದಾರಿ ವಹಿಸಿಕೊಟ್ಟಿರುದು ಶ್ಲಾಘನೀಯ. ಈ ಮೂಲಕ ಖರೀದಿ ಮಾಡುತ್ತಿರುವುದೂ ಅಭಿನಂದನೀಯ. ಆದರೆ ಅಡಿಕೆಗೆ 250 ರೂಪಾಯಿ ಹಾಗೂ ಗೇರುಬೀಜಕ್ಕೆ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ನಿರ್ಧರಿಸಿತ್ತು. ಆದರೆ ಇಂದು ಅದೇ ಎಪಿಎಂಸಿ ಯಾರ್ಡ್ ನಲ್ಲಿ ಖಾಸಗಿ ವ್ಯಾಪಾರಿಗಳು ಅಡಿಕೆ ಹಾಗೂ ಕೊಕೋ, ಗೇರುಬೀಜ ಉತ್ತಮ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಅಡಿಕೆ ಬೆಳೆಗಾರರಿಗೆ ಧಾರಣೆಯಲ್ಲೂ ಲಾಕ್ಡೌನ್ ಇದೆಯೇ ಎಂದು ಕಾಂಗ್ರೆಸ್ ಮುಖಂಡ ವೆಂಕಪ್ಪ ಗೌಡ ಹೇಳಿದ್ದಾರೆ.
ಈ ಹಿಂದೆ ಅಡಿಕೆ ಕೆಜಿಗೆ 250 ರೂಪಾಯಿಗೆ ಕಡಿಮೆಯಾಗದಂತೆ ಹಾಗೂ ಗೇರುಬೀಜ 70 ರೂಪಾಯಿಗೆ ಕಡಿಮೆಯಾಗದಂತೆ ಖರೀದಿ ಮಾಡಲು ಈ ಹಿಂದೆ ಸಂಸ್ಥೆಗಳು ನಿರ್ಧರಿಸಿತ್ತು. ಇಂದು ಸುಳ್ಯ ಎಪಿಎಂಸಿ ಯಾರ್ಡ್ ನಲ್ಲಿ ಕ್ಯಾಂಪ್ಕೋ ಅಡಿಕೆಗೆ 250 – 255 ರೂಪಾಯಿ ದರಲ್ಲಿ ಖರೀದಿ ಮಾಡಿದರೆ ಅದೇ ಯಾರ್ಡನಲ್ಲಿದ್ದ ಖಾಸಗಿ ವ್ಯಾಪಾರಿಗಳು 265 ರೂಪಾಯಿಗೆ ಖರೀದಿ ಮಾಡುತ್ತಿದ್ದಾರೆ. ಅದೇ ರೀತಿ ಗೇರು ಬೀಜಕ್ಕೆ ರೂ 85 ಕ್ಕೆ ಖರೀದಿ ಮಾಡಲಾಗುತ್ತಿದೆ.ಇದಕ್ಕೆ ರೈತಾಪಿ ವರ್ಗದವರು ಏನು ಹೇಳಬೇಕು ?. ಇದೂ ಲಾಕ್ಡೌನ್ ? ಎಂದು ಪ್ರಶ್ನಿಸಿದ್ದಾರೆ.
ಇದೆಲ್ಲಾ ಇದ್ದರೂ ಜನಪ್ರತಿನಿಧಿಗಳು ಇದಕ್ಕೂ ಅವರಿಗೂ ಸಂಬಂಧವೇ ಇಲ್ಲದಂತೆ ಕೂತಿರುದು ಸರಿಯೇ ?. ಇದೊಂದು ಸರಕಾರೀ ಸಂಸ್ಥೆಯಾಗಿದ್ದು ರೈತರನ್ನು ದರೋಡೆ ಮಾಡಿದಂತೆ ಅಲ್ವೇ ? ಬೆಳೆಗಾರರಿಗೆ ಮಾಡುವ ಅನ್ಯಾಯ ಅಲ್ಲವೇ ? ವಾರಾಣಸಿ ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ಅಂದು ಹುಟ್ಟು ಹಾಕಿದ ಸಂಸ್ಥೆಯ ಉದ್ದೇಶ ರೈತ ಸಂಕಷ್ಟದಲ್ಲಿದ್ದಾಗ ಅವನ ಸಹಾಯಕ್ಕೆ ಧಾವಿಸಬೇಕು ಎಂಬುದಾಗಿತ್ತು. ಆದರೆ ಈಗಿನ ಆಡಳಿತದಲ್ಲಿ ಅದರ ಧ್ಯೇಯೋದ್ದೇಶ ಬದಲಾಯಿತೇ ? ಈ ಸಂಕಷ್ಟ ಕಾಲದಲ್ಲೂ ರೈತರ ಶೋಷಣೆಯೇ ? ಇದನ್ನು ಕೇಳುವ ಸ್ವಭಾವದ ಜನಪ್ರತಿನಿಧಿಗಳು ಸುಳ್ಯಕ್ಕೆ ಇಲ್ಲದಂತಾಗಿರುದು ನಮ್ಮ ದುರಂತವೇ ಸರಿ ಎಂದು ವೆಂಕಪ್ಪ ಗೌಡ ಹೇಳಿದ್ದಾರೆ.
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…